Accident: ಉಂಚಳ್ಳಿ ಜಲಪಾತ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಮೂವರ ದುರ್ಮರಣ

ಪ್ರವಾಸದಿಂದ ಹಿಂತಿರುಗಿ ಬರುವಾಗ ಕೋಡ್ನಮನೆ ಸಮೀಪದ ತಿರುವಿನಲ್ಲಿ ಆಯತಪ್ಪಿ ಕೋಡನಮನೆ ಹಳ್ಳಕ್ಕೆ ಕಾರು ಬಿದ್ದಿದ್ದು,ಗುರುವಾರ ಸ್ಥಳೀಯರು ಹೊಳೆಯಲ್ಲಿ ಕಾರನ್ನು ಗಮನಿಸಿದ್ದು, ಕಾರಿನಿಂದ ಮೂವರ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಹಳ್ಳಕ್ಕೆ ಬಿದ್ದ ಕಾರು

ಹಳ್ಳಕ್ಕೆ ಬಿದ್ದ ಕಾರು

 • Share this:
  ಕಾರವಾರ(ಅಕ್ಟೋಬರ್​. 15): ಚಾಲಕನ ನಿಯಂತ್ರಣ ತಪ್ಪಿ ಉಂಚಳ್ಳಿ ಜಲಪಾತ ವೀಕ್ಷಣೆಗೆ ಹೋಗಿ ವಾಪಾಸ್ ಬರುತ್ತಿದ್ದಾಗ ಕಾರೊಂದು ಹಳ್ಳಕ್ಕೆ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸಮೀಪದ ಕೊಡ್ನಮನೆಯಲ್ಲಿ ನಡೆದಿದೆ. ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿ ಒಟ್ಟೂ ಮೂವರ ಶವ ದೊರೆತಿದ್ದು, ಇನ್ನೊಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕಾರಿನ ನಿಯಂತ್ರಣ ತಪ್ಪಿ ಕಾರಿನ ಸಮೇತ ತುಂಬಿ ಹರಿಯುತ್ತಿರುವ ಹಳ್ಳಕ್ಕೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ಸಂಜೆಯ ವೇಳೆಗೆ ಈ ಘಟನೆ ಜರುಗಿದ್ದು, ಗುರುವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಈ ಕಾರು ಧಾರವಾಡದ ನೊಂದಣಿ ಸಂಖ್ಯೆಯಿದ್ದು, ಹುಬ್ಬಳ್ಳಿಯವರು ಎನ್ನಲಾಗಿದೆ. ಮೂವರು 25 ವರ್ಷದ ಒಳಗಿನವರಾಗಿದ್ದು, ಸಿದ್ದಾಪುರದ ಉಂಚಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.‌


  ಪ್ರವಾಸದಿಂದ ಹಿಂತಿರುಗಿ ಬರುವಾಗ ಕೋಡ್ನಮನೆ ಸಮೀಪದ ತಿರುವಿನಲ್ಲಿ ಆಯತಪ್ಪಿ ಕೋಡನಮನೆ ಹಳ್ಳಕ್ಕೆ ಕಾರು ಬಿದ್ದಿದ್ದು, ನೀರಿನ ರಭಸಕ್ಕೆ 100 ಮೀ. ತೆಲಿಕೊಂಡು ಹೋಗಿದೆ. ಗುರವಾರ ಸ್ಥಳೀಯರು ಹೊಳೆಯಲ್ಲಿ ಕಾರನ್ನು ಗಮನಿಸಿದ್ದು, ಕಾರಿನಿಂದ ಮೂವರ ಮೃತದೇಹವನ್ನು ಹೊರ ತೆಗೆಯಲಾಗಿದೆ.

  ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಶಿರಸಿ ಡಿವೈಎಸ್ಪಿ ಜಿ.ಟಿ.ನಾಯಕ ಸೇರಿದಂತೆ ಸಿದ್ದಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  ಇದನ್ನೂ ಓದಿ : ಕಲಬುರ್ಗಿಯಲ್ಲಿ ಮಳೆ ಇಳಿಮುಖವಾದರೂ ನಿಲ್ಲದ ಪ್ರವಾಹ ; ಗೋವುಗಳೊಂದಿಗೆ ಎತ್ತರದ ಕಟ್ಟಡವೇರಿ ಕುಳಿತ ಅರ್ಚಕ

  ನಿನ್ನೆ ಶಿರಸಿ, ಸಿದ್ದಾಪುರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಾಗಾಗಿ ಕಾರಿನ ಚಾಲಕನಿಗೆ ತಿರುವಿನಲ್ಲಿ ರಸ್ತೆ ಸರಿಯಾಗಿ ಕಾಣದೆ ಹಳ್ಳದಲ್ಲಿ ಹೋಗಿ ಬಿದ್ದಿದೆ ಎನ್ನಲಾಗಿದೆ.
  Published by:G Hareeshkumar
  First published: