ಗದಗ ಜಿಲ್ಲೆಯ ರೋಣ ಪಟ್ಟಣದ (Rona, Gadag) ಸಾರಿಗೆ ಇಲಾಖೆ ಡಿಪೋ ಸಮೀಪ ಭೀಕರ ಕಾರ್ ಅಪಘಾತ (Car Accident) ಸಂಭವಿಸಿ ಮೂವರು ಯುವಕರು (Youth) ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ. ನೋಡು ನೋಡುತ್ತಿದ್ದಂತೆ ಸುಟ್ಟು ಕರಕಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಆಸ್ಪತ್ರೆಗೆ (Hubballi Hospital) ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಗೆಳೆಯ(Friend)ನನ್ನು ಭೇಟಿಯಾಗಲು ನಾಲ್ವರು ಕಾರ್ ನಲ್ಲಿ ರೋಣ ಪಟ್ಟಣಕ್ಕೆ ಆಗಮಿಸಿದ್ದರು. ಗೆಳೆಯನ ಆರೋಗ್ಯ ವಿಚಾರಿಸಿ ಗದಗಗೆ ಹಿಂದಿರುಗುವ ವೇಳೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿ ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ. ಮೂರು ಜನ ಯುವಕರು ದುರಂತ ಸಾವನ್ನಪ್ಪಿದ್ದಾರೆ. ಅದೇ ರಸ್ತೆಯಲ್ಲಿ ಹೊರಟಿದ್ದ ಲಾರಿ ಚಾಲಕನೊಬ್ಬ ಜೀವದ ಹಂಗು ತೊರೆದು ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರ್ ನಲ್ಲಿದ್ದ ನಾಲ್ಕು ಯುವಕರನ್ನು ಬದುಕುಳಿಸಲು ಪ್ರಯತ್ನ ಮಾಡಿದ್ದಾನೆ.
ಕಾರ್ ನಿಂದ ಹೊರ ತೆಗೆಯುತ್ತಿದ್ದಂತೆ ಮೂವರ ಉಸಿರು ಹಾರಿ ಹೋಗಿದೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Tumkur: ಪಾವಗಡ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಕೊಡಿ- ಕುಮಾರಸ್ವಾಮಿ ಆಗ್ರಹ
ಮೃತರೆಲ್ಲರೂ ಕುಚಿಕು ಗೆಳೆಯರು
ಮೃತ ಯುವಕರು ಗದಗ ನಗರದವರಾಗಿದ್ದಾರೆ. ನಗರದ ನಾಲ್ವಾಡ ಗಲ್ಲಿ 19 ವರ್ಷದ ದರ್ಶನ್ ರಾಜಪುರೋಹಿತ, ತಾಜ್ ನಗರದ 22 ವರ್ಷದ ಶೌಕತ್ ಅಲಿ ಪಠಾಣ, 25 ವರ್ಷದ ಮೆಹಪೂಜ್ ಮೃತ ದುರ್ದೈವಿಗಳು ಎನ್ನಲಾಗಿದೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯಾಹ್ನ 3ಕ್ಕೆ ಗದಗನಿಂದ ಹೊರಟಿದ್ರು
25 ವರ್ಷದ ಮೆಹಪೂಜ್ ಉಪವಾಸವಿದ್ದ, ಹೀಗಾಗಿ ಮನೆ ಬಿಟ್ಟು ಹೋಗದೇ ಮನೆಯಲ್ಲೇ ಇದ್ದನು. ಆದ್ರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ನೇಹಿತನ ಫೋನ್ ಕಾಲ್ ಬಂದಿದೆ. ತಕ್ಷಣ ಅಮ್ಮಾ ನಾನು ಸ್ವಲ್ಪ ಹೋಗಿ ಬರ್ತೀನಿ ಅಂತಿದ್ದಾನೆ. ದರ್ಶನ್ ಕೂಡ ಮನೆಯಲ್ಲಿ ಗೆಳೆಯನಿಗೆ ಆಕ್ಸಿಡೆಂಟ್ ಆಗಿದೆ ಮಾತನಾಡಿಕೊಂಡು ಬರ್ತೀನಿ ಅಂತ ಹೋಗಿದ್ದಾರೆ. ಆದ್ರೆ, ಮನೆಗೆ ವಾಪಸ್ ಅಗಿದ್ದು ಮಾತ್ರ ಹೆಣವಾಗಿ.
ಮೆಹಪೂಜ್ ಮನೆಬಿಟ್ಟು ಹೊರ ಬರದಿದ್ರೆ. ಇವತ್ತು ನಾಗಪೂರದಲ್ಲಿ ಇರ್ತಿದ್ದನಂತೆ. ಹೌದು ಕುಟುಂಬ ಸಮೇತ ನಿನ್ನೆ ರಾತ್ರಿ ರೈಲ್ವೇ ಮೂಲಕ ದೆಹಲಿಗೆ ದರ್ಗಾ ದರ್ಶನಕ್ಕೆ ಹೊರಟಿದ್ದರು. ಆದ್ರೆ, ಜವರಾಯ ಮನೆಯಲ್ಲಿದ್ದ ಯುವಕನನ್ನು ಕರೆಸಿಕೊಂಡು ಬಲಿ ಪಡೆದಿದ್ದಾನೆ.
ಕುಟುಂಬಗಳಲ್ಲಿ ಸೂತಕದ ಛಾಯೆ
ದೇವರ ದರ್ಶನದ ಸಂಭ್ರಮದಲ್ಲಿ ಇರಬೇಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ ಆವರಿಸಿದೆ. ಮೆಹಪೂಜ್ ಹೆತ್ತವರಿಗೆ ಒಬ್ಬನೇ ಪುತ್ರ. ಇದ್ದೊಬ್ಬ ಪುತ್ರನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಎಲ್ಲರೂ ಕೂಡಿಯೇ ಶಿಕ್ಷಣ ಕಲಿತ ಕುಚ್ಚಿಕು ಗೆಳೆಯರು ಈಗ ಸಾವಿನಲ್ಲೂ ಒಂದಾಗಿದ್ದಾರೆ.
ಇದನ್ನೂ ಓದಿ: DC Grama vastavya: ಮೇದಿನಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ, ಕುಗ್ರಾಮದ ಜನರ ಸಮಸ್ಯೆ ಆಲಿಸಿದ ಡಿಸಿ
ತುಮಕೂರು ಬಸ್ ಅಪಘಾತದಲ್ಲಿ ಅಕ್ಕ-ತಂಗಿ ಸಾವು
ಪಾವಗಡ ತಾಲೂಕಿನ ಪೋತಾಗಾನಹಳ್ಳಿಯ ಹರ್ಷಿತಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital, Bengaluru) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಹರ್ಷಿತಾ ಸಾವನ್ನಪ್ಪಿದ್ದಾಳೆ. ಅಪಘಾತಕ್ಕೆ ಒಳಗಾದ ಬಸ್ ನಲ್ಲಿಯೇ ಹರ್ಷಿತಾ ತನ್ನ ತಂಗಿ ಅಮೂಲ್ಯ ಜೊತೆ ಪ್ರಯಾಣಿಸುತ್ತಿದ್ದಳು. ಅಮೂಲ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಹರ್ಷಿತಾಳನ್ನ ಆಸ್ಪತ್ರೆಗೆ (Hospital) ದಾಖಲಿಸಿ, ಪೋಷಕರು ಅಮೂಲ್ಯಳ ಅಂತ್ಯಕ್ರಿಯೆಗೆ (Last Rites) ಸಿದ್ಧತೆ ನಡೆಸುತ್ತಿದ್ದರು. ಈ ಸಮಯದಲ್ಲಿ ಹರ್ಷಿತಾಳ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರ ಸಿಡಿಲಿನಂತೆ ಬಡಿದಿದೆ. ಕೊನೆಗೆ ಇಬ್ಬರ ಅಂತ್ಯಕ್ರಿಯಯನ್ನು ಜೊತೆಯಾಗಿಯೇ ನೆರವೇರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ