HOME » NEWS » State » 31 YEAR OLD MAN DIED DUE TO LACK OF VENTILATOR AT CHIKMAGALURU VCTV LG

ಚಿಕ್ಕಮಗಳೂರಿನಲ್ಲಿ ವೆಂಟಿಲೇಟರ್​ ಸಿಗದೇ ಮಧ್ಯರಾತ್ರಿ ಯುವಕ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಆಸ್ಪತ್ರೆಯವರು ಆಗಲ್ಲ ಎಂದು ಹೇಳಿದ್ದರೆ ನಾವು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದೆವು. ಆದರೆ, ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲಿ ಇಟ್ಟು ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡದಿರೋದ್ರಿಂದ ನಮ್ಮ ಹುಡುಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರಿಟ್ಟಿದ್ದಾರೆ.

news18-kannada
Updated:May 14, 2021, 7:41 AM IST
ಚಿಕ್ಕಮಗಳೂರಿನಲ್ಲಿ ವೆಂಟಿಲೇಟರ್​ ಸಿಗದೇ ಮಧ್ಯರಾತ್ರಿ ಯುವಕ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೃತ ಯುವಕ
  • Share this:
ಚಿಕ್ಕಮಗಳೂರು(ಮೇ 14): ವೆಂಟಿಲೇಟರ್ ಸಿಗದೇ 31 ವರ್ಷದ ಯುವಕ ಕೊರೋನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.  ಮೇಘರಾಜ್ ಮೃತ ದುರ್ದೈವಿ. ಈತ ಮೂಲತಃ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಸಮೀಪದ ಬಸನಿ ಗ್ರಾಮದ ನಿವಾಸಿ. ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೇಘರಾಜ್ ಕಳೆದೊಂದು ವಾರದ ಹಿಂದೆ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಕಳೆದೊಂದು ವಾರದಿಂದ ಚಿಕಿತ್ಸೆಯಲ್ಲಿದ್ದ ಮೇಘರಾಜ್ ಬುಧವಾರ ರಾತ್ರಿ 1.30ರವರೆಗೂ ಚೆನ್ನಾಗಿದ್ದರು. ಆದರೆ, ಗುರುವಾರ ಬೆಳಗ್ಗೆ ಮೇಘರಾಜ್ ಮೊಬೈಲ್‍ಗೆ ಕರೆ ಮಾಡಿದಾಗ ಆಸ್ಪತ್ರೆಯವರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ವಿಷಯ ಕೇಳಿ ಕುಟುಂಬಸ್ಥರು, ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ಅಯ್ಯೋ... ದೇವ್ರೆ, ರಾತ್ರಿ 1.30ರ ತನಕ ಚೆನ್ನಾಗಿದ್ದವನು ದಿಢೀರ್ ಎಂದು ಹೇಗೆ ಸತ್ತ ಎಂದು ಕಂಗಾಲಾಗಿದ್ದಾರೆ. ಮೃತ ಮೇಘರಾಜ್ ರಾತ್ರಿ 1.30ರವರೆಗೆ ಚಾಟ್ ಮಾಡಿದ್ದಾನೆ. ನಾನು ಜನರಲ್ ವಾರ್ಡಿನಲ್ಲಿ ಇದ್ದೇನೆ. ನನಗೆ ಉಸಿರಾಟದ ಸಮಸ್ಯೆ ಇದೆ. ಐಸಿಯು ಬೆಡ್ ಬೇಕಿದೆ ಎಂದು ಸ್ನೇಹಿತರಿಗೆ ಮೇಸೆಜ್ ಮಾಡಿದ್ದಾನೆ. ಉಸಿರಾಟದ ಸಮಸ್ಯೆ ಇದೆ ಎಂದು ವೆಂಟಿಲೇಟರ್​ಗಾಗಿ ಆಸ್ಪತ್ರೆಯವರಿಗೆ ಕೇಳಿಕೊಂಡಿದ್ದನಂತೆ.

ನಿನ್ನೆ ಬೆಳಗ್ಗೆ ಮೃತ ಮೇಘರಾಜ್ ಕುಟುಂಬಸ್ಥರು ಬೆಳಗ್ಗೆ ಆಸ್ಪತ್ರೆಯವರಿಗೆ ಕೇಳಿದಾಗ ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೆವು, ಬೆಳಗ್ಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರಂತೆ. ಮೇಘರಾಜ್ 1.30ರವರೆಗೆ ಜನರಲ್ ವಾರ್ಡಿನಲ್ಲಿ ಇದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಆಸ್ಪತ್ರೆಯವರು ರಾತ್ರಿ 12 ಗಂಟೆಗೆ ಐಸಿಯುಗೆ ಶಿಫ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೇಘರಾಜ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲೇ ಇಟ್ಟು ಚಿಕಿತ್ಸೆ ನೀಡಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಮೇಘರಾಜ್ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Corona Death: ಮುಂದುವರೆದ ಕೊರೊನಾ ಮಾರಣಹೋಮ, ಆಕ್ಸಿಜನ್ ಕೊರತೆಯಿಂದ ಚಿತ್ರದುರ್ಗದಲ್ಲಿ 3 ಸಾವು !

ಆಸ್ಪತ್ರೆಯವರು ಆಗಲ್ಲ ಎಂದು ಹೇಳಿದ್ದರೆ ನಾವು ಬೇರೆ ಕಡೆ ಶಿಫ್ಟ್ ಮಾಡುತ್ತಿದ್ದೆವು. ಆದರೆ, ಆಸ್ಪತ್ರೆಯವರು ಜನರಲ್ ವಾರ್ಡಿನಲ್ಲಿ ಇಟ್ಟು ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡದಿರೋದ್ರಿಂದ ನಮ್ಮ ಹುಡುಗ ಸಾವನ್ನಪ್ಪಿದ್ದಾನೆ ಎಂದು ಮೃತನ ಪೋಷಕರು ಆಸ್ಪತ್ರೆ ಮುಂದೆ ಕಣ್ಣೀರಿಟ್ಟಿದ್ದಾರೆ.

ಇತ್ತೀಚೆಗಷ್ಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಯುವಕ ಹಳ್ಳಿಯ ಅಭಿವೃದ್ಧಿ ಬಗ್ಗೆಯೂ ತೀವ್ರ ಕನಸು ಕಂಡಿದ್ದು, ಗ್ರಾಮದ ಯುವಕರ ಜೊತೆ ಅಭಿವೃದ್ಧಿಯ ಕುರಿತು ಚರ್ಚೆ ನಡೆಸುತ್ತಿದ್ದ. ಇದನ್ನೆಲ್ಲಾ ನೆನೆದ ಸ್ನೇಹಿತರು ಕೂಡ ಆತನ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಹಾಗೂ ಶಿವಗಿರಿ ಸೇವಾ ಯುವಕರ ತಂಡ ಮೇಘರಾಜ್ ಸ್ವಗ್ರಾಮ ಬಸನಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಇಷ್ಟೆಲ್ಲಾ ಗಂಭೀರ ಸ್ಥಿತಿ ಇದ್ರೂ ಆಸ್ಪತ್ರೆಯವರು ನಮಗೆ ಒಂದು ಮಾತು ತಿಳಿಸಲಿಲ್ಲ ಅಂತಾ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಕೊನೆಪಕ್ಷ ಇಲ್ಲಿ ಆಗಲ್ಲ ಅಂತಿದ್ರೂ ನಾವು ಬೇರೆ ಕಡೆಗೂ ಶಿಫ್ಟ್ ಮಾಡುತ್ತಿದ್ದೆವು. ಆಸ್ಪತ್ರೆಯಲ್ಲಿ ಕೇವಲ ಜನರಲ್ ವಾರ್ಡ್​​ನಲ್ಲಿ ಚಿಕಿತ್ಸೆ ನೀಡಿ ನಿಗಾ ವಹಿಸದೇ ನಮ್ಮ ಹುಡುಗನ ಸಾವಿಗೆ ಕಾರಣವಾಗಿದ್ದಾರೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತುಂಬಾ ವಿಚಾರವಂತ, ಪ್ರಜ್ಞಾವಂತನಾಗಿದ್ದ ಮೇಘರಾಜ್ ಸಾವನ್ನ ಯಾರು ಅರಗಿಸಿಕೊಳ್ಳಲಾಗ್ತಿಲ್ಲ. ಅದು ಕೂಡ ತುಂಬಾ ಲವಲವಿಕೆಯಿಂದ ಇದ್ದ ಹುಡುಗ ರಾತ್ರಿ ಕರೆ ಮಾಡಿದವನು, ಮೆಸೇಜ್ ಮಾಡಿದವನು ಬೆಳಗ್ಗೆ ಇಲ್ಲಾ ಅಂದ್ರೆ ಹೇಗೆ ಅನ್ನೋದು ಎಲ್ಲರ ಪ್ರಶ್ನೆ. ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಹಾಗೂ ಶಿವಗಿರಿ ಸೇವಕರ ತಂಡ ಸೇರಿ ಸ್ವಗ್ರಾಮ ಬಸಿನಿಯಲ್ಲಿ ಮೇಘರಾಜ್ ಅಂತ್ಯಸಂಸ್ಕಾರವನ್ನ ನೆರವೇರಿಸಿದ್ದಾರೆ..
Youtube Video

ಅದೇನೆ ಆಗಲಿ ಸದಾ ಹಾಳು ವ್ಯವಸ್ಥೆಯ ಬಗ್ಗೆ ದನಿ ಎತ್ತುತ್ತಿದ್ದ ಯುವಕನೊಬ್ಬ ಅದೇ ವ್ಯವಸ್ಥೆಯ ಅವ್ಯವಸ್ಥೆಗೆ ಬಲಿಯಾಗಿದ್ದು ಮಾತ್ರ ನಿಜಕ್ಕೂ ದುರಂತ..
Published by: Latha CG
First published: May 14, 2021, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories