2nd PU results: ಪಾಸ್ ಮಾಡಿದ್ರೆ ಎಲ್ಲರನ್ನೂ ಮಾಡಿ, ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದ ಹೈಕೋರ್ಟ್

ಗುರುವಾರದ ತನಕ ಪಿಯುಸಿ ಫಲಿತಾಂಶ ಪ್ರಕಟ ಮಾಡದಿರುವಂತೆ ಹೈಕೋರ್ಟ್​ ಸೂಚಿಸಿದೆ. ಈ ವಿಚಾರ ಕುರಿತು ಸರ್ಕಾರದ ಅಡ್ವೋಕೇಟ್ ಜನರಲ್​​ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

 • Share this:
  ಬೆಂಗಳೂರು(ಜೂ.15): ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸುವ ಸರ್ಕಾರಕ್ಕೆ ಹೈಕೋರ್ಟ್​ ಈಗ ಶಾಕ್ ನೀಡಿದೆ. ಕೇವಲ ಫ್ರೆಶರ್ಸ್​​ನ್ನು ಮಾತ್ರ ಪಾಸ್ ಮಾಡಿ ರಿಪೀಟರ್ಸ್​​ಗೆ ಮಾಮೂಲಿ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಬಳಿಕ ರಿಪೀಟರ್ಸ್​​ ತಮಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಕೋರ್ಟ್​ ಮೊರೆ ಹೋಗಿದ್ದರು. ಹೈಕೋರ್ಟ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸದ್ಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದೆ.

  ಹೌದು, ರೆಗ್ಯೂಲರ್ ವಿದ್ಯಾರ್ಥಿಗಳಿಗೊಂದು ನ್ಯಾಯ, ರಿಪೀಟರ್ಸ್​ಗೆ ಒಂದು ನ್ಯಾಯ ನೀಡಿದ್ದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ರೆಗ್ಯೂಲರ್​ ವಿದ್ಯಾರ್ಥಿಗಳನ್ನು ಮಾತ್ರ ಪಾಸ್​ ಮಾಡಿರೋದು ಸರಿಯಲ್ಲ. ಪಾಸ್​ ಮಾಡಿದ್ರೆ ಎಲ್ಲರನ್ನೂ ಮಾಡಬೇಕಿತ್ತು. ರೆಗ್ಯುಲರ್ ವಿದ್ಯಾರ್ಥಿಗಳನ್ನು ಪಾಸ್ ಮಾಡಿ, ರಿಪೀಟರ್ಸ್​​​ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಹೈಕೋರ್ಟ್​​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.

  ಗುರುವಾರದ ತನಕ ಪಿಯುಸಿ ಫಲಿತಾಂಶ ಪ್ರಕಟ ಮಾಡದಿರುವಂತೆ ಹೈಕೋರ್ಟ್​ ಸೂಚಿಸಿದೆ. ಈ ವಿಚಾರ ಕುರಿತು ಸರ್ಕಾರದ ಅಡ್ವೋಕೇಟ್ ಜನರಲ್​​ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.  ಸಿಂಗ್ರೇಗೌಡ ಎಂಬುವರು ರಿಪೀಟರ್ಸ್​​ ಪರವಾಗಿ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

  ಇದನ್ನೂ ಓದಿ:

  ಕೊರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಎಸ್​ಎಸ್​ಎಲ್​ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಹೇಳಿತ್ತು. ಇದಾದ ಕೆಲವು ದಿನಗಳ ಬಳಿಕ ರೆಗ್ಯುಲರ್ ವಿದ್ಯಾರ್ಥಿಗಳನ್ನು ಮಾತ್ರ ಪಾಸ್​ ಮಾಡಲಾಗಿದ್ದು, ರಿಪೀಟರ್ಸ್​ಗೆ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದರು. ಇದು ರಿಪೀಟರ್ಸ್​ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಅವರು ಕೋರ್ಟ್​ ಮೊರೆ ಹೋಗಿದ್ದರು. ಸದ್ಯಕ್ಕೆ ಹೈಕೋರ್ಟ್​ ಪಿಯು ಫಲಿತಾಂಶಕ್ಕೆ ತಡೆ ನೀಡಿ ಮೌಖಿಕ ಆದೇಶ ಹೊರಡಿಸಿದೆ.

  ಪಾಸ್​ ಮಾಡಿದರೆ ಎಲ್ಲರನೂ ಪಾಸ್ ಮಾಡಬೇಕು ಎಂದು ರಿಪೀಟರ್ಸ್​ ಪರ ವಕೀಲ ಹೇಳಿದ್ದಾರೆ. ಕೊರೋನಾ ಇರುವ ಕಾರಣ, ರಿಪೀಟರ್ಸ್​ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೀಗಾಗಿ ಅವರನ್ನು ಪಾಸ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಸದ್ಯಕ್ಕೆ ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್​ ಬ್ರೇಕ್ ಹಾಕಿದೆ. ಹೀಗಾಗಿ ಸರ್ಕಾರ ರಿಪೀಟರ್ಸ್​​ಗಳನ್ನು ಪಾಸ್​ ಮಾಡುವ ನಿರ್ಧಾರ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ. ಜೊತೆಗೆ ಯಾವ ಮಾನದಂಡದ ಆಧಾರದ ಮೇಲೆ ಪಾಸ್ ಮಾಡುತ್ತೆ ಎನ್ನುವ ವಿಷಯವೂ ಸಹ ಕಾತರವಾಗಿದೆ.

  ಇದನ್ನೂ ಓದಿ:KCET Exam 2021 Registration: ಇಂದಿನಿಂದ ಸಿಇಟಿ​ ಪರೀಕ್ಷೆಗೆ ನೊಂದಣಿ ಪ್ರಾರಂಭ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

  ಇನ್ನು, ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ  ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. 3 ವಿಷಯಗಳಿಗೆ 1 ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಎಕ್ಸಾಂ ನಡೆಸಲಾಗುವುದು, ಪ್ರಶ್ನೆ ಪತ್ರಿಕೆ ಸರಳವಾಗಿರುತ್ತದೆ. ಯಾರನ್ನೂ ನಪಾಸು ಮಾಡುವುದಿಲ್ಲ ಎಂದೂ ಸಹ ಹೇಳಲಾಗಿದೆ.

  ಶಿಕ್ಷಣ ಇಲಾಖೆ ಮೊದಲು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್​ ಮಾಡಲಾಗಿದೆ ಎಂದು ಹೇಳಿತ್ತು. ಆದರೆ ಮತ್ತೆ ಕೆಲವೇ ದಿನಗಳಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೂ ಪರೀಕ್ಷೆ ಇದೆ, ಆನ್​ಲೈನ್​​ನಲ್ಲಿ ಎಕ್ಸಾಂ ನಡೆಸಲಾಗುತ್ತದೆ ಎಂದು ಹೇಳಿದೆ. ಹೀಗೆ ಶಿಕ್ಷಣ ಇಲಾಖೆ ಕೆಲವೊಮ್ಮೆ ಯಡವಟ್ಟಿನ ನಿರ್ಧಾರಗಳನ್ನು ತೆಗೆದುಕೊಂಡು, ವಿದ್ಯಾರ್ಥಿಗಳನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸುತ್ತಿದೆ.

  ​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: