Chikkamagaluru: ಗಣೇಶ ವಿಸರ್ಜಿಸಿ ಹಿಂದಿರುಗುವಾಗ ದುರಂತ; ವಿದ್ಯುತ್ ಪ್ರವಹಿಸಿ ಮೂವರು ಸಾವು, 6 ಜನ ಗಂಭೀರ

ಚೌತಿ ಹಬ್ಬದ ಅಂಗವಾಗಿ ಜಿ.ಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಮಂಗಳವಾರ ರಾತ್ರಿ ಟ್ರ್ಯಾಕ್ಟರ್ ಒಂದರಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ನದಿಯಲ್ಲಿ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು: ಗಣಪತಿ ವಿಸರ್ಜನೆ (Ganesha Visarjana) ಮಾಡಿ ಹಿಂದಿರುಗುತ್ತಿದ್ದ ವೇಳೆ ಟ್ಯಾಕ್ಟರ್​​ನಲ್ಲಿದ್ದ ಮಂಟಪದ ಅಲಂಕೃತ ಕಮಾನಿಗೆ ವಿದ್ಯುತ್ ತಂತಿ (Electric Shock) ತಗುಲಿ ಮೂವರು ಮೃತಪಟ್ಟು(Death), 6 ಮಂದಿ ಗಂಭೀರ ಸ್ಥಿತಿಯಲ್ಲಿರುವ ದಾರುಣ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಲ್ಲಿ (G Hosalli, Mudigere) ಮಂಗಳವಾರ ತಡರಾತ್ರಿ ನಡೆದಿದೆ. ಮೃತರನ್ನು ಜಿ.ಹೊಸಳ್ಳಿ ಗ್ರಾಮದ ರಾಜು (50), ಪಾರ್ವತಿ (28) ಹಾಗೂ ರಚನಾ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಂಗೀತಾ(18) ಎಂಬ ಯುವತಿ ಹಾಗೂ ಪಲ್ಲವಿ(13) ಎಂಬ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ (Hassan District Hospital) ದಾಖಲು ಮಾಡಲಾಗಿದೆ. ಗೌರಿ(40) ಎಂಬ ಮಹಿಳೆ ವಿದ್ಯುತ್ ಪ್ರವಹಿಸಿ ಅಸ್ವಸ್ಥರಾಗಿದ್ದು, ಅವರಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚೌತಿ ಹಬ್ಬದ ಅಂಗವಾಗಿ ಜಿ.ಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಮಂಗಳವಾರ ರಾತ್ರಿ ಟ್ರ್ಯಾಕ್ಟರ್ ಒಂದರಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ನದಿಯಲ್ಲಿ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಟ್ಯಾಕ್ಟರ್​​ಗೆ ಕಟ್ಟಲಾಗಿದ್ದ ಅಲಂಕೃತ ಕಮಾನು ರಸ್ತೆ ಬದಿಯಲ್ಲಿದ್ದ ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮ ಟ್ಯಾಕ್ಟರ್​​ನಲ್ಲಿ ಕುಳಿತಿದ್ದವರಿಗೆ ವಿದ್ಯುತ್ ಪ್ರವಹಿಸಿದೆ. ಚಾಲಕ ಇಂಜಿನ್ ಮೇಲೆ ಕುಳಿತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ.

ಗ್ರಾಮದಲ್ಲಿ ಸೂತಕದ ಛಾಯೆ

ಕಳೆದ ರಾತ್ರಿ ಗಣಪತಿ ವಿಸರ್ಜಿಸಿ ಮನೆಗೆ ಹಿಂದಿರುವಾಗ ಚಾಲಕನ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಖುಷಿ ಖುಷಿಯಿಂದ ಗಣೇಶನ ವಿಸರ್ಜಿಸಿ ಮಾಡಿ ಮನೆಗೆ ವಾಪಸ್ಸು ಆಗುವ ವೇಳೆ ಈ ಅಪಘಾತ ಸಂಭವಿಸಿದ್ದು ಜಿ ಹೊಸಳ್ಳಿ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ‌.

ಜೀವನ್ಮರಣ ಹೋರಾಟದಲ್ಲಿ ಬಾಲಕಿ, ಯುವತಿ

ಇನ್ನು ಘಟನೆಯಲ್ಲಿ ಇಬ್ಬರು ಜೀವನ್ಮರಣ ಹೋರಾಟದಲ್ಲಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ‌. ಟ್ರಾಕ್ಟರ್​​ನಲ್ಲಿ ಕುಳಿತು‌ ಮನೆಗೆ ಆಗಮಿಸುತ್ತಿದ್ದ ಸಂಗೀತಾ ಹಾಗೂ ಪಲ್ಲವಿ ಎಂಬ ಯುವತಿಯರು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.

ಹಬ್ಬದ ವಾತಾವರಣವಿದ್ದ ಮನೆಯಲ್ಲೀಗ ನೀರವ ಮೌನ ಆವರಿಸಿದ್ದು, ಮಕ್ಕಳು ಬದುಕುಳಲ್ಲಿ ಎಂದು ದೇವರಲ್ಲಿ ಪೋಷಕರು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  Kurudumale: ಕುರುಡುಮಲೆ ವಿನಾಯಕ ಬ್ರಹ್ಮ ರಥೋತ್ಸವ ಸಂಪನ್ನ, ಮಳೆಹಾನಿ ತಡೆಯುವಂತೆ ವಿಘ್ನೇಶ್ವರನಲ್ಲಿ ಮನವಿ

ಚಾಲಕ ಪೊಲೀಸರ ವಶಕ್ಕೆ

ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಣಕಲ್ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಗೆ ಸೂಕ್ತ ಕಾರಣವೇನೆಂಬುದನ್ನ ಪತ್ತೆ ಹಚ್ಚುತ್ತಿದ್ದಾರೆ. ಇನ್ನು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದು ಘಟನೆ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ಚಿನ್ನಾಭರಣ ಧರಿಸಿ ಸಿಂಹಾಸನವೇರಿದ ಗಣಪ!

ಮನೆ ಮನೆಯಲ್ಲಿ ಪ್ರತಿಷ್ಟಾಪಿಸಿದ ಗಣಪನಿಗೂ (Ganapa) ಕೊಟ್ಯಾಂತರ ಮೌಲ್ಯದ ಚಿನ್ನಾಭರಣ (Jewellers) ಇದೆ. ಇದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ಪಟ್ಟಣದ ಮಹಾಲೆ ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣಪ. ಈತ ಜಿಲ್ಲೆಯ ಶ್ರೀಮಂತ ಗಣಪ (Rich Ganapa). ಮೈ ತುಂಬ ವಿವಿಧ ಚಿನ್ನಾಭರಣಗಳನ್ನ ಧರಿಸಿ ಚಿನ್ನಾಭರಣ ಭೂಷಿತನಾಗಿದ್ದಾನೆ.

3 people died during ganesha festival by current shock vctv mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ :  Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!

ಸ್ವಾತಂತ್ರ್ಯ ಹೋರಾಟದ (Freedom Fight) ಸಂದರ್ಭದಿಂದಲೂ ಪೂಜಿಸಲ್ಪಡುವ ಮಹಾಲೆ ಮನೆ‌ಗಣಪನ ನೋಡಲು ಸಾವಿರಾರು ಭಕ್ತರು (Devotees) ಆಗಮಿಸುತ್ತಿದ್ದಾರೆ. ಅಂದಾಜು 40kg ಚಿನ್ನಾಭರಣವನ್ನ (40kg Jewellers) ಧರಿಸಿರುವ ಗಣಪನ ಕಣ್ತುಂಬಿಕೊಳ್ಳುವುದೆ ಒಂದು ಭಾಗ್ಯ. ಮುಂಬೈ ಲಾಲ್ ಬಾಗ್ ಚಾ ರಾಜಾ ಹೊರತು ಪಡಿಸಿದ್ರೆ ಅಂಕೋಲಾದಲ್ಲಿ ಮಹಾಲೆ ಮನೆ ಗಣಪನೆ ಶ್ರೀಮಂತ.
Published by:Mahmadrafik K
First published: