ಮಾಸ್ಕ್ ಧರಿಸದವರಿಗೆ ಹಾಸನ ನಗರಸಭೆ ಸಿಬ್ಬಂದಿಯಿಂದ ದಂಡದ ಬಿಸಿ

ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರ ಆದೇಶದಂತೆ ನಗರದಲ್ಲಿ ಮಾಸ್ಕ್ ಹಾಕದವರಿಗೆ ಇಲ್ಲಿಯವರಗೂ 30 ಸಾವಿರ‌ ರೂ. ದಂಡ ವಿಧಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸನ(ಅ.07): ಕೋವಿಡ್-19 ನಿರ್ವಹಣೆ ರಾಷ್ಟ್ರೀಯ ನಿರ್ದೇಶನಗಳ ಅನುಸಾರ ಹಾಸನದಲ್ಲೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.  ನಗರ ಸಭೆ ಆಯುಕ್ತರ ನಿರ್ದೇಶನದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ದರಿಸದೆ ಇರುವವರಿಗೆ  ನಗರಸಭೆ ಸಿಬ್ಬಂದಿಗಳು ನಗರದ ಮಹಾವೀರ ಸರ್ಕಲ್ ನಲ್ಲಿ 1000-500 ದಂಡವನ್ನು ವಿಧಿಸಿದರು. ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಿಳುವಳಿಕೆಯನ್ನು ಹೇಳಿ ಕಡ್ಡಾಯವಾಗಿ ಮನೆಯಿಂದ ಹೊರಬರುವ ವೇಳೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಯಮ‌ ಜಾರಿಗೆ ತಂದಿದ್ದು ಹಾಸನದಲ್ಲಿ ಬಹುತೇಕ ಜನ ಮಾಸ್ಕ್ ಧರಿಸದೇ ಓಡಾಡುತ್ತಿದ್ದು ಅಂತಹವರಿಗೆ ನಗರ ಸಭೆ ಅಧಿಕಾರಿಗಳು‌ ದಂಡ ವಿಧಿಸುತ್ತಿದ್ದಾರೆ. ನಗರದ ಮಹಾವೀರ ವೃತ್ತದಲ್ಲಿ ನಗರ ಸಭೆ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು ಸೇರಿ ಮಾಸ್ಕ್ ಹಾಕದೆ ಇರುವ ವಾಹನ ಸವಾರರಿಗೆ, ಪಾದಚಾರಿಗಳಿಗೆ  ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ವಿಚಿತ್ರ ಪ್ರೇಮ ಪ್ರಕರಣ; ಬಾಲ್ಯವಿವಾಹವಾದ ಗಂಡ ಬೇಡವೆಂದು ಪ್ರಿಯಕರನ ಕೈಹಿಡಿದ ಯುವತಿ

ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರ ಆದೇಶದಂತೆ ನಗರದಲ್ಲಿ ಮಾಸ್ಕ್ ಹಾಕದಿರುವವರಿಂದ ಇಲ್ಲಿಯವರಗೂ 30 ಸಾವಿರ‌ ರೂ. ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ  ಕಾಪಾಡಿಕೊಂಡು ಕೊರೊನಾ ರೋಗ ನಿಯಂತ್ರಣ ಮಾಡುವಂತೆ ಸಾರ್ವಜನಿಕರಲ್ಲಿ‌ ಮನವಿ‌ ಮಾಡಿದರು.

ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸಿ ಕೋವಿಡ್ ಸೋಂಕಿನಿಂದ ಹೋರಾಡಿ , ಮಾಸ್ಕ್ ಧರಿಸದವರಿಗೆ ಫೈನ್(ದಂಡ) ಕಟ್ಟಿಸಿಕೊಳ್ಳುವ ಟ್ರಾಫಿಕ್ ಪೊಲೀಸರು/ನಗರಸಭಾ ಸಿಬ್ಬಂದಿಗಳು ದಯವಿಟ್ಟು ನಮ್ಮ ಸಾರ್ವಜನಿಕ ರೊಂದಿಗೆ ಸಹನೆಯಿಂದ ವರ್ತಿಸಿ , ತೀರಾ ಸಹಕರಿಸದ ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ಸಲಹೆ ನೀಡಿ ಎಂದು ನಗರಸಭೆ ಸಿಬ್ಬಂದಿ ಜನ್ರಿಗೆ  ಕೋವಿಡ್ ಎಚ್ಚರಿಕೆ ಬಗ್ಗೆ ಅರಿವು ಮೂಡಿಸಿದರು.
Published by:Latha CG
First published: