ದುರಂತ ಅಂತ್ಯ ಕಂಡ ಒಂದು ಜಡೆ ಹಿಂದಿನ ಮೂರು ಹೃದಯಗಳ ಕತೆ !

news18
Updated:August 10, 2018, 1:54 PM IST
ದುರಂತ ಅಂತ್ಯ ಕಂಡ ಒಂದು ಜಡೆ ಹಿಂದಿನ ಮೂರು ಹೃದಯಗಳ ಕತೆ !
news18
Updated: August 10, 2018, 1:54 PM IST
 -ಮುನಿರಾಜು, ನ್ಯೂಸ್ 18 ಕನ್ನಡ

ಬೆಂಗಳೂರು (ಆಗಸ್ಟ್ 10) :  ಹುಡುಗಿ ವಿಚಾರವಾಗಿ ಮೂವರು ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಜಗಳದ ವೇಳೆ ಲಾಡ್ಜ್​ ಮೇಲಿಂದ ಬಿದ್ದು ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ನಿನ್ನೆ ವಿವಿ ಪುರಂನ ತ್ರಿಶೂಲ್ ಲಾಡ್ಜ್​ನಲ್ಲಿ ಘಟನೆ ನಡೆದಿದೆ. ಗುಜರಾತ್ ಮೂಲದ ರೋಣಕ್ ಚೌಧರಿ ಮೃತ ವಿದ್ಯಾರ್ಥಿ.

ಗುಜರಾತ್ ಮೂಲದ 130 ವಿದ್ಯಾರ್ಥಿಗಳು ನರ್ಸಿಂಗ್ ಪರೀಕ್ಷೆ ಬರೆಯಲು ಆಗಸ್ಟ್ 2 ರಂದು ಬೆಂಗಳೂರಿಗೆ ಬಂದಿದ್ದರು. ಮೃತ ರೋಣಕ್ ಚೌಧರಿ, ರಾಯಲ್ ಚೌಧರಿ ಮತ್ತು ಅಪೂರ್ವ ಚೌಧರಿ ಎಂಬ ಮೂವರು ವಿದ್ಯಾರ್ಥಿಗಳು ಒಂದೇ ಲಾಡ್ಜ್​ನಲ್ಲಿ ಉಳಿದುಕೊಂಡಿದ್ದರು. ತ್ರಿಶೂಲ್ ಲಾಡ್ಜ್​ನ 4ನೇ ಮಹಡಿಯ ಕೊಠಡಿಯಲ್ಲಿ ಎಲ್ಲರೂ ಉಳಿದುಕೊಂಡಿದ್ದರು.  

ವೇಳೆ, ಪರೀಕ್ಷೆ ಬರೆಯಲು ಬಂದಿದ್ದ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರಕ್ಕೆ ಮೂವರಲ್ಲಿ ಜಗಳವಾಗಿತ್ತು. ರೋಣಕ್ ತಾನು ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಿರುಉವುದಾಗಿ ಹೇಳಿಕೊಂಡಿದ್ದಾನೆ. ಉಳಿದ ಇಬ್ಬರೂ ಸಹ, ತಾವು ಅದೇ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದೇವೆ ಎಂದಿದ್ದಾರೆ. ಇದೇ ವಿಚಾರಕ್ಕೆ ಮೂವರೂ ಕೈಕೈ ಮಿಲಾಯಿಸಿ ಜಗಳ ಮಾಡಿಕೊಂಡಿದ್ದಾರೆ.

ಈ ವೇಳೆ ರೋಣಕ್, ಲಾಡ್ಜ್​ ಕೊಠಡಿಯಿಂದ ಪಕ್ಕದ ಕೊಠಡಿಗೆ ಹೋಗಲು ಜಂಪ್ ಮಾಡಿದ್ದಾನೆ. ಇದೇ ವೇಳೇ ರಾಯಲ್ ಚೌಧರಿ, ಹಿಂಬದಿಯಿಂದ ರೋಣಕ್ ಚೌಧರಿಯನ್ನು ತಳ್ಳಿದ್ದ ಅನ್ನೋ ಆರೋಪ ಕೇಳಿ ಬಂದಿದೆ, ತಳ್ಳಿದ ರಭಸಕ್ಕೆ ರೊಣಕ್ ಆಯತಪ್ಪಿ  4ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ವಿಯ ತಿಳಿದು ಸ್ಥಳಕ್ಕೆ  ಆಗಮಿಸಿದ ವಿವಿಪುರಂ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿ ರಾಯಲ್ ಚೌಧರಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುರೆಸಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...