BBMP: ದುಡ್ಡು ಉಳಿಸಲು ಹೋಗಿ ಎಡವಟ್ಟು ಮಾಡಿಕೊಳ್ತಾ ಬಿಬಿಎಂಪಿ? ಕಳಪೆ ಕಾಮಗಾರಿ; ಗುತ್ತಿಗೆದಾರನಿಗೆ 3 ಲಕ್ಷ ದಂಡ!

ಬಿಬಿಎಂಪಿ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೊಟ್ಟಿತ್ತು. ಇದೀಗ ಗುತ್ತಿಗೆದಾರನಿಗೆ ಪಾಲಿಕೆ 3 ಲಕ್ಷ ರೂಪಾಯಿ ದಂಡ ಹಾಕಿದೆ. 

ಬಿಬಿಎಂಪಿ

ಬಿಬಿಎಂಪಿ

  • Share this:
ಪ್ರಧಾನಿ ನರೇಂದ್ರ ಮೋದಿಗಾಗಿ (Narendra Modi)  ಹಾಕಿದ ಟಾರು ಮೂರನೇ ದಿನಕ್ಕೆ ಕಿತ್ತು ಬಂದ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಬಿಬಿಎಂಪಿ (BBMP) ಗುತ್ತಿಗೆದಾರರಿಗೆ (Contractor) ದಂಡ ಹಾಕಿ ನಮ್ಮದೇನು ತಪ್ಪಿಲ್ಲ ಎಂಬ ವಾದದಲ್ಲಿದೆ.‌ ಆದರೆ ಅಸಲಿಗೆ ಪಾಲಿಕೆ ಡಾಂಬರೀಕರಣಕ್ಕೆ ಪಾಲಿಸಬೇಕಾದ ನಿಯಮಗಳನ್ನೇ ಗಾಳಿಗೆ ತೂರಿರುವುದು ಈಗ ಬಯಲಾಗಿದೆ.

ಮೂವರು ಅಧಿಕಾರಿಗಳಿಗೆ  ನೋಟಿಸ್; 3 ಲಕ್ಷ ದಂಡ

ಮೊನ್ನೆ ಮೊನ್ನೆಯಷ್ಟೇ ಪ್ರದಾನಿ ಮೋದಿ ನಗರಕ್ಕೆ ಬಂದಿದ್ದರು. ಪ್ರಧಾನಿ ಆಗಮನದ ಹಿನ್ನೆಲೆ ಬಿಬಿಎಂಪಿ ಮೋದಿ ಓಡಾಡುವ ರಸ್ತೆಗಳನ್ನೆಲ್ಲಾ ಡಾಂಬಾರು ಹಾಕಿ ಅಂದವಾಗಿ ಕಾಣುವಂತೆ ಮಾಡಲಾಗಿತ್ತು. ಆದರೆ ಆ ರಸ್ತೆಗಳೆಲ್ಲಾ ಮೂರೇ ದಿನಕ್ಕೆ ಕಿತ್ತು ಬಂದು ಭಾರೀ ಸುದ್ದಿಯಲ್ಲಿತ್ತು. ಈ ಪ್ರಕರಣದ ಬಗ್ಗೆ ಸ್ವತಃ ಪ್ರಧಾನಿ ಆಪ್ತ ಕಾರ್ಯಾಲಯವೇ ವರದಿ ಕೇಳಿ ಸರ್ಕಾರಕ್ಕೆ ಸೂಚಿಸಿತ್ತು. ಈ ಬೆಳವಣಿಗೆ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಈ ಸಂಬಂಧ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೊಟ್ಟಿತ್ತು. ಇದೀಗ ಗುತ್ತಿಗೆದಾರನಿಗೆ ಪಾಲಿಕೆ 3 ಲಕ್ಷ ರೂಪಾಯಿ ದಂಡ ಹಾಕಿದೆ.

ಕಡಿಮೆ ಖರ್ಚಿನಲ್ಲಿ ಡಾಂಬರ್ ಹಾಕ್ತೀವಿ ಅಂತ ಎಡವಿತಾ ಬಿಬಿಎಂಪಿ?

ಆದರೆ ವಾಸ್ತವದಲ್ಲಿ ಬಿಬಿಎಂಪಿ ಡಾಂಬರೀಕರಣದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರ್ಲಕ್ಷ್ಯ ವಹಿಸಿರುವುದು ಬಯಲಾಗಿದೆ. ಡಾಂಬರ್ ಹಾಕುವ ವಿಚಾರದಲ್ಲಿ ಪಾಲಿಕೆಗಾದ ಮುಜುಗರ ತಪ್ಪಿಸಿಕೊಳ್ಳಲು ದಂಡ ಅಸ್ತ್ರ ಪ್ರಯತ್ನ ಮಾಡಿದೆಯಾದರೂ, ಡಾಂಬರೀಕರಣದ ವೇಳೆ ಬಿಬಿಎಂಪಿ ಮಾಡಿರುವ ಎಡವಟ್ಟು ಒಂದೆರಡಲ್ಲ. ಪಾಲಿಕೆ ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮದ ಪ್ರಕಾರ ಡಾಂಬರ್ ಹಾಕಿಲ್ಲ ಅನ್ನೋದು ಈಗ ಬಟಾಬಯಲಾಗಿದೆ.

ಇದನ್ನೂ ಓದಿ:  Chikkamagaluru: ಮಳೆಗಾಲದಲ್ಲಿ ಮರಗಳ ಸಾಗಾಟದಿಂದ ಭೂಕುಸಿತದ ಭೀತಿ; ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಿ

ಬಿಬಿಎಂಪಿ ಹೇಳುತ್ತಿರೋದೇನು..?

- ಗುಣಮಟ್ಟದ ಡಾಂಬರ್ ಬಳಕೆ ಮಾಡಲಾಗಿದೆ
- ನೀರು ಸೋರಿಕೆಯಿಂದ ಹಾಕಿರೋ ಡಾಂಬರ್ ಕಿತ್ತು ಬಂದಿದೆ
- ಮಳೆ ಬಂದಿದ್ದರಿಂದ ಗುಣಮಟ್ಟದ ಡಾಂಬರ್ ಕಿತ್ತು ಬಂದಿದೆ
- ಕಳಪೆ ಗುಣಮಟ್ಟದ ಡಾಂಬರ್ ಬಳಸಿದ್ರೂ ನಮ್ಮದು ತಪ್ಪಿಲ್ಲ ಅಂತಿದೆ ಬಿಬಿಎಂಪಿ

ನಿಯಮ ಏನು ಹೇಳುತ್ತೆ..?

- 10 MM  ಜೆಲ್ಲಿ ಬಳಸಿ ಡಾಂಬರ್ ಹಾಕಬೇಕು
- ಕನಿಷ್ಠ 120 ರಿಂದ 140 ಡಿಗ್ರಿ ಬಿಸಿಯಲ್ಲಿ ಡಾಂಬರ್ ಇರಬೇಕು
- ಡಾಂಬರ್ ಹಾಕುವ ಮೊದಲು ರಸ್ತೆಯನ್ನ ಕ್ಲೀನ್ ಮಾಡಬೇಕು
ಬಿಬಿಎಂಪಿ ಬಳಸಿದ್ದೇನು..?

- ಸ್ಟೋನ್ ಡಸ್ಟ್ ಬಳಸಿ ಡಾಂಬರ್ ಹಾಕಲಾಗಿದೆ
- ಡಾಂಬರ್ ಜತೆಗೆ ಗಮ್ ಬದಲು ಸೀಮೆ ಎಣ್ಣೆ ಬಳಸಿದೆ
- 80 ರಿಂದ 90 ಡಿಗ್ರಿ ಬಿಸಿಯಲ್ಲಿ ಡಾಂಬರ್ ಹಾಕಲಾಗುತ್ತಿದೆ

ಅವೈಜ್ಞಾನಿಕವಾಗಿ ಡಾಂಬರೀಕರಣ

ಹೀಗೆ ಬಿಬಿಎಂಪಿ ಅವೈಜ್ಞಾನಿಕವಾಗಿ ಡಾಂಬರೀಕರಣ ಮಾಡುತ್ತಿದೆ. ನಿಯಮ ಇರುವುದೊಂದು ಪಾಲಿಕೆ ಅನುಸರಿಸುತ್ತಿರುವುದು ಮತ್ತೊಂದು ಎಂಬಂತಾಗಿದೆ. ಈಗ ಈ ಪ್ರಕರಣವನ್ನೂ ದಂಡ ವಸೂಲಿ ಮಾಡಿ ತಮ್ಮೆಲ್ಲಾ ತಪ್ಪುಗಳನ್ನು ಪಾಲಿಕೆ ಮುಚ್ಚಿಹಾಕುವ ತಂತ್ರಗಾರಿಕೆ ಮಾಡಿಕೊಂಡಿದೆ.‌

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗ್ತಿದೆ ಕಳಪೆ ಕಾಮಗಾರಿ

ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ರಾಜಧಾನಿಗೆ ಬಂದಾಗ ಅವರು ಸಂಚರಿಸುವ ರಸ್ತೆಗಳ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆದಿತ್ತು. ಆದರೆ ಪ್ರಧಾನಿ ಭೇಟಿ ಬಳಿಕ ಅದೇ ರಸ್ತೆಯಲ್ಲಿ ಗುಂಡಿಗಳು ಕಂಡುಬಂದಿದ್ದವು. ಕಳಪೆ ಕಾಮಗಾರಿ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿತ್ತು.

ಇದನ್ನೂ ಓದಿ:  Karnataka Politics: ಈ ಕಾರಣಕ್ಕೆ ಜಿ ಟಿ ದೇವೇಗೌಡರ ಮೇಲೆ ಮುನಿಸಿಕೊಂಡ್ರಾ ಸಿದ್ದರಾಮಯ್ಯ?

11.50 ಕೋಟಿ ರೂ. ವೆಚ್ಚದಲ್ಲಿ 9 ಕಿಲೋಮೀಟರ್ ರಸ್ತೆ ನಿರ್ಮಾಣ

ನಂತರ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡುವಂತೆ ಸಿಎಂ ಕಚೇರಿಯಿಂದ ಸೂಚನೆ ನೀಡಲಾಗಿತ್ತು. 11.50 ಕೋಟಿ ರೂ. ವೆಚ್ಚದಲ್ಲಿ 9 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿ ಮಾಡಿದ ಸಂಬಂಧ ಮೂವರು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ಶೋಕಾಸ್ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದರು.
Published by:Pavana HS
First published: