ಮೆಟ್ಟೂರು ಜಲಾಶಯಕ್ಕೆ ಹರಿದ 33 ಟಿಎಂಸಿ ನೀರು; ಸದ್ಯಕ್ಕೆ ದೂರವಾದ ಕಾವೇರಿ ನದಿ ವಿವಾದ

ಮೆಟ್ಟೂರು ಜಲಾಶಯದ ಗರಿಷ್ಠ ಮಟ್ಟ 120 ಅಡಿ ಇದ್ದು ಆಗಸ್ಟ್ 7 ರಂದು ನೀರಿನ ಮಟ್ಟ 65 ಅಡಿ ಇತ್ತು. ಇದೀಗ ಜಲಾಶಯದ ನೀರಿನ ಮಟ್ಟ 97 ಅಡಿಗೆ ಏರಿದ್ದು ಒಂದೇ ವಾರದಲ್ಲಿ 33 ಅಡಿ ಭರ್ತಿಯಾಗಿದೆ.

news18-kannada
Updated:August 13, 2020, 12:49 PM IST
ಮೆಟ್ಟೂರು ಜಲಾಶಯಕ್ಕೆ ಹರಿದ  33 ಟಿಎಂಸಿ ನೀರು; ಸದ್ಯಕ್ಕೆ ದೂರವಾದ ಕಾವೇರಿ ನದಿ ವಿವಾದ
ಮೆಟ್ಟೂರು ಡ್ಯಾಂ
  • Share this:
ಚಾಮರಾಜನಗರ (ಆಗಸ್ಟ್ ‌13): ವರುಣನ ಅಬ್ಬರದ ಪರಿಣಾಮ ಉಕ್ಕಿ ಹರಿದ ಕಾವೇರಿ ತಮಿಳುನಾಡಿನ ನೀರಿನ ದಾಹ ತಣಿಸಿದ್ದಾಳೆ. ಇದರಿಂದಾಗಿ ತಲೆದೋರಲಿದ್ದ ಕಾವೇರಿ ವಿವಾದ ಸದ್ಯಕ್ಕೆ ದೂರವಾಗಿದೆ.

ಕಳೆದ ಒಂದು ವಾರದಿಂದ ಕೊಡಗು ಹಾಗೂ  ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಪರಿಣಾಮ ರಾಜ್ಯದ  ಕಬಿನಿ ಹಾಗೂ ಕೆ.ಆರ್.ಎಸ್ ಜಲಾಶಯಗಳು ಭರ್ತಿಯಾಗಿವೆ. ಈ ಎರಡೂ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನಲೆಯಲ್ಲಿ, ಒಂದೇ ವಾರದಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ  33.55 ಟಿಎಂಸಿ ನೀರು ಹರಿದಿದೆ.ಕಾವೇರಿ ನದಿ ಮೈದುಂಬಿ ಹರಿದು  ಹೊಗೇನಕಲ್ ಮೂಲಕ ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು ಸೇರಿದೆ. ಆಗಸ್ಟ್ 7 ರಂದು ಕೇವಲ 28.99 ಟಿಎಂಸಿ ಇದ್ದ ನೀರಿನ ಪ್ರಮಾಣ ಇಂದು 61.54 ಟಿಎಂಸಿ ಗೆ ಏರಿಕೆಯಾಗಿದೆ.( ಈ ಜಲಾಶಯದ ಒಟ್ಟು ಸಾಮರ್ಥ್ಯ 97.42 ಟಿಎಂಸಿ)

‘ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲಿ‘ - ಶಾಸಕ ಜಮೀರ್ ಅಹಮದ್​ ಆಗ್ರಹ

ಮೆಟ್ಟೂರು ಜಲಾಶಯದ ಗರಿಷ್ಠ ಮಟ್ಟ 120 ಅಡಿ ಇದ್ದು ಆಗಸ್ಟ್ 7 ರಂದು ನೀರಿನ ಮಟ್ಟ 65 ಅಡಿ ಇತ್ತು. ಇದೀಗ ಜಲಾಶಯದ ನೀರಿನ ಮಟ್ಟ 97 ಅಡಿಗೆ ಏರಿದ್ದು ಒಂದೇ ವಾರದಲ್ಲಿ 33 ಅಡಿ ಭರ್ತಿಯಾಗಿದೆ.

ಮೂರು ದಿನಗಳ ಹಿಂದೆ ಮೆಟ್ಟೂರು ಜಲಾಶಯದ  ಒಳಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ಸ್​​ಗೂ ಹೆಚ್ಚಾಗಿತ್ತು. ರಾಜ್ಯ ದಲ್ಲಿ ಮಳೆಯ ಪ್ರಮಾಣ ಇಳಿಕೆಯಾದ ಕಾರಣ ಕಬಿನಿ ಹಾಗೂ ಕೆ.ಆರ್.ಎಸ್ಜಲಾಶಯಗಳಿಂದ ಹೊರ ಹರಿವು ಕಡಿಮೆಯಾಗಿದ್ದು ಇಂದು ಮೆಟ್ಟೂರು ಜಲಾಶಯ ಕ್ಕೆ ಒಳಹರಿವಿನ ಪ್ರಮಾಣ 12431 ಕ್ಯೂಸೆಕ್ ಇದೆ. ಹೊರಹರಿವು 10000 ಕ್ಯೂಸೆಕ್ ಇದೆ.

ರಾಜ್ಯದ ಕೆ.ಆರ್.ಎಸ್. ಜಲಾಶಯ (ಗರಿಷ್ಠ ಮಟ್ಟ 124.80 ಅಡಿ) ಸಂಪೂರ್ಣ ಭರ್ತಿಯಾಗಿದ್ದು ಇಂದು ಒಳಹರಿವು 18,027 ಕ್ಯೂಸೆಕ್ ಇದ್ದು  ಹೊರಹರಿವು  3756 ಕ್ಯೂಸೆಕ್ ಇದೆ.  ಕಬಿನಿ ಜಲಾಶಯವೂ ಸಹ ( ಗರಿಷ್ಠ  2284 ಅಡಿ) ಬಹುತೇಕ ಭರ್ತಿಯಾಗಿದ್ದು  ಒಳಹರಿವು 22922 ಕ್ಯೂಸೆಕ್ ಇದ್ದು ಹೊರಹರಿವಿನ ಪ್ರಮಾಣ 24063 ಕ್ಯೂಸೆಕ್ ಇದೆ.
Published by: Latha CG
First published: August 13, 2020, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading