HOME » NEWS » State » 3 PEOPLE DIE IN CAR ACCIDENT AT HUMANABAD HK

ಹುಮನಾದಾದ್​​ ನಲ್ಲಿ ಭೀಕರ ರಸ್ತೆ ಅಪಘಾತ ; ಮೂವರ ದುರ್ಮರಣ

ಮೃತರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ತುಳಜಾಪುರದ ಭವಾನಿ ದರ್ಶನ ಪಡೆದು ವಾಪಸಾಗುವಾಗ ದುರ್ಘಟನೆ ನಡೆದಿದೆ.  ಈ ಸಂಬಂಧ ಹುಮನಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

G Hareeshkumar | news18-kannada
Updated:October 1, 2019, 9:14 PM IST
ಹುಮನಾದಾದ್​​ ನಲ್ಲಿ ಭೀಕರ ರಸ್ತೆ ಅಪಘಾತ ; ಮೂವರ ದುರ್ಮರಣ
ಪ್ರಾತಿನಿಧಿಕ ಚಿತ್ರ
  • Share this:
ಬೀದರ್ (ಅ.01) : ಓಮಿನಿ ಕಾರಿಗೆ  ಮಹಿಂದ್ರಾ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಭೀಕರ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ನಡೆದಿದೆ. 

ಮೃತರು ಬೀದರ್ ತಾಲೂಕಿನ ಚಿಲ್ಲಗರೆಯ ತುಕಾರಾಮ ಮಾರುತಿ (55), ರಾಯಪ್ಪ ಘಾಳೆಪ್ಪ (45) ಹಾಗೂ ಶಿವರಾಜ ಪುಂಡಲೀಕ (40) ದಾರುಣ ಅಂತ್ಯ ಕಂಡವರು. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಚಿಲ್ಲಗರೆಯಿಂದ ಸೋಮವಾರ ರಾತ್ರಿ ತುಳಜಾಪುರ ಭವಾನಿ ದರ್ಶನಕ್ಕೆ 12 ಜನ ಓಮಿನಿಯಲ್ಲಿ ತೆರಳಿದ್ದರು. ಮಂಗಳವಾರ ದರ್ಶನ ಪಡೆದ ಬಳಿಕ ವಾಪಸಾಗುವಾಗ ಹೊರಯವಲಯದ ನೂರ್ ಧಾಬಾ ಹತ್ತಿರ ವೇಗದಿಂದ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಓಮಿನಿ ಪಲ್ಟಿ ಹೊಡೆದಿದೆ.

ತೀವ್ರ ಗಾಯಗೊಂಡಿದ್ದ ಶಿವರಾಜ ಹುಮನಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಬೀದರ್ ಜಿಲ್ಲಾಸ್ಪತ್ರೆಯಲ್ಲಿ ತುಕಾರಾಮ, ರಾಯಪ್ಪ ಕೊನೆಯುಸಿರೆಳೆದಿದ್ದಾರೆ. ಬಾಲಮ್ಮ, ಸತೀಶ, ಮಹೇಶ, ನಾಗಮ್ಮ, ಪಾರಮ್ಮ, ನರಸಿಂಗ, ಸುನೀತಾ, ದೇಗನಾಥ ಹಾಗೂ ಓಮ್ನಿ ಚಾಲಕ ಕಾಸಿಂ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ವಿಜಯಪುರದಲ್ಲಿ ಭೀಕರ ಅಪಘಾತ; ಭೀಮಾ ತೀರದ ಹಂತಕ ಭಾಗಪ್ಪ ಹರಿಜನ‌ ಹೆಂಡತಿ ಸಾವು

ಘಟನೆ ಸಂಬಂಧ ಹುಮನಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
First published: October 1, 2019, 8:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories