ಬೆಳಗಾವಿ: ಲಿಂಗಾಯತ ಪಂಚಮಸಾಲಿ (Lingayat Panchamasali) ಸಮುದಾಯಕ್ಕೆ 2ಎ ಮೀಸಲಾತಿ (2A Reservation) ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagowda Patil Yatnal) ಅವರು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಬಸವರಾಜ್ ಬೊಮ್ಮಾಯಿ ಏನೇನ್ ಆಟ ಆಡ್ತಾರೆ ನೋಡೋಣ ಎಂದರು. ಬಸವರಾಜ್ ಬೊಮ್ಮಾಯಿ ಏನರೇ ಆಟ ಆಡಿದ್ರೆ ಗಂಭೀರ ಪರಿಣಾಮ ಎದುರಿಸುತ್ತಾರೆ. ಸಿಹಿ ಸುದ್ದಿ ಕೊಡ್ತಾರೋ ಮತ್ತೆ ನಾಟಕ ಆಡ್ತಾರೋ ನೋಡೋಣ. ಮಧ್ಯಾಹ್ನ ಕ್ಯಾಬಿನೆಟ್ (Cabinet Meeting) ಇದೆ ನಿನ್ನೆ ವರದಿ ಸಲ್ಲಿಕೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನೇ ಮುಂದುವರಿಸಿಕೊಂಡು ಹೋಗೋ ಹುಚ್ಚು ಸಾಹಸಕ್ಕೆ ಬೊಮ್ಮಾಯಿ ಬೀಳಬಾರದು ಎಂದರು.
ಮಧ್ಯಂತರ ವರದಿ ನೀಡಿದ್ದಾರೆ, ವರದಿ ನೀಡಿಲ್ಲ ಎಂಬ ವಿಚಾರ ಹೇಳಿ ಎರಡು ವರ್ಷ ಆಯ್ತು. ಇನ್ಮುಂದೆ ಬಸವರಾಜ್ ಬೊಮ್ಮಾಯಿ ಅವರು ಮತ್ತೆ ಕಥೆ ಹೇಳಬಾರದು. ಇಷ್ಟು ದಿವಸ ಅವರು ಹೇಳಿದ ಹಾಗೇ ನಡೆದುಕೊಂಡಿದ್ದೇವೆ ಎಂದು ಹೇಳಿದರು.
ಬೊಮ್ಮಾಯಿ ಮೇಲೆ ಇಟ್ಟಂತಹ ಕೊನೆಯ ದಿವಸ
ಎರಡು ವರ್ಷ ವರದಿ ಬರುತ್ತೆ ಅಂತಾ ಹೇಳಿದ್ದಾರೆ. ಜಯಪ್ರಕಾಶ್ ಹೆಗಡೆಗೆ ಸಾವಿರ ಸಾರಿ ಹೇಳಿದ್ದೀವಿ ಬೇಗ ವರದಿ ತರಸಿ ಎಂದು ಹೇಳುತ್ತಿದ್ದೇವೆ. ಈಗ ಉದ್ದೇಶಪೂರ್ವಕವಾಗಿ ಮಧ್ಯಂತರ ವರದಿ ಅಂತಾ ಕಥೆ ಹೇಳೋದಲ್ಲ. ಇಂದು ಬೊಮ್ಮಾಯಿ ಮೇಲೆ ಇಟ್ಟಂತಹ ಕೊನೆಯ ದಿವಸ. ಚುನಾವಣೆ ಇದೆ ಜನ ಎಲ್ಲವನ್ನು ತೀರ್ಮಾನ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಹಿರೇಬಾಗೇವಾಡಿ ಮಾತನಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ನಿರೀಕ್ಷೆಯಿದೆ. ಒಂದು ವೇಳೆ ನೀಡದಿದ್ರೆ ಸಮುದಾಯದ ನಾಯಕರ ಚರ್ಚಿಸಿ ಮುಂದಿನ ಹೋರಾಟದ ನಿರ್ಧರಿಸುತ್ತೇವೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ನೀಡುವ ವಿಚಾರದಲ್ಲಿ ಬಿಜೆಪಿಯಲ್ಲಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಹಾಗಂತ ನಾನು ಕೇಳಿದ್ದೀನಿ, ಆದ್ರೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೋ ಗೊತ್ತಿಲ್ಲ. ಶಾಶ್ವತ ಹಿಂದುಳಿದ ಆಯೋಗದ ವರದಿ ರಾಜ್ಯ ಸರ್ಕಾರ ಪಡೆಯಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಅಂಗಳದಲ್ಲಿ ಚೆಂಡು
ರಾಜ್ಯ ಸರ್ಕಾರಕ್ಕೆ ಪವರ್ ಇರುತ್ತೆ. ಇದನ್ನ ಏನು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿಲ್ಲ. ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿ ಏನ್ ಮಾಡ್ತಾರೆ ನೋಡೋಣ ಎಂದರು.
ಮಧ್ಯಂತರ ವರದಿ ಪಡೆದ ಸಿಎಂ
ಮಧ್ಯಂತರ ವರದಿ ಆಧರಿಸಿ ೨ ಮೀಸಲಾತಿ ನಿರ್ಧಾರಕ್ಕೆ ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಆಯೋಗ ಅಧ್ಯಕ್ಷರಿಂದ ಮಧ್ಯಂತರ ವರದಿ ಪಡದುಕೊಂಡಿರುವ ಸಿಎಂ ಬೊಮ್ಮಾಯಿ, ಆ ವರದಿಯನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: Satish Jarkiholi: ಮರಾಠ ಸಮುದಾಯದಿಂದ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ
ನಿರಾಣಿ ನನ್ನ ಮುಂದೆ ಬಚ್ಚಾ!
ನಾನು ಪಾರ್ಟಿ ಕಟ್ಟುವಾಗ ನಿರಾಣಿ ಎಲ್ಲಿದ್ದರು? ಅವನು ನನ್ನ ಮುಂದೆ ಬಚ್ಚಾ ಎಂದು ಟೀಕಿಸಿದರು. ನಮ್ಮ ಮನೆಗೆ ಟಿಕೆಟ್ ಕೇಳ್ಕೊಂಡು ಮುರುಗೇಶ್ ನಿರಾಣಿ ಬರುತ್ತಿದ್ದವ ಈಗ ಬಹಳ ಮಾತನಾಡುತ್ತಿದ್ದಾನೆ. ಅವರು ಹಿಂದು ದೇವತೆಗಳ ಬಗ್ಗೆ ಒಂದು ಆಡಿಯೋ ಬಿಟ್ಟಿದ್ದರು. ಅವರು ನಮಗೀಗ ಹಿಂದೂ ಸ್ವಾಮೀಜಿ ಬಗ್ಗೆ ಮಾತಾಡಬೇಡ ಅಂತಾರೆ. ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ ಮತ್ತು ಮರ್ಯಾದೆ ಇರಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ