ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ (Chikkamagaluru Rainfall) ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತಸವ್ಯಸ್ತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು (Rivers) ಅಪಾಯಮಟ್ಟದಲ್ಲೇ ಹರಿಯುತ್ತಿವೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಕಳಸ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬಾರದಂತಾಗಿದೆ. ಕೃಷಿ ಚಟುವಟಿಕೆಗೂ (Agriculture Activity) ಹಿನ್ನಡೆಯಾಗಿದೆ. ನಿರಂತರ ಮಳೆಗೆ ಅಲ್ಲಲ್ಲಿ ಗುಡ್ಡಕುಸಿತ ಉಂಟಾಗಿದೆ. ರಸ್ತೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬ (Electric Poles), ಮರಗಳು ಧರೆಗುರುಳಿವೆ. ಕೆಲವು ಗ್ರಾಮಗಳು ಸಂಪರ್ಕವನ್ನು ಕಡಿದುಕೊಂಡಿವೆ. ಅನೇಕ ಮನೆಗಳು ಧರೆಗುರುಳಿ ಬಿದ್ದಿವೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜನರು ರೋಸಿ ಹೋಗಿದ್ದಾರೆ.
ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆ ಯಾಗಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮೋಡ ಕವಿದ ವಾತವರಣ ಮುಂ ದೂವರೆದಿದ್ದು ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಮಳೆ ಹಾನಿ
ಶುಕ್ರವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿದೆ. 4 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 12 ಮನೆಗಳಿಗೆ ಶೇ.25ರಿಂದ 75 ರಷ್ಟು ಹಾನಿಯಾಗಿದೆ. 19 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ.
ಇದನ್ನೂ ಓದಿ: Kodagu Rains: ತೋಟ, ಗದ್ದೆಗಳು ಜಲಾವೃತ; ರಸ್ತೆಗಳ ಮೇಲೆ ಹರಿಯುತ್ತಿರುವ ಕಾವೇರಿ ಪ್ರವಾಹ
ಜೂನ್ ತಿಂಗಳಿಂದ ಇಲ್ಲಿವರೆಗೂ ಜಿಲ್ಲೆಯಲ್ಲಿ ಮಳೆಯಿಂದ 328 ಮನೆಗಳಿಗೆ ಹಾನಿಯಾಗಿದೆ. 44 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 97 ಮನೆಗಳಿಗೆ ಶೇ.25ರಿಂದ 75ರಷ್ಟು ಹಾನಿಯಾಗಿದೆ.
187 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. 13 ಗುಡಿಸಲು ಹಾನಿಯಾಗಿದೆ. ಮಳೆಯಿಂದ ಓರ್ವ ಮಹಿಳೆ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ.
ಮೂಕ ಪ್ರಾಣಿಗಳಿಗೂ ಮಳೆ ಸಂಕಟ
ಜಿಲ್ಲೆಯಾದ್ಯಂತ ಅಬ್ಬರಿಸುತ್ತಿರುವ ಮಳೆಗೆ ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಳ್ಳು ತ್ತಿವೆ. ಮೇವನ್ನು ಅರಸಿ ಹಸುಗಳು ಹೊಳೆ ಸಾಲಿನಲ್ಲಿ ಮೇಯಲು ಹೋಗುತ್ತಿದ್ದು, ತುಂಬಿ ಹರಿಯುತ್ತಿರುವ ನದಿಗಳಿಗೆ ಬಿದ್ದು ಸಾವನಪ್ಪುತ್ತಿವೆ. ಇದನ್ನು ಸಾಕ್ಷಿಕರಿಸುವಂತೆ ಶನಿವಾರ ಭದ್ರಾನದಿಯಲ್ಲಿ ಹಸುವಿನ ಮೃತದೇವೊಂದು ತೇಲಿಬಂದು ಹೆಬ್ಬಾಳೆ ಸೇತುವೆ ಮೇಲೆ ಬಿದ್ದಿದೆ. ನಿರಂತರ ಮಳೆಗೆ ಮೂಖ ಪ್ರಾಣಿಗಳು ತಂಡಿ ರೋಗಕ್ಕೆ ತುತ್ತಾಗುತ್ತಿವೆ.
ಭದ್ರಾ ನದಿಯಲ್ಲಿ ತೇಲಿಬಂದ ಮಹಿಳೆ ಮೃತದೇಹ
ಮಲೆನಾಡು ಭಾಗದಲ್ಲಿ ಹರಿಯುವ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ತುಂಬಿ ಹರಿಯುವ ನದಿಯಲ್ಲಿ ಮಹಿಳೆಯೊಬ್ಬರ ದೇಹ ತೇಲಿ ಬರುತ್ತಿದ್ದು ಅದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕು ಬಿಕ್ಕರಣೆ ಗ್ರಾಮದಲ್ಲಿ ಹರಿಯುವ ಭದ್ರಾನದಿಯಲ್ಲಿ ಮಹಿಳೆ ಯೊಬ್ಬರ ಮೃತದೇಹ ತೇಲಿ ಬಂದಿದೆ. ಮೃತದೇಹವನ್ನು ಕಂಡ ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದು ಯಾರ ಮೃತದೇಹವೆಂದು ಇನ್ನಷ್ಟೇ ಪತ್ತೆ ಯಾಗಬೇಕಿದೆ.
ಪರಿಹಾರದ ಚೆಕ್ ವಿತರಣೆ
ಮೂಡಿಗೆರೆ ತಾಲ್ಲೂಕು ಹೋಯ್ಸಳಲು ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ಬಿದ್ದ ಸ್ಥಳಕ್ಕೆ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೂಡಿಗೆರೆ ಕ್ಷೇತ್ರವ್ಯಾಪ್ತಿಯಲ್ಲಿ ಮಳೆಯಿಂದ ಮನೆ ಹಾನಿಯಾಗಿದೆ. ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರಾಜ್ಯ ಸರ್ಕಾರ ಮಳೆಯಿಂದ ಸಂಕಷ್ಟಕ್ಕೊಳಗಾದವರ ನೆರೆವಿಗೆ ತಕ್ಷಣ ದಾವಿಸುವಂತೆ 500 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Hubballi: ಮಳೆಯಿಂದ ರಾಜ್ಯದಲ್ಲಿ ತೀವ್ರ ಹಾನಿ! ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ವರದಿ
ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹೊಯ್ಸ ಳಲು ಗ್ರಾಮದಲ್ಲಿ ಸ್ಮಶಾನ ಇಲ್ಲದಿವರುವ ಬಗ್ಗೆ ಗಮನಕ್ಕೆ ತಂದಿದ್ದು, ಜಾಗ ಗುರುತಿಸಿ ಸ್ಮಶಾನ ನಿರ್ಮಾಣ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಳೆಯಿಂದ ಮನೆ, ರಸ್ತೆ ಹಾಳಾಗಿವೆ. ಸೇತುವೆಗಳು ಹಾನಿಯಾಗಿದೆ ಇದೆಲ್ಲವನ್ನು ಪರಿಶೀಲನೆ ನಡೆಸಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ಹೆಚ್ಚಿನ ಪರಿಹಾರವನ್ನು ಜಿಲ್ಲೆಗೆ ತರುವಲ್ಲಿ ಶ್ರಮಿಸುವುದಾಗಿ ತಿಳಿದರು.
ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ಪರಿಹಾರ
ಮನೆ ಕಳೆದುಕೊಂಡ ಗ್ರಾಮದ ಸೀತಮ್ಮ, ಸುರೇಶ್ ಹಾಗೂ ಕಾಂತಮಣಿ ಅವರಿಗೆ ಸಚಿವರು 95,100 ರೂ. ಪರಿಹಾರದ ಚೆಕ್ ವಿತರಿಸಿದರು. ಸಂಪೂರ್ಣ ಮನೆ ಕಳೆದುಕೊಂಡ ವರಿಗೆ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರ 5 ಲಕ್ಷ ರೂ. ಹಣ ನೀಡಲಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ