Ration Cards: 324 ಸರ್ಕಾರಿ ನೌಕರರಿಂದ BPL ಕಾರ್ಡ್ ಬಳಕೆ, ಒಂದೇ ಸಲಕ್ಕೆ ಬಿತ್ತು ಲಕ್ಷ ಲಕ್ಷ ದಂಡ

ಬಿಪಿಎಲ್ ಕಾರ್ಡ್ ದೇಶದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕಾರ್ಡಿದು. ಏಕೆಂದರೆ ಈ ಕಾರ್ಡ್ ಹೊಂದಿದವರಿಗೆ ಅನೇಕ ಯೋಜನೆಗಳು ಉಚಿತವಾಗಿ ಸಿಗುತ್ತವೆ. ಅಲ್ಲದೇ ಪುಕ್ಕಟೆ ಸೌಲಭ್ಯಗಳೂ ಸಹ ಸಿಗುತ್ತವೆ. ಹೀಗಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಳ್ಳಲು ಜನರು ಹಗಲು-ರಾತ್ರಿ ಅನ್ನದೇ ಆಧಾರ್, ಬಿಪಿಎಲ್ ಕಾರ್ಡುಗಳ ಕೇಂದ್ರದ ಹೊರಗೆ ದಿನಗಟ್ಟಲೇ ಕಾಯುತ್ತಾರೆ.

ಸಾಂಧರ್ಭಿಕ ಚಿತ್ರ

ಸಾಂಧರ್ಭಿಕ ಚಿತ್ರ

  • Share this:
ಧಾರವಾಡ(ಏ.02) : ಬಡತನ ರೇಖೆಗಿಂತ ಕೆಳಗಿರೋ ಜನರಿಗಾಗಿ ಸರಕಾರಗಳು ಅನೇಕ ಯೋಜನೆಯನ್ನು ರೂಪಿಸುತ್ತಲೇ ಇರುತ್ತವೆ. ಅಂಥ ಜನರು ನೆಮ್ಮದಿಯಿಂದ ಇರಲಿ ಅನ್ನೋ ಕಾರಣಕ್ಕೆ ಬಗೆ ಬಗೆಯ ಯೋಜನೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಆದರೆ ಈ ಯೋಜನೆಗಳ ದುರುಪಯೋಗಕ್ಕೆ ಧಾರವಾಡದಲ್ಲಿಯೇ ನೂರಾರು ಸರ್ಕಾರಿ‌ ಇಲಾಖೆಯ (Government Departments) ಸಿಬ್ಬಂದಿಗಳೆ ಅಂತ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದರು. ಇದೀಗ ಅಂಥವರನ್ನು ಹುಡುಕಿ ಹುಡುಕಿ ಹೊರ ತೆಗೆಯಲಾಗುತ್ತಿದು, ಅಷ್ಟೇ ಅಲ್ಲ ಅವರಿಗೆ ದಂಡ ಸಹ ಹಾಕಲಾಗಿದೆ. ಹಾಗಾದ್ರೆ ಯಾವ ಯೋಜನೆ, ಯಾರು ಆ ಸಿಬ್ಬಂದಿಗಳು ಅಂತೀರಾ? ಇಲ್ಲಿ ಓದಿ

ಬಿಪಿಎಲ್ ಕಾರ್ಡ್ (BPL Card) ದೇಶದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕಾರ್ಡಿದು. ಏಕೆಂದರೆ ಈ ಕಾರ್ಡ್ ಹೊಂದಿದವರಿಗೆ ಅನೇಕ ಯೋಜನೆಗಳು ಉಚಿತವಾಗಿ (Free) ಸಿಗುತ್ತವೆ. ಅಲ್ಲದೇ ಪುಕ್ಕಟೆ ಸೌಲಭ್ಯಗಳೂ (Facility) ಸಹ ಸಿಗುತ್ತವೆ. ಹೀಗಾಗಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಳ್ಳಲು ಜನರು ಹಗಲು-ರಾತ್ರಿ ಅನ್ನದೇ ಆಧಾರ್, ಬಿಪಿಎಲ್ ಕಾರ್ಡುಗಳ ಕೇಂದ್ರದ ಹೊರಗೆ ದಿನಗಟ್ಟಲೇ ಕಾಯುತ್ತಾರೆ.

324 ಜನ ಸರಕಾರಿ ನೌಕರರು ಪತ್ತೆ

ಆದರೆ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆದದ್ದು ಸರ್ಕಾರಿ ಇಲಾಖೆಯ ಸಿಬ್ಬಂದಿಗಳು ಸಹ ಇದ್ದಾರೆ. ಸರ್ಕಾರಿ ಕೆಲಸ ಹೊಂದಿದರು ಕೂಡ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಮಾಡಿಸಿಕೊಂಡು ಸರಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿದ್ದಾರೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ಪಡಿತರ ಚೀಟಿ ಹೊಂದಿರುವುದು 324 ಜನ ಸರಕಾರಿ ನೌಕರರು ಪತ್ತೆಯಾಗಿದ್ದಾರೆ.

ಬಡವರ ಸೌಲಭ್ಯ ಸರ್ಕಾರಿ ನೌಕರರಿಗೆ

ಸರ್ಕಾರಿ ಇಲಾಖೆಯಲ್ಲಿಯೇ‌ ಇದ್ದು ಕೂಡ ಬಡವರಿಗೆ ನೀಡಬೇಕಿದ್ದ ಯೋಜನೆಯ ಲಾಭವನ್ನು ಸರ್ಕಾರಿ ಸಿಬ್ಬಂದಿಗಳು ಪಡೆದುಕೊಂಡಿದ್ದು ಸರಿ ಅಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡುತ್ತಾರೆ ಸ್ಥಳೀಯರಾದ ಮೋಹನ ಅರಕಸಾಲಿ.

ಸರಕಾರಿ ನೌಕರರಿಗೆ ನೋಟಿಸ್

ಈ ಕುರಿತು ಆಹಾರ ಇಲಾಖೆ ಜಂಟಿ‌ನಿರ್ದೇಶಕ ಸುಧೀರ ಸಾಹುಕಾರ ಕೇಳಿದ್ರೆ, ಧಾರವಾಡ ಜಿಲ್ಲೆಯಲ್ಲಿ ಈ ಕುರಿತು ಆಹಾರ ಇಲಾಖೆ ಜಂಟಿ‌ನಿರ್ದೇಶಕ ಸುಧೀರ ಸಾಹುಕಾರ ಕೇಳಿದ್ರೆ, ಅಂತ್ಯೋದಯ 18 ಜನರು ಹಾಗೂ ಬಿಪಿಎಲ್ ಕಾರ್ಡು, 306 ಮಂದಿ ಪಡೆದಿದ್ದು, ಒಟ್ಟು 324 ಕಾರ್ಡ್ಗಳ ಸರಕಾರಿ ನೌಕರರನ್ನು ಪತ್ತೆ ಹಚ್ಚಿದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಅಂತಹ ಸರಕಾರಿ ನೌಕರರಿಗೆ ನೋಟಿಸ್ ಜಾರಿಗೊಳಿಸಿ, ದಂಡ ವಸೂಲು ಮಾಡಲು ಮುಂದಾಗಿದೆ.

ಲಕ್ಷ ಲಕ್ಷ ದಂಡ ಪಾವತಿ, ಇನ್ನೂ ಬಹಳಷ್ಟು ಬಾಕಿ

ಈಗಾಗಲೇ  ಇಲ್ಲಿಯವರೆಗೆ 24 ಜನರು ಮಾತ್ರ ದಂಡ ಪಾವತಿಸಿದ್ದು, 7 ಲಕ್ಷ 8 ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಉಳಿದ 300 ಮಂದಿ ನೌಕರರು ದಂಡ ಪಾವತಿಸಬೇಕಿದೆ.  ಎಚ್‌ಆರ್‌ಎಂಎಸ್ ದತ್ತಾಂಶದ ಆಧಾರದಿಂದ ಅನಧಿಕೃತವಾಗಿ ಪಡಿತರ ಕಾರ್ಡ್ ಹೊಂದಿರುವ ಸರಕಾರಿ ನೌಕರರ ಮಾಹಿತಿ ಪತ್ತೆ ಮಾಡಲಾಗಿದೆ‌. ಅವರಿಗೆ ಈಗಾಗಲೇ ದಂಡ‌ಕಟ್ಟುವಂತೆ ತಿಳಿಸಲಾಗಿದ್ದು, ಇಲ್ಲವಾದಲ್ಲಿ ಇಲಾಖೆ ವಿಚಾರಣೆ ಮಾಡಲಾಗುವುದು ಎನ್ನುತ್ತಾರೆ.

ಇದನ್ನೂ ಓದಿ: India Post: ನಿಮ್ಮ ಮನೆ ಬಾಗಿಲಿಗೆ ಬರುತ್ತೆ ರೈತರು ಬೆಳೆದ ಮಾವಿನ ಹಣ್ಣು, ಈ ರೀತಿ ಆರ್ಡರ್ ಮಾಡಿ

ಕೈ ತುಂಬ ಸಂಬಳ ಪಡೆಯುವ ಧಾರವಾಡ ಜಿಲ್ಲೆಯ ನೂರಾರು ಸರಕಾರಿ ನೌಕರರೂ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇದೀಗ ಅಂತಹವರನ್ನು ಪತ್ತೆ ಹಚ್ಚಿರುವ ಆಹಾರ ಇಲಾಖೆ, ಅವರ ಕಾರ್ಡ್ಗಳನ್ನು ರದ್ದುಗೊಳಿಸುವ ಜತೆಗೆ ದಂಡದ ಬಿಸಿಯನ್ನೂ ಮುಟ್ಟಿಸುತ್ತಿದೆ ನಿಜಕ್ಕೂ ಉತ್ತಮ ಕೆಲಸವೇ ಸರಿ.
Published by:Divya D
First published: