HOME » NEWS » State » 3 COMPLAINTS REGISTERED AGAINST CHANDAN SHETTY NIVEDITHA GOWDA PROPOSE INCIDENT IN YUVA DASARA SCT

ಯುವದಸರಾದಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಪ್ರಪೋಸ್ ವಿವಾದ; ಇದುವರೆಗೂ ದಾಖಲಾದ ದೂರುಗಳೆಷ್ಟು ಗೊತ್ತಾ?

ಚಂದನ್ ಶೆಟ್ಟಿ- ನಿವೇದಿತಾ ಗೌಡ ಪ್ರೇಮ ನಿವೇದನೆ ವಿಚಾರ ವಿವಾದವಾಗಿ ಬದಲಾಗುತ್ತಿದ್ದಂತೆ ಯುವದಸರಾ ಉಪಸಮಿತಿ ಎಚ್ಚೆತ್ತುಕೊಂಡು ನೋಟಿಸ್ ಜಾರಿಮಾಡಿದೆ. ಚಂದನ್, ನಿವೇದಿತಾ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಚಂದನ್ ಮದುವೆ ಪ್ರಸ್ತಾಪದಿಂದ ಸಮಿತಿಗೆ ಆಘಾತವಾಗಿದೆ. ಈ ಬಗ್ಗೆ ಯುವದಸರಾ ಉಪಸಮಿತಿಗೆ ಮಾಹಿತಿ ಇರಲಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

Sushma Chakre | news18-kannada
Updated:October 5, 2019, 8:52 PM IST
ಯುವದಸರಾದಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಪ್ರಪೋಸ್ ವಿವಾದ; ಇದುವರೆಗೂ ದಾಖಲಾದ ದೂರುಗಳೆಷ್ಟು ಗೊತ್ತಾ?
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ
  • Share this:
ಮೈಸೂರು (ಅ. 5): ಮೈಸೂರಿನ ಯುವದಸರಾ ವೇದಿಕೆಯಲ್ಲಿ ನಿನ್ನೆ ರಾತ್ರಿ ಬಿಗ್​ಬಾಸ್​ ಖ್ಯಾತಿಯ ಕನ್ನಡ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು. ಸರ್ಕಾರದ ದುಡ್ಡಿನಲ್ಲಿ ನಡೆಸಲಾಗುವ ದಸರಾ ವೇದಿಕೆಯನ್ನು ತಮ್ಮ ಪ್ರೇಮ ನಿವೇದನೆಗೆ ಬಳಸಿಕೊಂಡಿದ್ದಕ್ಕೆ ಸಾಕಷ್ಟು ಜನರಿಂದ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಟ್ರೋಲ್ ಮಾಡಲಾಗಿತ್ತು. ಯುವದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ವಿರೋಧಿಸಿ ಇಂದು ಮೈಸೂರಿನಲ್ಲಿ ಪ್ರತಿಭಟನೆಗಳೂ ನಡೆದಿದ್ದವು. ಇದರ ಜೊತೆಗೆ ಸರ್ಕಾರಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಚಂದನ್ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ ಇದುವರೆಗೂ 3 ದೂರುಗಳು ದಾಖಲಾಗಿವೆ.

ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಇಬ್ಬರಿಗೂ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಯೂತ್​ ಕಾಂಗ್ರೆಸ್​ನಿಂದ ಚಂದನ್ ಶೆಟ್ಟಿ ವಿರುದ್ಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದು ಮೈಸೂರಿನವರು ತಲೆ ತಗ್ಗಿಸುವ ಕೃತ್ಯ. ಸುಮಾರು 400 ವರ್ಷದ ಇತಿಹಾಸ ಕೆಡವುವ ಕೆಲಸ. ಸರ್ಕಾರಿ ಕಾರ್ಯಕ್ರಮವನ್ನು ಪ್ರೇಮ ನಿವೇದನೆಗೆ ಬಳಸಿಕೊಂಡದ್ದು ತಪ್ಪು. ಆಹ್ವಾನವಿಲ್ಲದಿದ್ದರೂ ನಿವೇದಿತಾರನ್ನು ಒಳಗೆ ಹೇಗೆ ಬಿಟ್ಟರು? ಇದು ಭದ್ರತಾ ಲೋಪಕ್ಕೆ ಹಿಡಿದ ಕೈಗನ್ನಡಿ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋಸಿನ್ ಖಾನ್ ಆರೋಪಿಸಿದ್ದರು. ಸರ್ಕಾರಿ ಕಾರ್ಯಕ್ರಮವನ್ನ ತಪ್ಪಾಗಿ ಬಳಸಿಕೊಂಡಿದ್ದಕ್ಕೆ ಚಂದನ್ ಶೆಟ್ಟಿಗೆ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.

ಚಂದನ್​ ಶೆಟ್ಟಿ ಮಹಾಪರಾಧವೇನೂ ಮಾಡಿಲ್ಲ; ಮತ್ತೆ ಟ್ವಿಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸಂಸದ ಪ್ರತಾಪ್ ಸಿಂಹ

ದಸರಾದಲ್ಲಿ ಚಂದನ್ ಶೆಟ್ಟಿ ಪ್ರೇಮ ನಿವೇದನೆ ವಿಚಾರವಾಗಿ ಚಂದನ್, ನಿವೇದಿತಾ ವಿರುದ್ಧ ಇನ್ನೂ 2 ದೂರುಗಳು ದಾಖಲಾಗಿವೆ. ಮೈಸೂರಿನ ಲಕ್ಷೀಪುರಂ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ಸರ್ಕಾರಿ ವೇದಿಕೆ ದುರ್ಬಳಕೆ, ಅತಿಕ್ರಮ ಪ್ರವೇಶ, ಸಂಚುರೂಪಿಸಿ ಪ್ರಚಾರ ಪಡೆದ ಆರೋಪದಡಿ ದೂರುಗಳು ದಾಖಲಾಗಿವೆ. ಕರ್ನಾಟಕ ಪ್ರಜಾಪಾರ್ಟಿ, ಸಾಮಾಜಿಕ ಹೋರಾಟಗಾರ ಗಂಗರಾಜುರಿಂದ ದೂರು ದಾಖಲಾಗಿದೆ. ಒಟ್ಟಾರೆ ಈ ಪ್ರಕರಣ ಸಂಬಂಧ ಇಂದು ಮೂರು ದಊರುಗಳು ದಾಖಲಾದಂತಾಗಿವೆ.

ದಸರಾ ಸಮಿತಿಯಿಂದ ನೋಟಿಸ್ ಜಾರಿ:

ಇನ್ನೊಂದೆಡೆ ಚಂದನ್ ಶೆಟ್ಟಿ- ನಿವೇದಿತಾ ಗೌಡ ಪ್ರೇಮ ನಿವೇದನೆ ವಿಚಾರ ವಿವಾದವಾಗಿ ಬದಲಾಗುತ್ತಿದ್ದಂತೆ ಯುವದಸರಾ ಉಪಸಮಿತಿ ಎಚ್ಚೆತ್ತುಕೊಂಡು ನೋಟಿಸ್ ಜಾರಿಮಾಡಿದೆ. ಚಂದನ್, ನಿವೇದಿತಾ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಚಂದನ್ ಮದುವೆ ಪ್ರಸ್ತಾಪದಿಂದ ಸಮಿತಿಗೆ ಆಘಾತವಾಗಿದೆ. ಈ ಬಗ್ಗೆ ಯುವದಸರಾ ಉಪಸಮಿತಿಗೆ ಮಾಹಿತಿ ಇರಲಿಲ್ಲ. ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ದಸರಾ ಉಪಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಯುವ ದಸರಾದಲ್ಲಿ ಎಡವಟ್ಟು ಮಾಡಿಕೊಂಡರಾ ಚಂದನ್​ ಶೆಟ್ಟಿ; ನಿವೇದಿತಾ ತಾಯಿ ಹೇಳಿದ್ದೇನು?ಚಂದನ್ ಶೆಟ್ಟಿ ವರ್ತನೆಯ ಬಗ್ಗೆ ಇಂದು ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದ ಮೈಸೂರು ಪ್ರಜ್ಞಾವಂತ ವೇದಿಕೆಯವರು ಚಂದನ್ ಶೆಟ್ಟಿ ಸಂಭಾವನೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಸಾರ್ವಜನಿಕರು ಹಣದಲ್ಲಿ ಆಯೋಜಿಸಲಾಗುವ ಯುವದಸರಾ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವ ಚಂದನ್ ಶೆಟ್ಟಿ ಅವರ ನಿನ್ನೆಯ ಕಾರ್ಯಕ್ರಮದ ವೆಚ್ಚವನ್ನು ಅವರ ತಂಡದವರೇ ಭರಿಸಲಿ. ಅವರಿಗೆ ನೀಡಬೇಕಾದ ಸಂಭಾವನೆಯನ್ನು ರದ್ದುಗೊಳಿಸಿ ಆ ಹಣವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಕೋರಿದ್ದರು.

ಯುವ ದಸರಾದಲ್ಲಿ ಲವ್ ಪ್ರೊಪೋಸಲ್ ವಿವಾದ: ವಿ. ಸೋಮಣ್ಣ ಕೋಪ; ಇದು ಜಸ್ಟ್ ಮನರಂಜನೆ ಎಂದ ಚಂದನ್ ಶೆಟ್ಟಿ

ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿನ್ನೆ ಯುವ ದಸರಾ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ನಿವೇದಿತಾಗೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ ಆಕೆಗ ಬೆರಳಿಗೆ ಉಂಗುರ ತೊಡಿಸಿದ್ದರು. ಸದ್ಯದಲ್ಲೇ ಮದುವೆಯಾಗುವುದಾಗಿಯೂ ಘೋಷಿಸಿದ್ದರು. ಈ ಮೂಲಕ ಬಿಗ್​ಬಾಸ್​ ಜೋಡಿ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದಾದ ನಂತರ ಜನರ ವಿರೋಧಗಳು ಹೆಚ್ಚಾಗುತ್ತಿದ್ದಂತೆ ಚಂದನ್ ಶೆಟ್ಟಿ ಜನರ ಕ್ಷಮಾಪಣೆಯನ್ನೂ ಕೇಳಿದ್ದರು.

ಆ ವೇಳೆ ಅದು ತಪ್ಪು ಎಂದು ನನಗೆ ಗೊತ್ತಾಗಲಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಯುವದಸರಾ ಉಪಸಮಿತಿ ಅನುಮತಿಯನ್ನೂ ಕೇಳಿರಲಿಲ್ಲ. ನಮ್ಮ ಮದುವೆ ವಿಚಾರವನ್ನು ಜನರಿಗೆ ತಿಳಿಸಲು ಹೀಗೆ ಮಾಡಿದೆ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದರು. ನಿವೇದಿತಾ ಅವರ ತಂದೆ-ತಾಯಿ ಕೂಡ ಚಂದನ್​ ಮಾಡಿದ್ದು ತಪ್ಪೇನಲ್ಲ ಎಂದು ಹೇಳಿಕೆ ನೀಡಿದ್ದರು.

First published: October 5, 2019, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories