Karnataka 2nd PUC Result 2020: ದ್ವಿತೀಯ ಪಿಯುಸಿ ಫಲಿತಾಂಶ; ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಸಾಧನೆ ಏನು?

Karnataka 2nd PUC Result 2020: ಕಳೆದ ಬಾರಿ ಒಟ್ಟು 6,71,653 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4,14,587 ಮಂದಿ ತೇರ್ಗಡೆಯಾಗಿದ್ದರು. ಕಳೆದ ವರ್ಷ ದಾಖಲಾದ ಒಟ್ಟಾರೆ ಶೇಕಡಾವಾರು ಫಲಿತಾಂಶ 61.71. ಈ ವರ್ಷ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜುಲೈ 14); 2019 ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ ಒಟ್ಟಾರೆ ಶೇ. 61.71 ಫಲಿತಾಂಶ ಪ್ರಕಟವಾಗಿತ್ತು. ಆದರೆ, ಈ ಬಾರಿ ಕೊರೋನಾ ಲಾಕ್‌ಡೌನ್‌ ನಡುವೆಯೂ ಫರೀಕ್ಷೆ ನಡೆದು ಫಲಿತಾಂಶ ಹೊರಬಿದ್ದಿದ್ದು ಈ ವರ್ಷ ಶೇ.61.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ಬಾರಿ ಒಟ್ಟು 6,71,653 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4,14,587 ಮಂದಿ ತೇರ್ಗಡೆಯಾಗಿದ್ದರು. ಕಳೆದ ವರ್ಷ ದಾಖಲಾದ ಒಟ್ಟಾರೆ ಶೇಕಡಾವಾರು ಫಲಿತಾಂಶ 61.71. ಈ ವರ್ಷ 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ 3,84,937 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಖಡಾವಾರು ಫಲಿತಾಂಶ ಶೇ. 61.80.

ಕಳೆದ ವರ್ಷ ಶೇ.92.20 ಅಂಕದೊಂದಿಗೆ ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಶೇ.51.42 ಅಂಕದೊಂದಿಗೆ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿತ್ತು. ಈ ವರ್ಷವೂ ಶೇ. 90.71ರಷ್ಟು ಫಲಿತಾಂಶದೊಂದಿಗೆ ಉಡುಪಿ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಹಾಗೂ ಕೊಡಗು ಮೂರನೇ ಸ್ಥಾನ ಪಡೆದುಕೊಂಡಿದೆ. ಆದರೆ, ವಿಜಯ ನಗರ ಜಿಲ್ಲೆ ಈ ಭಾರಿ ಕೊನೆಯ ಸ್ಥಾನ ಗಳಿಸಿಕೊಂಡಿದೆ.

ಕಳೆ ವರ್ಷ ಯಾವ ವಿಭಾಗಕ್ಕೆ ಎಷ್ಟು ಫಲಿತಾಂಶ? (2019)

ಕಲಾ- ಶೇ.50.53
ವಾಣಿಜ್ಯ – ಶೇ. 66.39
ವಿಜ್ಞಾನ - ಶೇ. 66.58

ಕಳೆ ವರ್ಷ ಯಾವ ವಿಭಾಗಕ್ಕೆ ಎಷ್ಟು ಫಲಿತಾಂಶ? (2020)

ಕಲಾ- ಶೇ. 41.27
ವಾಣಿಜ್ಯ – ಶೇ.65.52
ವಿಜ್ಞಾನ - ಶೇ. - 72.6

ಅಲ್ಲದೆ ಎಲ್ಲಾ ವರ್ಷದಂತೆ ಕಳೆದ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿದಿದ್ದರು. 3,33,985 ಬಾಲಕಿಯರು ಪರೀಕ್ಷೆ ಬರೆದಿದ್ದು ಈ ಪೈಕಿ 2,27,897 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, 3,37,668 ಬಾಲಕರು ಪರೀಕ್ಷೆ ಎದುರಿಸಿದ್ದು ಇವರಲ್ಲಿ 1,86,690 ಮಂದಿ ಪಾಸಾಗಿದ್ದರು. ಈ ವರ್ಷವೂ ಸಹ ಬಾಲಕಿಯರೇ ಮುಂದಿದ್ದು, ಶೇ.68.73 ರಷ್ಟು ಪಾಸ್‌ ಆಗಿದ್ದರೆ, ಬಾಲಕರ ಶೇ. 54.77 ರಷ್ಟು ಉತ್ತೀರ್ಣರಾಗಿದ್ದಾರೆ.

ಇನ್ನೂ ಕಳೆದ ವರ್ಷ ಶೇ. 61.38 ರಷ್ಟು ನಗರ ಭಾಗದ ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ, ಈ ವರ್ಷ ಶೇ.62.60 ರಷ್ಟು ವಿದ್ಯಾರ್ಥಿಗಳು ಉತ್ತೀಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಳೆದ ಬಾರಿ ಶೇ.62.88 ರಷ್ಟು ಫಲಿತಾಂಶ ದಾಖಲಾಗಿತ್ತು. ಈ ವರ್ಷ ಈ ಪ್ರಮಾಣ ಶೇ.58.99ಕ್ಕೆ ಇಳಿದಿದೆ.
Published by:MAshok Kumar
First published: