2nd PUC Answer Sheet: ನಾಳೆ ವೆಬ್​ಸೈಟ್​ನಲ್ಲಿ ಸಿಗುತ್ತೆ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ, ಈ ರೀತಿ ಸುಲಭವಾಗಿ ಡೌನ್​ಲೋಡ್ ಮಾಡಿಕೊಳ್ಳಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿಗಳನ್ನು ನಾಳೆಯಿಂದ ಹಂತ ಹಂತವಾಗಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು 7): ಕರ್ನಾಟಕ ಶಿಕ್ಷಣ ಇಲಾಖೆಯು ಏಪ್ರಿಲ್‌-ಮೇ 2022ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ (Answer Sheet) ಸ್ಕ್ಯಾನ್ಡ್‌ಪ್ರತಿಯನ್ನು ನಾಳೆಯಿಂದ ಪಡೆಯಬಹುದಾಗಿದೆ.  ಶಿಕ್ಷಣ ಇಲಾಖೆ ಉತ್ತರ ಪತ್ರಿಕೆ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ (Student) ಸಂಬಂಧಪಟ್ಟಂತೆ ಅಪ್‌ಡೇಟ್‌ ನೀಡಿದೆ. ಜೂನ್‌ 18ರಂದು ದ್ವಿತೀಯ ಪಿಯುಸಿ ಫಲಿತಾಂಶ (Result) ಪ್ರಕಟವಾದ ಬಳಿಕ ಸ್ಕ್ಯಾನ್ಡ್‌ ಪ್ರತಿಗೆ ಅರ್ಜಿ ಸಲ್ಲಿಸಲು ಜೂನ್‌ 30ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಆನ್ಸರ್ ಶೀಟ್ ಪಡೆಯುವ ವಿಧಾನವನ್ನು ಸರಳೀಕರಣ ಮಾಡಲಾಗಿದೆ. ಶಿಕ್ಷಣ ಇಲಾಖೆ (Department of Education) ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಉತ್ತರ ಪ್ರತಿಗಳನ್ನು https://pue.karnataka.gov.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

ನಾಳೆಯಿಂದ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ 

ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿಗಳನ್ನು ನಾಳೆಯಿಂದ ಹಂತಹಂತವಾಗಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್‌ ಮೂಲಕ ಸಂದೇಶವನ್ನೂ ಕಳುಹಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ. ಸಂದೇಶ ಸ್ವೀಕರಿಸಿದ ಅಭ್ಯರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಪ್ರತಿಯನ್ನು https://pue.karnataka.gov.in/ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಉತ್ತರ ಪತ್ರಿಕೆಯನ್ನು ಡೌನ್​ಲೋಡ್​ ಮಾಡಿಕೊಳ್ಳೋದು ಹೇಗೆ?

ಉತ್ತರ ಪತ್ರಿಕೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರೋ ವಿದ್ಯಾರ್ಥಿಗಳ ಮೊಬೈಲ್​ಗೆ ಓಟಿಪಿ

ಅರ್ಜಿ ಸಲ್ಲಿಸುವ ವೇಳೆ ನೀಡಿರೋ ಮೊಬೈಲ್‌ಗೆ ಓಟಿಪಿ ಕಳಿಸಲಿರೋ ಶಿಕ್ಷಣ ಇಲಾಖೆ

ಓಟಿಪಿ ಬಂದ ಬಳಿಕ ವೆಬ್‌ಸೈಟ್‌ನಲ್ಲಿ ಪ್ರತಿ ಡೌನ್‌ಲೋಡ್ ಮಾಡಬಹುದು

ವಿದ್ಯಾರ್ಥಿಗಳಿಗೆ ಉಪಯುಕ್ತವಾಗೋ ನಿಟ್ಟಿನಲ್ಲಿ ಸರಳೀಕರಣ ಮಾಡಲಾಗಿದೆ

ಇದನ್ನೂ ಓದಿ: Karnataka Rains: ಕರಾವಳಿಯಲ್ಲಿ ಭಾರೀ ಮಳೆ, ಇಲ್ಲಿವೆ ಕೆಲವು ಫೊಟೋಸ್

ಈ ಲಿಂಕ್​ನಲ್ಲಿ ಉತ್ತರ ಪ್ರತಿ ಪಡೆಯಬಹುದು:

https://pue.karnataka.gov.in/

ಈ ಬಗ್ಗೆ ಸಚಿವ ನಾಗೇಶ್​ ಅವರು ಸಹ ಟ್ವೀಟ್​ ಮಾಡಿದ್ದಾರೆ



4,22,966 ವಿದ್ಯಾರ್ಥಿಗಳು ಉತ್ತೀರ್ಣ

ಈ ವರ್ಷ ಒಟ್ಟು 6,83,563 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಅವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸೈನ್ಸ್‌ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಶೇಕಡಾ 68.72ರಷ್ಟು ಬಾಲಕಿಯರು ಮತ್ತು ಶೇಕಡಾ 55.22ರಷ್ಟು ಬಾಲಕರು ತೇರ್ಗಡೆ ಹೊಂದಿದ್ದರು.

ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ವರ್ಷದ ದ್ವಿತೀಯ ಪಿಯಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ,ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಿಣ ನಾಲ್ಕನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿತ್ತು.

ಇದನ್ನೂ ಓದಿ: Suspend: ಕಳಂಕಿತ ಅಧಿಕಾರಿಗಳಿಗೆ ಅಮಾನತು ಶಿಕ್ಷೆ; ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 2,28,167 ಮಂದಿ, ವಾಣಿಜ್ಯ ವಿಭಾಗದಲ್ಲಿ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.
Published by:Pavana HS
First published: