2nd PUC Result 2020 Karnataka: ದ್ವಿತೀಯ ಪಿಯುಸಿ ಫರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ನೀಡಿವೆ ರಾಜ್ಯದ 88 ಕಾಲೇಜುಗಳು
Karnataka 2nd PUC Result 2020: 05 ಸರ್ಕಾರಿ ಪಿಯುಸಿ ಕಾಲೇಜುಗಳು, 05 ಅನುದಾನಿತ ಪಿಯುಸಿ ಕಾಲೇಜುಗಳು ಹಾಗೂ 78 ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಹೀಗಾಗಿ ಅನುದಾನಿತ ಕಾಲೇಜುಗಳ ಅನುದಾನ ನೀಡುವ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಜುಲೈ 14); ಬಹು ನಿರೀಕ್ಷೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಹೊರಬಿದ್ದಿದೆ. ರಾಜ್ಯದಲ್ಲಿಈ ವರ್ಷ ಒಟ್ಟಾರೆ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80 ದಾಖಲಾಗಿದೆ. ಆದರೆ, ರಾಜ್ಯದಲ್ಲಿ ಸುಮಾರು 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
05 ಸರ್ಕಾರಿ ಪಿಯುಸಿ ಕಾಲೇಜುಗಳು, 05 ಅನುದಾನಿತ ಪಿಯುಸಿ ಕಾಲೇಜುಗಳು ಹಾಗೂ 78 ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಹೀಗಾಗಿ ಅನುದಾನಿತ ಕಾಲೇಜುಗಳ ಅನುದಾನ ನೀಡುವ ಕುರಿತು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ರಾಜ್ಯದ 92 ಕಾಲೇಜುಗಳು ಶೇ. 100ಕ್ಕೆ 100 ರಷ್ಟು ಫಲಿತಾಂಶ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. 03 ಸರ್ಕಾರಿ ಪಿಯು ಪರೀಕ್ಷೆ ಕಾಲೇಜು, 01 ಅನುದಾನಿತ ಪಿಯುಸಿ ಕಾಲೇಜು ಹಾಗೂ 88 ಅನುದಾನ ರಹಿತ ಪಿಯುಸಿ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ನೀಡಿವೆ. ಹೀಗಾಗಿ ಈ ಎಲ್ಲಾ ಕಾಲೇಜುಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ.