Mysore Palace: ಇಂದಿನಿಂದ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಪುನೀತ್ ಹಾಗೂ ಬಿಪಿನ್ ರಾವತ್​​ಗೆ ಪುಷ್ಪ ನಮನ

Flower Show: ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಯಾರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದುಕೊಂಡಿರುತ್ತಾರೋ ಅವರಿಗೆ ಮಾತ್ರ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿವರ್ಷದಂತೆ ಕ್ರಿಸ್ಮಸ್(Christmas) ಹಾಗೂ ಹೊಸ ವರ್ಷ(New Year) ಆಚರಣೆ ಹಿನ್ನೆಲೆಯಲ್ಲಿ ಮೈಸೂರು ಅರಮನೆ(Mysore Palace) ಆವರಣದಲ್ಲಿ ಇಂದಿನಿಂದ ಜನವರಿ 2 ರವರೆಗೆ ಫಲಪುಷ್ಪ ಪ್ರದರ್ಶನ(Flower Show) ಏರ್ಪಾಡು ಮಾಡಲಾಗಿದೆ. ಪುಷ್ಪ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರತಿ ದಿನ ಸಂಜೆ 7 ರಿಂದ 8.30ರ ವರೆಗೆ ಅರಮನೆಗೆ ವಿದ್ಯುತ್‌ ದೀಪಾಲಂಕಾರ ರಚಿಸಲು ತೀರ್ಮಾನ ಮಾಡಲಾಗಿದ್ದು ಈಗಾಗಲೇ ಮೈಸೂರು ಅರಮನೆ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಮೈಸೂರಿನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

  ನಟ ಪುನೀತ್ ಹಾಗೂ ಬಿಪಿನ್ ರಾವತ್ ಗೆ ಪುಷ್ಪ ನಮನ

  ಇನ್ನು ಈ ವರ್ಷ ಹಲವು ಸಾಲುಸಾಲು ದುರಂತಗಳು ಸಂಭವಿಸಿ ಹಲವು ಜನಪ್ರಿಯ ನಾಯಕರು ನಮ್ಮನ್ನು ಅಗಲಿ ಹೋಗಿದ್ದಾರೆ.. ಅದ್ರಲ್ಲೂ ಈ ವರ್ಷ ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಭಾರತೀಯ 3 ಸೇನಾ ಪಡೆಗಳ ಮುಖ್ಯಸ್ಥ ಜನರು ಬಿಪಿನ್ ರಾವತ್ ಹಾಗೂ ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜಕುಮಾರ್ ಅವರಿಗೆ ವಿಶೇಷವಾಗಿ ಪುಷ್ಪ ನಮನವನ್ನು ಫಲಪುಷ್ಪ ಪ್ರದರ್ಶನದಲ್ಲಿ ಮಾಡಲಾಗಿದೆ.

  ಇದನ್ನೂ ಓದಿ:  ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್

  ಪುಷ್ಪ ಪ್ರದರ್ಶನದಲ್ಲಿ ಇದೇ ಹಲವು ಆಕರ್ಷಣೆ

  2021 ಭಾರತದಲ್ಲಿ ಹಲವು ಪ್ರಮುಖ ಘಟನೆಗಳಿಗೆ ಕಾರಣವಾಗಿದೆ.. ಹೀಗಾಗಿ ಈ ವರ್ಷದ ಫಲಪುಷ್ಪ ಪ್ರದರ್ಶನ ಕೂಡ ವಿಶೇಷ ರೀತಿಯದಾಗಿದೆ.. ಹೀಗಾಗಿ ಈ ವರ್ಷ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರ ಪುಷ್ಪ ಮೂರ್ತಿಯನ್ನು ಸಿದ್ಧ ಮಾಡಲಾಗಿದೆ.ಅಲ್ಲದೆ ಅಯೋಧ್ಯೆ ಶ್ರೀ ರಾಮ ಮಂದಿರ,
  ಚಾಮುಂಡೇಶ್ವರಿ ದೇವತೆ, ನಂದಿ ಮತ್ತು ಮಹಿಷಾಸುರನ ಮಾದರಿ ಚಿತ್ರಗಳು, ಮಹಾತ್ಮ ಗಾಂಧೀಜಿ ಅವರು ನಡೆಸಿದ ಕ್ವಿಟ್‌ ಇಂಡಿಯಾ ಚಳವಳಿ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾದರಿಯ ಪ್ರತಿಮೆಗಳು ಮೈಸೂರು ಅರಮನೆ ಆವರಣದಲ್ಲಿ ಸಿದ್ಧವಾಗಿವೆ..

  15 ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡ ಬಳಕೆ

  ವರ್ಷದ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು ಹದಿನೈದು ಸಾವಿರ ವಿವಿಧ ರೀತಿಯ ಅಲಂಕಾರಿಕ ಹೂವಿನ ಕುಂಡಗಳನ್ನು ತೋಟಗಾರಿಕೆ ಇಲಾಖೆ ಬಳಸಿದೆ.ಮೆರಿಗೋಲ್ಡ್‌, ಸಾಲ್ವಿಯ, ಡೇಲಿಯ, ಪಿಟೋ ನಿಯ, ಸೇವಂತಿಗೆ, ಕೋಲಿಯಸ್‌, ಸಿಲೋಷಿಯ, ನಸ್ಟರ್‌ಸಿಯಂ, ಆಂಟಿರೈನಂ, ಬೋನ್ಸಾಯ್‌ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡಗಳು ಕೂಡ ಇದರಲ್ಲಿ ಸೇರಿ ಕೊಂಡಿದೆ. ಅಲ್ಲದೆ ನಾಲ್ಕು ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೈಸಾಂಥಿಮಮ್‌, ಪಿಂಗ್‌ಪಾಂಗ್‌, ಕಾರ್ನೆಷನ್‌, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿ ಯಮ್‌, ಆರ್ಕಿಡ್ಸ್‌, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವುಗಳು ಹಾಗೂ ಊಟಿ ಕಟ್‌ ಫ್ಲವರ್‌ಗಳಿಂದ ಅಲಂಕರಿಸಲಾಗಿದೆ.

  ಮೈಸೂರು ಒಡೆಯರ ಫೋಟೋಗ್ಯಾಲರಿ

  ಫಲಪುಷ್ಪ ಪ್ರದರ್ಶನಕ್ಕೆ ಬರುವಾ ಸೆಲ್ಫಿ ಪ್ರಿಯರಿಗಾಗಿ
  ಸೆಲ್ಫಿ ಪಾಯಿಂಟ್ ಕೂಡ ಸ್ಥಾಪನೆ ಮಾಡಲಾಗಿದೆ.. ಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿರುವುದರಿಂದ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಮಾದರಿ ಚಿತ್ರವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಮೈಸೂರು ಅರಮನೆ ಯದುವಂಶವನ್ನು ಆಳಿದ ದೊರೆಗಳು ಇತಿಹಾಸವನ್ನು ಪರಿಚಯಿಸುವ ಫೋಟೋಗ್ಯಾಲರಿ ಕೂಡ ನಿರ್ಮಾಣ ಮಾಡಲಾಗಿದೆ.

  ಬೆಳಗ್ಗೆ 10ರಿಂದ 8.30 ರವರೆಗೆ ವೀಕ್ಷಣೆಗೆ ಅವಕಾಶ

  ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಯಾರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದುಕೊಂಡಿರುತ್ತಾರೋ ಅವರಿಗೆ ಮಾತ್ರ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

  ಅಲ್ಲದೆ ಫ‌ಲಪುಷ್ಪ ಪ್ರದರ್ಶನವನ್ನು ಬೆಳಗ್ಗೆ 10 ರಿಂದ ರಾತ್ರಿ 8.30ರ ವರೆಗೆ ವೀಕ್ಷಿಸಬಹುದಾಗಿದೆ.ಇನ್ನು ಫ‌ಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದೆ. ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಲು ಪ್ರತಿ ದಿನ 500 ಮಂದಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಅರಮನೆ ಆವರಣದಲ್ಲಿ ಫ‌ಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸಿರುವುದು. ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದ್ದಾರೆ

  ಇದನ್ನೂ ಓದಿ: ಸಾಂಸ್ಕೃತಿಕ ನಗರ ಮೈಸೂರು ಪ್ರಗತಿಯಾಗ್ತಿಲ್ವ? ಅಭಿವೃದ್ಧಿಗೆ ಆಗುತ್ತಿರುವ ಸಮಸ್ಯೆ ಏನು?

  ಫಲಪುಷ್ಪ ಪ್ರದರ್ಶನಕ್ಕೆ ವಿರೋಧ

  ಕೊರೊನಾ ನೆಲೆಯಲ್ಲಿ ಹೊಸ ವರ್ಷಾಚರಣೆ ಹಾಗೂ ಸಂಭ್ರಮಾಚರಣೆಯನ್ನು ನಿಷೇಧ ಮಾಡಲಾಗಿದೆ.. ಮೈಸೂರು ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿ ಅದಕ್ಕೆ ಅನುಮತಿ ನೀಡಿರುವ ಹಿನ್ನೆಲೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಆಕ್ಷೇಪಣೆ ಎತ್ತಿದೆ. ಮೈಸೂರು ಜಿಲ್ಲಾಡಳಿತಕ್ಕೆ ಪತ್ರ ಬರೆದು ಹೋಟೆಲ್ ಉದ್ಯಮಕ್ಕೆ ಯಾಕೆ ತಾರತಮ್ಯ..? ನಿರ್ಬಂಧ ಯಾಕೆ ವಿಧಿಸಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ..ಅಲ್ಲದ್ರೂ ಹೋಟೆಲ್‌ ಉದ್ಯಮಕ್ಕೆ ವಿಧಿಸಿರುವ ನೂತನ ವರ್ಷದ ಮಾರ್ಗ ಸೂಚಿ ನಿರ್ಬಂಧವನ್ನು ರದ್ದುಪಡಿಸ ಬೇಕೆಂದು ಅವರು ರಾಜ್ಯ ಸರ್ಕಾರವನ್ನು ಪತ್ರದಲ್ಲಿ ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.
  Published by:ranjumbkgowda1 ranjumbkgowda1
  First published: