ಬೀದರ್​ ನಲ್ಲಿ ಲಾರಿ ಹರಿದು ಸ್ಥಳದಲ್ಲೇ ಮೂವರ ದಾರುಣ ಸಾವು

ಈ ಮೂವರು ಗೂಡ್ಸ್  ವಾಹನದಲ್ಲಿ ಈರುಳ್ಳಿ ತುಂಬಿಕೊಂಡು ಮನ್ನಾಎಖೇಳಿ ಕಡೆಗೆ ಹೊರಟಿದ್ದರು. ಈ ವೇಳೆ  ವಾಹನದ ಟೈರ್ ಪಂಕ್ಚರ್ ಆಗಿದ್ದರಿಂದ ಮಿನಕೇರಾ ಪ್ಲೈಓವರ್ ಮೇಲೆ ಮತ್ತೊಂದು ಟೈರ್ ಜೋಡಣೆ ಮಾಡುತ್ತಿದ್ದರು‌.

G Hareeshkumar | news18-kannada
Updated:January 22, 2020, 9:53 AM IST
ಬೀದರ್​ ನಲ್ಲಿ ಲಾರಿ ಹರಿದು ಸ್ಥಳದಲ್ಲೇ ಮೂವರ ದಾರುಣ ಸಾವು
ಸಾಂದರ್ಭಿಕ ಚಿತ್ರ.
  • Share this:
ಬೀದರ್​​ (ಜ.22) :  ವಾಹನದ ಟೈರ್ ಜೋಡಿಸುತ್ತಿದ್ದ ವೇಳೆ ಲಾರಿ ಹರಿದು‌ ಮೂವರು‌ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 9ರ ಮಿನಕೇರಾ ಕ್ರಾಸ್ ಫ್ಲೈ ಓವರ್ ಬಳಿ ಇಂದು ಬೆಳಿಗ್ಗೆ ನಡೆದಿದೆ‌.

ಮೃತರನ್ನು ಅನ್ಸರ್ ಬಸಂತಪೂರ್ (32), ವಿಜಯ ಕುಮಾರ್ ಬಸಂತಪೂರ್ (24), ಇಸ್ಮಾಯಿಲ್ (25) ಎಂದು ಗುರುತಿಸಲಾಗಿದೆ.

ಈ ಮೂವರು ಗೂಡ್ಸ್  ವಾಹನದಲ್ಲಿ ಈರುಳ್ಳಿ ತುಂಬಿಕೊಂಡು ಮನ್ನಾಎಖೇಳಿ ಕಡೆಗೆ ಹೊರಟಿದ್ದರು. ಈ ವೇಳೆ  ವಾಹನದ ಟೈರ್ ಪಂಕ್ಚರ್ ಆಗಿದ್ದರಿಂದ ಮಿನಕೇರಾ ಪ್ಲೈಓವರ್ ಮೇಲೆ ಮತ್ತೊಂದು ಟೈರ್ ಜೋಡಣೆ ಮಾಡುತ್ತಿದ್ದರು‌. ಈ ವೇಳೆ ಲಾರಿ ಹರಿದು ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆ - ಗಣರಾಜ್ಯೋತ್ಸವಕ್ಕೆ ಎಲ್ಲ ರೀತಿಯ ಭದ್ರತೆ ; ವಿ.ಸೋಮಣ್ಣ

ಸ್ಥಳಕ್ಕೆ ಬೀದರ್​ ಗ್ರಾಮೀಣ ಪೊಲೀಸ ಠಾಣೆಯ ಸಿಪಿಐ ಸಾವಳಗಿ ಹಾಗೂ ಬಗದಲ್​​​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ