ಕೇಂದ್ರವು ಸುಮಾರು 3,000 ಕೋಟಿ ರೂಪಾಯಿಗಳನ್ನು ಪಿಎಂ-ಕಿಸಾನ್ ಯೋಜನೆಯಡಿ 42 ಲಕ್ಷಕ್ಕೂ ಹೆಚ್ಚು ಅನರ್ಹ ರೈತರಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನು ಈಹ ಮತ್ತೆ ವಾಪಸ್ಸು ಪಡೆಯಬೇಕು ಎಂದು ಮಾಹಿತಿ ನೀಡಿದರು.
ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ 6,000 ರೂಗಳನ್ನು ದೇಶಾದ್ಯಂತದ ರೈತರಿಗೆ ಮೂರು ಕಂತುಗಳಲ್ಲಿ ವರ್ಗಾಯಿಸುತ್ತದೆ. ಈ ಯೋಜನೆಯು ಲಾಭ ಪಡೆಯಬೇಕಾದರೆ ಒಂದಷ್ಟು ಮಾನದಂಡಗಳನ್ನು ಹೊಂದಿದ್ದು, ರೈತನು ಆದಾಯ ತೆರಿಗೆ ಪಾವತಿಸುವವನಾಗಿರಬಾರದು. ಪಿಎಂ-ಕಿಸಾನ್ ಯೋಜನೆಯಡಿ ಹಣ ಪಡೆದ 42.16 ಲಕ್ಷ ಅನರ್ಹ ರೈತರಿಂದ 2,992 ಕೋಟಿ ರೂ.ಗಳನ್ನು ವಸೂಲಿ ಮಾಡಬೇಕೆಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಸಂಸತ್ತಿಗೆ ನೀಡಿದ ಉತ್ತರದಲ್ಲಿ ಒಪ್ಪಿಕೊಂಡಿದ್ದಾರೆ.
ಪಿಎಂ-ಕಿಸಾನ್ ಹಣವನ್ನು ಪಡೆದ ಅಂತಹ ಅನರ್ಹ ರೈತರು ಅಸ್ಸಾಂ (8.35 ಲಕ್ಷ) ನಂತರ ತಮಿಳುನಾಡು (7.22 ಲಕ್ಷ), ಪಂಜಾಬ್ (5.62 ಲಕ್ಷ), ಮಹಾರಾಷ್ಟ್ರ (4.45 ಲಕ್ಷ), ಉತ್ತರ ಪ್ರದೇಶ (2.65 ಲಕ್ಷ) ಮತ್ತು ಗುಜರಾತ್ ( 2.36 ಲಕ್ಷ). ವಸೂಲಿ ಮಾಡಬೇಕಾದ ಹಣವನ್ನು ಅಸ್ಸಾಂನಲ್ಲಿ 554 ಕೋಟಿ, ಪಂಜಾಬಿನಲ್ಲಿ 437 ಕೋಟಿ, ಮಹಾರಾಷ್ಟ್ರದಲ್ಲಿ 358 ಕೋಟಿ, ತಮಿಳುನಾಡಿನಲ್ಲಿ 340 ಕೋಟಿ, ಯುಪಿಯಲ್ಲಿ 258 ಕೋಟಿ ಮತ್ತು ಗುಜರಾತಿನಲ್ಲಿ 220 ಕೋಟಿ ಎಂದು ಸಂಸತ್ತಿನಲ್ಲಿ ಉತ್ತರಿಸಿದರು.
ಪಿಎಫ್ಎಂಎಸ್, ಅಥವಾ ಆದಾಯ ತೆರಿಗೆ ಮಾಹಿತಿ ಹೀಗೆ ವಿವಿಧ ಮೂಲಗಳಿಂದ ಇದನ್ನು ಪತ್ತೆ ಹಚ್ಚಲಾಗಿದೆ. ಅಧಿಕಾರಿಗಳಿಂದ ಫಲಾನುಭವಿಗಳ ನಿರಂತರ ಪರಿಶೀಲನೆ ಮತ್ತು ಮೌಲ್ಯಮಾಪನದ ಆಧಾರದ ಮೇಲೆ ದೋಷಗಳನ್ನು ಕಂಡುಹಿಡಿಯಲಾಯಿತು ಆದಾಗ್ಯೂ, ಪರಿಶೀಲನೆಯ ಪ್ರಕ್ರಿಯೆಯಲ್ಲಿ ಯೋಜನೆಯ ಹಣ ಕೆಲವು ಆದಾಯ ತೆರಿಗೆ ಪಾವತಿಸುವ ರೈತರು ಸೇರಿದಂತೆ ಅನರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂಬುದು ಕಂಡುಬಂದಿದೆ ”ಎಂದು ತೋಮರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಒಂದಷ್ಟು ವಿಶೇಷ ಗಮನವನ್ನು ಈ ಯೋಜನೆಯ ಮೇಲೆ ಇರಿಸಿದ್ದು, ಯಾವುದೇ ಕಾರಣಕ್ಕೂ ರೈತರ ಹಣ ದುರ್ಭಳಕೆ ಆಗಬಾರದು ಹಾಗೂ ಹಣ ಅರ್ಹ ರೈತರಿಗೆ ನೇರವಾಗಿ ಸಿಗಬೇಕು ಮತ್ತು ಅದರ ಸಂಪೂರ್ಣ ಬಳಕೆ ರೈತರಿಗೆ ಆಗಬೇಕು ಎಂಬುದು ನಮ್ಮ ಆಶಯ ಆದರೆ ಅದನ್ನೂ ಮೀರಿ ಒಂದಷ್ಟು ದೋಷಗಳು ಕಂಡು ಬರುತ್ತಿದೆ. ಅಲ್ಲದೇ ಅನೇಕ ರಾಜ್ಯಗಳು ಅನರ್ಹ ರೈತರಿಗೆ ಈಗಾಗಲೇ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದು, ಆದಷ್ಟು ಬೇಗ ದುರ್ಭಳಕೆಯಾದ ಹಣವನ್ನು ಹಿಂಪಡೆಯಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಬಿಎಸ್ವೈ ಇದ್ದರೆ ಬಿಜೆಪಿ, ಇಲ್ಲ ಎಲ್ಲವೂ ಸರ್ವನಾಶ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಸ್ವಾಮೀಜಿಗಳಿಂದ ಎಚ್ಚರಿಕೆ
“ಅನರ್ಹ ಫಲಾನುಭವಿಗಳಿಂದ ಹಣವನ್ನು ಮರುಪಡೆಯಲು ಸ್ಟ್ಯಾಂಡರ್ಡ್ ಆಪರೇಷನ್ ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದಾಯ ತೆರಿಗೆ ಪಾವತಿದಾರರನ್ನು ಗುರುತಿಸಲು ಪ್ರಮಾಣಿತ ಕಾರ್ಯಕಾರಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈ ಗೈಡ್ಲೈನ್ ಅನ್ನು ರಾಜ್ಯಗಳಿಗೆ ವಿತರಿಸಲಾಗಿದೆ. ಪಿಎಂ-ಕಿಸಾನ್ ಯೋಜನೆಯಡಿ ರೈತರ ನೋಂದಣಿ ಮತ್ತು ಪರಿಶೀಲನೆಯ ಸಮಯದಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳಲು ಎಚ್ಚರಿಕೆಯ ಜೊತೆಗೆ ಸಲಹೆಯನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ ಮತ್ತು ಪಿಎಂ-ಕಿಸಾನ್ ಫಲಾನುಭವಿಗಳ ಕುರಿತು ನೇರವಾಗಿ ಪರಿಶೀಲನೆ ಮಾಡುವ ಸ್ಟ್ಯಾಂಡರ್ಡ್ ಆಪರೇಶನಲ್ ಗೈಡ್ಲೈನ್ಸ್ ಅನ್ನು ರಾಜ್ಯ ಸರ್ಕಾರಗಳಿಗೆ ವಿತರಿಸಲಾಗಿದೆ, ”ಎಂದು ತೋಮರ್ ಪಟ್ಟಿಮಾಡಿಕೊಂಡಿರುವ ಒಂದಷ್ಟು ಅಂಶಗಳನ್ನು ಸಂಸತ್ತಿನಲ್ಲಿ ಹೇಳಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ