ಬೆಂಗಳೂರು: ಆಟವಾಡುತ್ತಿದ್ದ ವೇಳೆ ಬಿಡಿಎ ಅಪಾರ್ಟ್ಮೆಂಟ್ನ (BDA Apartments) ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಬಾಲಕ (Boy) ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಮೂರು ವರ್ಷದ ಬಾಲಕ ರಾಹುಲ್ (Rahul) ಅಪಾರ್ಟ್ಮೆಂಟ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ, ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ (Hospital) ದಾಖಲಿಸಿದ್ದರು. ಆದರೆ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಸಾವು (Death) ಬದುಕಿನ ನಡುವೆ ಹೋರಾಟ ನಡೆಸಿದ್ದ ರಾಹುಲ್, ವೈದ್ಯರ (Doctors) ಕಠಿಣ ಪರಿಶ್ರಮದ ಹೊರತಾಗಿಯೂ ಇಂದು ಸಂಜೆ 4:30ರ ವೇಳೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೆಂಗೇರಿ (Kengeri) ಬಳಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ (Rajarajeshwari Hospital ) ಕೊನೆಯುಸಿರೆಳೆದಿದ್ದಾನೆ.
ಮಕ್ಕಳನ್ನು ಒಂಟಿಯಾಗಿ ಆಡಲು ಬಿಡುವ ಮುನ್ನ ಪೋಷಕರು ಎಚ್ಚರಿಕೆ ವಹಿಸಿಬೇಕಿದೆ. ಕೆಂಗೇರಿ ಬಳಿಯ ಜ್ಞಾನಭಾರತಿ ಎನ್ಕ್ಲೇವ್ನ ಕಾವೇರಿ ಬ್ಲಾಕ್ನಲ್ಲಿ ಘಟನೆ ನಡೆದಿತ್ತು. ಬಾಲಕ ರಾಹುಲ್ ಅಪಾರ್ಟ್ಮೆಂಟ್ನ ಮೂರನೇ ಮಹಡಿಯಿಂದ ಬೀಳುವ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿತ್ತು. ಕಲಬುರಗಿ ಮೂಲದ ಶಿವಪ್ಪ ದಂಪತಿ ಕಳೆದ ಮೂರು ವರ್ಷಗಳಿಂದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಬಾಲಕನ ಅಪ್ಪ-ಅಮ್ಮ ಮನೆಯಲ್ಲಿದ್ದ ಸಂದರ್ಭದಲ್ಲೇ ದುರ್ಘಟನೆ ನಡೆದಿತ್ತು.
ಇದನ್ನೂ ಓದಿ: Crime News: ಇತ್ತ ಹೆಂಡತಿ, ಮೂವರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ ಗಂಡ; ಅತ್ತ ಕಲ್ಲು ಎತ್ತಿಹಾಕಿ ಅಕ್ಕ-ತಂಗಿ ಬರ್ಬರ ಹತ್ಯೆ
ಮನೆಯ ಹೊರಗೆ ಚೇರ್ ಹಾಕಿ ಅದರ ಮೇಲೆ ಬೆಡ್ ಶೀಟ್ ಹಾಕಿ ಮಗುವನ್ನು ಆಡಲು ಬಿಟ್ಟಿದ್ದರು. ಈ ವೇಳೆ ಕಾಲು ಜಾರಿ ಮಗು ಕಬ್ಬಿಣದ ಸರಳುಗಳಿಂದ ತೂರಿ ಬಾಲಕ ನೆಲಕ್ಕೆ ಬಿದ್ದಿದ್ದ. ಬಾಲಕನ ತಂದೆ ಶಿವಪ್ಪ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಮೃತ ರಾಹುಲ್ ತಾಯಿ ಆಟವಾಡಲು ಆತನನ್ನು ಬಿಟ್ಟು ಮತ್ತೊಂದು ಮಗುವಿಗೆ ಊಟ ಮಾಡಿಸುತ್ತಿದ್ದ ವೇಳೆ ದುರ್ಘಟನೆ ನಡೆದಿತ್ತು.
ಬಸ್ ಚಾಲಕರ ಮಾರಾಮಾರಿ
ಖಾಸಗಿ ಹಾಗೂ ಕೆಎಸ್ಆರ್ಟಿಸಿ (KSRTC) ಬಸ್ ಚಾಲಕರ (Bus Drivers) ನಡುವೆ ಮಾರಾಮಾರಿ ನಡೆದ ಘಟನೆ ತುಮಕೂರು (Tumakuru) ಜಿಲ್ಲೆಯ ಪಾವಗಡದಲ್ಲಿ ನಡೆದಿದೆ. ಬಸ್ಗೆ ದಾರಿ ಬಿಡುವ ವಿಚಾರದಲ್ಲಿ ಜಗಳ ನಡೆದು ಮಾರಾಮಾರಿ ನಡೆದಿದೆ. ಪುರಸಭೆಯಿಂದ ಖಾಸಗಿ ಬಸ್ಗಾಗಿ (Private Bus) ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ KSRTC ಬಸ್ ನಿಲ್ಲುತ್ತಿದ್ದವು.
ಸ್ವಂತ ನಿಲ್ದಾಣ ಇಲ್ಲದಿದ್ದಕ್ಕೆ ಖಾಸಗಿ ನಿಲ್ದಾಣದಲ್ಲಿ ಸರ್ಕಾರಿ ಬಸ್ ನಿಂತಿತ್ತು. ಆದರೆ, ದಾರಿ ಬಿಡುವಂತೆ ಖಾಸಗಿ ಬಸ್ ಚಾಲಕ ಮುಸ್ತಪ್ಪಾ, KSRTC ಚಾಲಕನಿಗೆ ಆವಾಜ್ ಹಾಕಿದ್ದಾನೆ. ಬಳಿಕ ಭೋಜರಾಜು ಹಾಗೂ ಮುಸ್ತಪ್ಪ ನಡುವೆ ಗಲಾಟೆ ನಡೆದಿದೆ. ಇಬ್ಬರೂ ಚಾಲಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಚಾಲಕರು ಬಡಿದಾಡಿಕೊಂಡಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಎರಡೂ ಕಡೆಯ ನಾಲ್ವರು ಗಾಯಗೊಂಡಿದ್ದಾರೆ.
ಬಸ್ ಪಲ್ಟಿ, ಪ್ರಯಾಣಿಕರು ಸೇಫ್!
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ (Private Bus) ಹೊಡೆದ ಘಟನೆ ದಾವಣಗೆರೆ (Davanagere) ಹೊರವಲಯದ ಬೇತೂರು ಬಳಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಎಲ್ಲಾ 40 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ