15 ಕೋಟಿ ರೂ. ಬೆಲೆಯ ಕಡಲೆ ಕಾಳಿಗೆ ಹುಳು ಕಾಟ : ಉಗ್ರಾಣದಲ್ಲೇ ಹಾಳಾಗುತ್ತಿದೆ 3,330 ಮೆಟ್ರಿಕ್ ಟನ್ ಕಡಲೆ

ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ (ನಾಫೇಡ್) ಸಂಸ್ಥೆಯ ಕಡಲೆ ಖರೀದಿ ಮಾಡಲಾಗಿದೆ.

ಉಗ್ರಾಣ

ಉಗ್ರಾಣ

  • Share this:
ಧಾರವಾಡ (ಅ. 12) : ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಇದ್ದಾಗ ಕೇಂದ್ರ ಸರಕಾರ ಬೆಂಬಲ ಬೆಲೆಯಡಿ ರೈತರಿಂದ ಬೆಳೆಗನ್ನು ಖರೀದಿಸುತ್ತದೆ. ಹೀಗೆ ಖರೀದಿಸಿದ ಬೆಳೆಗಳನ್ನು ಸರಕಾರದ ಉಗ್ರಾಣದಲ್ಲಿ ಇಡುತ್ತದೆ. ಅವಶ್ಯಕತೆ ಬಿದ್ದಾಗ ಉಗ್ರಾಣದಿಂದ ಅದನ್ನು ಬಳಸಿಕೊಳ್ಳುತ್ತದೆ. ಆದರೆ ಧಾರವಾಡದಲ್ಲಿ ಆಗಿದ್ದೇ ಬೇರೆ. ರೈತರಿಂದ ಖರೀದಿಸಿದ್ದ ಕಡಲೆ ಕಾಳು ಉಗ್ರಾಣದಲ್ಲಿ ಹಾಗೆಯೇ ಬಿದ್ದಿದ್ದರಿಂದ ಇದೀಗ ಸಾವಿರಾರು ಟನ್ ಕಾಳಿಗೆ ಹುಳ ಹಿಡಿದಿವೆ. ಹೌದು ಇದು ಧಾರವಾಡದ ರಾಯಾಪುರ ಬಡಾವಣೆಯಲ್ಲಿರೋ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಕಡಲೆ ಕಾಳಿಗೆ ಹುಳು ಹತ್ತಿದೆ.

ಉಗ್ರಾಣದಲ್ಲಿಯೇ ಕೊಳೆಯುತ್ತಿದೆ ಕಾಳುಗಳು

ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಸರಕಾರ 2019-20 ರಲ್ಲಿ ರೈತರಿಂದ ಬೆಂಬಲ ಬೆಲೆಯಡಿ ಕಡಲೆ ಬೀಜವನ್ನು ಖರೀದಿಸಲಾಗಿತ್ತು. ಹೀಗೆ ಖರೀದಿಸಿದ್ದ 3330 ಮೆಟ್ರಿಕ್ ಟನ್ ಕಡಲೆ ಕಾಳನ್ನು ಈ ಉಗ್ರಾಣದಲ್ಲಿ ಇಡಲಾಗಿದೆ. ಹೀಗೆ ಇಡಲಾಗಿರೋ ಕಾಳಿನ ಮೇಲೆ ಕೇಂದ್ರ ಸರಕಾರದ್ದೇ ಅಧಿಕಾರವಿರುತ್ತದೆ. ಆದರೆ ಇಲ್ಲಿ ತಂದು ಹಾಕಿರೋ ಕಡಲೆ ಕಾಳಿಗೆ ಇದೀಗ ಹುಳು ಹಿಡಿದಿದೆ. ಆದರೆ ಇದುವರೆಗೂ ಸರಕಾರ ಮಾತ್ರ ಇತ್ತ ನೋಡುತ್ತಲೇ ಇಲ್ಲ. ಸುಮಾರು 15 ಕೋಟಿ ರೂಪಾಯಿ ಬೆಲೆಯ ಕಡಲೆ ಕಾಳಿಗೆ ಹುಳುಗಳು ಮುತ್ತಿಕೊಂಡಿದ್ದು, ದಿನದಿಂದ ದಿನಕ್ಕೆ ಎಲ್ಲ ಕಾಳುಗಳು ಹಾಳಾಗಿ ಹೋಗುತ್ತಿವೆ.

18 ತಿಂಗಳಿನಿಂದ ಉಗ್ರಾಣದಲ್ಲಿ ಇವೆ ಕಡಲೇ ಕಾಳು

ಈ ಬಗ್ಗೆ ಉಗ್ರಾಣದ ವ್ಯವಸ್ಥಾಪಕರಾದ ಶಿವಾನಂದ ಪಾಟೀಲ್ ಅವರನ್ನು ಕೇಳಿದ್ರೆ ಅವರು ಹೋಳೊದೆ ಬೇರೆ. ಕಡಲೆ ಕಾಳಿಗೆ  ಇಷ್ಟೆಲ್ಲಾ ಹುಳ ಹತ್ತಿದರೂ ಎಲ್ಲವೂ ಚೆನ್ನಾಗಿದೆ ಅಂತಿದ್ದಾರೆ. ಆದರೆ ಉಗ್ರಾಣದಲ್ಲಿ 90 ದಿನಗಳ ಕಾಲ ಇಡಬಹುದು. ಆದ್ರೆ ಕಳೆದ 18 ತಿಂಗಳಿನಿಂದ‌ ಇಲ್ಲೇ ಇವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನು್ತಿದ್ದಾರೆ.

ಈಗಾಗಲೇ ಈ ಬಗ್ಗೆ ಉಗ್ರಾಣ ನಿಗಮದ ಅಧಿಕಾರಿಗಳು ರಾಷ್ಟ್ರೀಯ ಕೃಷಿ ಮಾರಾಟ ಸಹಕಾರ ಮಹಾಮಂಡಳಿಗೆ ಹಕವು ಬಾರಿ ನೋಟಿಸ್ ನೀಡಿದ್ದಾರೆ. ಆದರೆ ಅತ್ತ ಕಡೆಯಿಂದ ಯಾವುದೇ ಉತ್ತರವೇ ಬಂದಿಲ್ಲ. ಹೀಗಾಗಿ ಉಗ್ರಾಣದಲ್ಲಿರೋ ಎಲ್ಲ ಕಡಲೆ ಕಾಳು ಹುಳುಗಳಿಗೆ ಆಹಾರವಾಗಿ ಹೋಗೋದೇ ಗ್ಯಾರಂಟಿಯಾಗಿದೆ.

ಇದನ್ನು ಓದಿ: ದಸರಾ ಸಂಭ್ರಮ: ಆಯುಧ ಪೂಜೆಯಂದು ಸಾರಿಗೆ ಬಸ್​ಗಳಿಗೆ ಪೂಜೆಗೆ ಸಚಿವರ ಆದೇಶ

ಅಧಿಕಾರದಿಂದ ನುಣುಚಿಕೊಳ್ಳುವ ಕೆಲಸ

ಉಗ್ರಾಣದಲ್ಲಿ ಇಟ್ಟ ಕಾಳುಗಳು ಕೆಡದಂತೆ ರಕ್ಷಣೆ ಮಾಡಬೇಕಾಗಿದ್ದು ಮೂರು ತಿಂಗಳವರೆಗೆ ಮಾತ್ರವಂತೆ. ಅದಕ್ಕಿಂತ ಹೆಚ್ಚಿಗೆ ಇಟ್ಟಾಗ ಕೆಟ್ಟರೆ ಅದಕ್ಕೆ ಇವರು ಜವಾಬ್ದಾರರಲ್ಲವಂತೆ. ಅದಕ್ಕೆಲ್ಲಾ ರಾಷ್ಟ್ರೀಯ ಕೃಷಿ ಮಾರಾಟ ಸಹಕಾರ ಮಹಾಮಂಡಳಿಯ ಜವಾಬ್ದಾರಿ ಅನ್ನೋದು ಉಗ್ರಾಣದ ಸಿಬ್ಬಂದಿಯ ರಾಜಾಖಾನ್ ಹೇಳಿತ್ತಿದ್ದಾರೆ.

ಇದನ್ನು ಓದಿ: ದಸರಾದಂದು ಪುತ್ತೂರು ಪೇಟೆಯಲ್ಲಿ ಹಾಡುಹಗಲೇ ಪ್ರತ್ಯಕ್ಷವಾಗುತ್ತೆ ಈ ಪ್ರೇತ

ಆಗಬೇಕಿದೆ ಶೀಘ್ರ ವಿಲೇವಾರಿ

ಈ ಕಡಲೆ ಕಾಳನ್ನು ಬಳಸಿಕೊಳ್ಳದೇ ಹೀಗೆಯೇ ಬಿಟ್ಟರೆ ಇನ್ನೂ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಹಾಳಾಗಿ ಹೋಗಲಿದೆ. ಇದರಿಂದಾಗಿ ಸರಕಾರಕ್ಕೆ ದೊಡ್ಡ ನಷ್ಟ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಈ ಕಡೆಗೆ ಗಮನ ಹರಿಸಿ, ಹುಳುಗಳಿಂದ ಕಡಲೆ ಕಾಳಿಗೆ ಮುಕ್ತಿ ಕೊಡಿಸಬೇಕಿದೆ.
Published by:Seema R
First published: