ವಿಜಯಪುರದಲ್ಲಿ 300 ಮೀಟರ್ ಉದ್ದದ ತಿರಂಗಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು


Updated:August 15, 2018, 1:03 PM IST
ವಿಜಯಪುರದಲ್ಲಿ 300 ಮೀಟರ್ ಉದ್ದದ ತಿರಂಗಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು

Updated: August 15, 2018, 1:03 PM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಆ. 14): ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವಾದ ಇಂದು ಎಬಿವಿಪಿ ಕಾರ್ಯಕರ್ತರು ವಿಜಯಪುರ ನಗರದಲ್ಲಿ 300 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹೊತ್ತು ತಿರಂಗಾ ಜಾಥಾ ನಡೆಸಿದರು.

ವಿಜಯಪುರ ನಗರದ ಶಿವಾಜಿ ವೃತ್ತದಿಂದ ಆರಂಭಿಸಿದ ತಿರಂಗಾ ಯಾತ್ರೆ ಗಾಂಧೀಚೌಕ್ ಮೂಲಕ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೆ ನಡೆಯಿತು. ದೇಶಪ್ರೇಮ ಹಾಗೂ ದೇಶಭಕ್ತಿಯ ಜಾಗೃತಿಗಾಗಿ ಆಯೋಜಿಸಲಾದ ಈ ಜಾಥಾದಲ್ಲಿ ಎಬಿವಿಪಿ ಕಾರ್ಯಕರ್ತರಷ್ಟೇ ಅಲ್ಲ, ವಿಜಯಪುರ ನಗರದ ನಾನಾ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಂದೇ ಮಾತರಂ, ಬೊಲೋ ಭಾರತ್ ಮಾತಾ ಕೀ ಜೈ ಮತ್ತು ಸ್ವಾತಂತ್ರ್ಯ ಸೇನಾನಿಗಳ ಪರ ಘೋಷಣೆ ಹಾಕಿದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೋಂಡು ಬೆಂಬಲಿಸಿದರು. ಈ ಜಾಥಾದಿಂದಾಗಿ ವಿಜಯಪುರ ನಗರದ ಮಹಾತ್ಮಾ ಗಾಂಧಿ ರಸ್ತೆ, ಆಶ್ರಮ ರಸ್ತೆ, ರಾಮ ಮಂದಿರ ರಸ್ತೆಗಳು ಸೇರಿದಂತೆ ನಾನಾ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಗಿತ್ತು. ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...