Hassan: 85 ವರ್ಷದ ವೃದ್ಧೆಯನ್ನ ಕೊಂದು ಅತ್ಯಾಚಾರ ಎಸಗಿದ್ದ ನೀಚ ಯುವಕನ ಬಂಧನ

ಮಿಥುನ್, ಆರೋಪಿ

ಮಿಥುನ್, ಆರೋಪಿ

ಐದು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ವೃದ್ಧೆ ಮೇಲೆ ಅತ್ಯಾಚಾರ ಯತ್ನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅದೇ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

  • Share this:

ಹಾಸನ: 85 ವರ್ಷದ ವೃದ್ಧೆಯನ್ನ (85 Year Old Woman) ಕೊಂದು ಅತ್ಯಾಚಾರ ಎಸಗಿದ್ದ ನೀಚ ಯುವಕನನ್ನು ಬಂಧಿಸುವಲ್ಲಿ (Accused) ಪೊಲೀಸರು ಯಶಸ್ವಿಯಾಗಿದ್ದಾರೆ. ಏಪ್ರಿಲ್ 1ರಂದು ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಯರೇಹಳ್ಳಿ (Yarehalli, Arasikere) ಗ್ರಾಮದಲ್ಲಿ ವೃದ್ಧೆಯ ಕೊಲೆಯಾಗಿತ್ತು. ಅರಸೀಕೆರೆ ತಾಲೂಕಿನ ಯರೆಹಳ್ಳಿ ಗ್ರಾಮದ ನಿವಾಸಿ 32 ವರ್ಷದ ಮಿಥುನ್ ಬಂಧಿತ ಆರೋಪಿ. ಏಪ್ರಿಲ್ 1 ರಂದು ವೃದ್ಧೆ ಜಮೀನಿನ ಬಳಿ ತೆರಳಿದ್ದರು. ಈ ವೇಳೆ ವೃದ್ಧೆ ಮೇಲೆ ಮಿಥುನ್ ಅತ್ಯಾಚಾರಕ್ಕೆ ಯತ್ನಿಸಿದ್ದನು. ವೃದ್ಧೆ ಪ್ರತಿರೋಧ ತೋರಿದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಬಳಿಕ ರಾಕ್ಷಸ ಕೃತ್ಯ ಎಸಗಿದ್ದನು. ಘಟನೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದನು.


ಜಮೀನಿಗೆ ಹೋಗಿದ್ದ ತಾಯಿ ಮನೆಗೆ ಹಿಂದಿರುಗದ ಹಿನ್ನೆಲೆ ಮಕ್ಕಳು ಹುಡುಕಾಟ ನಡೆಸಿದ್ದರು. ಏಪ್ರಿಲ್ 2ರ ಬೆಳಗ್ಗೆ ವೃದ್ಧೆ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಮಾನುಷ ಘಟನೆ ಬೆಳಕಿಗೆ ಬಂದಿದೆ.


ಏಪ್ರಿಲ್ 1ರಂದು ಆಗಿದ್ದೇನು?


ತನ್ನ ಜಮೀನಿನ ಬಳಿ ತೆರಳಲು ಹೋಗಿ ದಾರಿ ಗೊತ್ತಿಲ್ಲದೇ ವೃದ್ಧೆ ಬೇರೆ ಕಡೆ ಹೋಗಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ಮಿಥುನ್ ಜಮೀನಿನ ಬಳಿ ಬಿಡೋದಾಗಿ ಹೇಳಿ ಬೈಕ್​ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.




ದೌರ್ಜನ್ಯ ವಿರೋಧಿಸಿದಾಗ ವೃದ್ಧೆಯನ್ನು ಬರ್ಬರವಾಗಿ ಕೊಂದು ಅತ್ಯಾಚಾರ ಎಸಗಿದ್ದಾನೆ. ಐದು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ವೃದ್ಧೆ ಮೇಲೆ ಅತ್ಯಾಚಾರ ಯತ್ನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅದೇ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.


ಇದನ್ನೂ ಓದಿ:  Crime News: ಪ್ರಿಯತಮೆ ಕೊಂದು ಮೃತದೇಹ ಸುಟ್ಟು ಹಾಕಿ ಪ್ರೇಮಿ ಎಸ್ಕೇಪ್​​!


ಆರೋಪಿಯ ತೀವ್ರ ವಿಚಾರಣೆ

top videos


    ಕೊಲೆ ಅತ್ಯಾಚಾರ ಖಾತ್ರಿಯಾಗುತ್ತಲೇ ಅನುಮಾನಾಸ್ಪದ ಸಾವು ಪ್ರಕರಣವನ್ನು ಕೊಲೆ, ಅತ್ಯಾಚಾರ ಕೇಸ್ ಆಗಿ ಬದಲಾಯಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಈ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    First published: