• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gadaga: ಕೃಷಿಹೊಂಡದಲ್ಲಿ ಬಿದ್ದು ಮೂವರು ಬಾಲಕಿಯರ ಸಾವು! ಮದುವೆ ಮನೆಯಲ್ಲಿ ಸೂತಕದ ಛಾಯೆ

Gadaga: ಕೃಷಿಹೊಂಡದಲ್ಲಿ ಬಿದ್ದು ಮೂವರು ಬಾಲಕಿಯರ ಸಾವು! ಮದುವೆ ಮನೆಯಲ್ಲಿ ಸೂತಕದ ಛಾಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂವರು ಮಕ್ಕಳು ಬಾಯಾರಿಗೆ ಅಂತ ಹೇಳಿಕೊಂಡು ನೀರು ಕುಡಿಯಲು ಬಂದಿದ್ರು. ಇದೇ ವೇಳೆ ಕಾಲು ಕಾರಿ ಬಿದ್ದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಊರಿನ ಜನ ಮಕ್ಕಳ ಮೃತದೇಹ ಮೇಲೆತ್ತಿದ್ದಾರೆ.

  • Share this:

ಗದಗ(ಮೇ.17): ಗದಗ (Gadaga) ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದ ಹೊರವಲಯದಲ್ಲಿರುವ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮೂವರ ಬಾಲಕಿಯರ ಮೃತಪಟ್ಟಿದ್ದಾರೆ. ಹೌದು ಅತ್ತಿಕಟ್ಟಿ ತಾಂಡಾದ ಸುನಿತಾ ಲಮಾಣಿ (13) ಅಂಕಿತಾ ಲಮಾಣಿ (10) ಹಾಗೂ ಡೋಣಿ ತಾಂಡಾದ ಸುನಿತಾ (11) ಮೃತ ಬಾಲಕಿಯರು ಎಂದು ತಿಳಿದು ಬಂದಿದೆ‌. ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ ಮೂವರು ಬಾಲಕಿಯರು,ಆಟವಾಡುತ್ತ ಕೃಷಿ ಹೊಂಡಕ್ಕೆ (Krishi Honda) ತೆರಳಿದ್ರು. ಮಧ್ಯಾಹ್ನದ ಬಿರು ಬಿಸಿಲಿನ ಹಿನ್ನೆಲೆ ಬಾಯಾರಿಕೆಯಾಗಿ ನೀರು (Water) ಕುಡಿದು ಕೈಕಾಲು ಮುಖ ತೊಳೆದುಕೊಳ್ಳಲು ಮುಂದಾಗಿದ್ದರು.


ಆದ್ರೆ ಆಯತಪ್ಪಿ ಹೊಂಡದಲ್ಲಿ ಬಿದ್ದ ಮೃತ ಪಟ್ಟ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅತ್ತಿಕಟ್ಟಿ ತಾಂಡಾದ ಲಕ್ಷ್ಮಣ ಲಮಾಣಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಗೋವಿಂದನ ಮದುವೆ (Marriage) ಹಿನ್ನೆಲೆ ಕುಟುಂಬ ಸಮೇತ ತಾಂಡಾಕ್ಕೆ ಬಂದಿದ್ದರು. ಮದುವೆ ಮನೆಯಲ್ಲಿ 15 ರಿಂದ 20 ಮಕ್ಕಳ ತಂಡವೇ ಸೇರಿತ್ತು. ಮಕ್ಕಳು ಗುಂಪು ಕಟ್ಕೊಂಡು ಆಟ ಆಡಿಕೊಂಡಿದ್ದರು. ಕುರಿಗಳ ಜೊತೆಗೆ ಹೋಲಕ್ಕೆ ಹೋಗಬೇಕು ಅಂತಾ ನಿರ್ಧರಿಸಿದ್ದ ಮಕ್ಕಳು ಗುಂಪು ಜೊತೆಗೆ ಚಿಕ್ಕಪ್ಪ  ಗೋವಿಂದ ಅವರೂ ಬಂದಿದ್ದರು‌.


ಗೋವಿಂದ ಹಾಗೂ ಕೆಲ ಮಕ್ಕಳು ಜಮೀನಲ್ಲಿ ಮೇವು ಕತ್ತರಿಸಲು ಮುಂದಾಗಿದ್ರು. ಆದ್ರೆ ಮೂವರು ಮಕ್ಕಳು ಬಾಯಾರಿಗೆ ಅಂತ ಹೇಳಿಕೊಂಡು ನೀರು ಕುಡಿಯಲು ಬಂದಿದ್ರು. ಇದೇ ವೇಳೆ ಕಾಲು ಕಾರಿ ಬಿದ್ದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಊರಿನ ಜನ ಮಕ್ಕಳ ಶವ ಮೇಲೆತ್ತಿದ್ದಾರೆ.


ಅಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡುವ ಹೊತ್ತಲ್ಲೇ ಇಬ್ಬರ ಶವ ಆಚೆ ತೆಗೆಯಲಾಗಿತ್ತು‌. ಸ್ಥಳೀಯರ ಸಹಾಯದಿಂದ ಸಂಜೆ ಸುನಿತಾ ಅನ್ನೋ ಬಾಲಕಿಯ ಶವವನ್ನೂ ಆಚೆ ತೆಗೆಯಲಾಗಿದೆ.


ಮದುವೆ ಮನೆಯಲ್ಲಿ ಆವರಿಸಿದ ಸೂತಕದ ಛಾಯೆ


ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಲಮಾಣಿ ಕುಟುಂಬದಲ್ಲಿ  ಇದೇ ತಿಂಗಳ 22 ಕ್ಕೆ ಮದ್ವೆ ನಿಶ್ಚಯವಾಗಿತ್ತು. ಮದ್ವೆಯ ತಯಾರಿಯೂ ಜೋರಾಗಿತ್ತು. ಆದ್ರೆ, ಸದ್ಯ ಮಕ್ಕಳ ದಾರುಣ ಸಾವು ಕುಟುಂಭಕ್ಕೆ ಬರಸಿಡಲ ಆಘಾತ ನೀಡಿದೆ. ಕೃಷಿ ಹೊಂಡಕ್ಕೆ ತಡೆಗೋಡಿ ನಿರ್ಮಿಸಿದ್ದರೆ ಮಕ್ಕಳು ಉಳಿಯುತ್ತಿದ್ದರು.


ಇದನ್ನೂ ಓದಿ: School Reopening: ಟೆಂಟ್​ನಲ್ಲಿ ಶಾಲೆ, ಬೀದಿಯಲ್ಲಿ ಮಕ್ಕಳಿಗೆ ಪಾಠ! ಮೊದಲ ದಿನವೇ ಈ ಅವಸ್ಥೆ


ಕೃಷಿ ಹೊಂಡ ಬಸವರಾಜ್ ಅನ್ನೋರಿಗೆ ಸೇರಿದೆ.ಅಗತ್ಯಕ್ಕಿಂತ ಹೆಚ್ಚಿಗೆ ಆಳದಲ್ಲಿ ಕೃಷಿ ಹೊಂಡ ತೋಡಲಾಗಿದೆ. ಆದ್ರೆ, ಸುರಕ್ಷತೆ ಕ್ರಮಗಳನ್ನ ಕೈಗೊಂಡಿಲ್ಲ ಹೀಗಾಗಿ ಘಟನೆ ನಡೆದಿದೆ. ಕೃಷಿಹೊಂಡದ ಸುತ್ತ ತಡೆಗೋಡೆ ಸಹ ಇಲ್ವಂತೆ. ಸುರಕ್ಷತೆ ಗೇಟ್ ಅಳವಡಿಸಿದ್ರೆ ಸಮಸ್ಯೆ ಆಗ್ತಿರಲಿಲ್ಲ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ‌.


ಘಟನಾ ಸ್ಥಳಕ್ಕೆ ತಹಶೀಲ್ದಾರ್ ಆಶಪ್ಪ ಪೂಜಾರಿ, ಪೊಲೀಸ್ ಇನ್ಸಪೆಕ್ಟರ್ ಸುನಿಲ್ ಸವದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Actress Death: ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ದುರ್ಮರಣ! ಫ್ಯಾಟ್ ಸರ್ಜರಿ ವೇಳೆ ಚೇತನಾ ರಾಜ್ ಸಾವು


ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಯುವ ನಟಿಯೊಬ್ಬರು (Actress) ಮೃತಪಟ್ಟಿದ್ದಾರೆ. ಧಾರಾವಾಹಿ ನಟಿ (Serial Actress) ಚೇತನಾ ರಾಜ್ (Chratana Raj) ಎಂಬುವರು ನಿಧನರಾಗಿದ್ದಾರೆ. ಫ್ಯಾಟ್ ಸರ್ಜರಿ (Fat Surgery) ವೇಳೆ ಆಸ್ಪತ್ರೆಯಲ್ಲೇ (Hospital) ಚೇತನಾ ಸಾವನ್ನಪ್ಪಿದ್ದು, ವೈದ್ಯರ (Doctor) ವಿರುದ್ಧ ಮೃತಳ ಕುಟುಂಬಸ್ಥರು (Family) ಆಕ್ರೋಶ ವ್ಯಕ್ತಪಡಿಸಿದ್ದಾರೆ.

top videos
    First published: