KGF Police: ನೂತನ ವಿಜಯನಗರ ಜಿಲ್ಲೆಗೆ ಹೋಗಲು ಪೊಲೀಸ್​ ಪತ್ನಿಯರ ಹಿಂದೇಟು; ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಪಟ್ಟು

ನೂತನ ಜಿಲ್ಲೆ ವಿಜಯನಗರಕ್ಕೆ ವರ್ಗಾವಣೆ ಮಾಡಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿ ಇಂದು ಪೊಲೀಸ್ ಸಿಬ್ಬಂದಿ ಪತ್ನಿಯರು ನಗರದಲ್ಲಿ ಮೆರವಣಿಗೆ ನಡೆಸಿ ಎಸ್ಪಿಇಲಕ್ಕಿಯಾ ಕರುಣಾಗರನ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಪೊಲೀಸ್ ಸಿಬ್ಬಂದಿ ಕುಟುಂಬ

ಮನವಿ ಸಲ್ಲಿಸಿದ ಪೊಲೀಸ್ ಸಿಬ್ಬಂದಿ ಕುಟುಂಬ

  • Share this:
ಕೋಲಾರ (ಅ. 11): ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ (Karnataka New district vijayanagara) ಅಸ್ತಿತ್ವಕ್ಕೆ ಬಂದಿದೆ. ನೂತನ ಜಿಲ್ಲೆ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ ಜಿಲ್ಲೆಯ ಕಾನೂನು ವ್ಯವಸ್ಥೆ ಬಲ ಪಡಿಸುವ ದೃಷ್ಟಿಯಿಂದ ಕೋಲಾರದ 288 ಪೊಲೀಸ್ ಸಿಬ್ಬಂದಿಗಳನ್ನು (Kolar Police) ವರ್ಗಾವಣೆ ಮಾಡಿ ಆದೇಶ ನೀಡಿದೆ. ಆದರೆ, ಈ ಜಿಲ್ಲೆಗೆ ಹೋಗಲು ಮಾತ್ರ ಪೊಲೀಸ್​ ಇಲಾಖೆ ಸಿಬ್ಬಂದಿಗಳ ಪತ್ನಿಯರು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಹೊರಡಿಸಿರುವ ವರ್ಗಾವಣೆ ಆದೇಶ ರದ್ದು ಮಾಡುವಂತೆ ಕೋರಿ ಇಂದು ಕೋಲಾರದ ಕೆಜಿಎಫ್​​ ಜಿಲ್ಲಾ ಎಸ್ಪಿ ಮೊರೆ ಹೋಗಿದ್ದಾರೆ. ನೂತನ ಜಿಲ್ಲೆ ವಿಜಯನಗರಕ್ಕೆ ವರ್ಗಾವಣೆ ಮಾಡಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿ ಇಂದು ಪೊಲೀಸ್ ಸಿಬ್ಬಂದಿ ಪತ್ನಿಯರು ನಗರದಲ್ಲಿ ಮೆರವಣಿಗೆ ನಡೆಸಿ ಎಸ್ಪಿಇಲಕ್ಕಿಯಾ ಕರುಣಾಗರನ್ ಅವರಿಗೆ ಮನವಿ ಸಲ್ಲಿಸಿದರು.

ಯಾಕೆ ವಿರೋಧ
ನೂತನ ಜಿಲ್ಲೆ ರಚನೆಯಾದ ಹಿನ್ನಲೆ ಕೆಜಿಎಫ್​​ನ ಪೊಲೀಸ್​ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಕಳೆದ 25 ವರ್ಷಗಳಿಂದ ಕೆಜಿಎಫ್​ನಲ್ಲಿ ನೆಲೆ ನಿಂತಿದ್ದ ಕುಟುಂಬವನ್ನು ಈಗ ಏಕಾಏಕಿ ವರ್ಗಾವಣೆ ಮಾಡಿರುವುದು ಸಾಕಷ್ಟು ತೊಂದರೆ ಆಗಿದೆ. ಅಲ್ಲದೇ, ದೀರ್ಘ ಸಮಯದಿಂದ ಒಂದೇ ಕಡೆ ನೆಲೆ ನಿಂತಿದ್ದೇವೆ. ಈಗ ನಿವೃತ್ತಿ ಅಂಚಿನ ಸಮೀಪದಲ್ಲಿ ಈ ವರ್ಗಾವಣೆ ಮಾಡಿದರೆ ಸಾಕಷ್ಟು ತೊಂದರೆ ಆಗುತ್ತದೆ ಎನ್ನುತ್ತಾರೆ ಕೆಲವು ಕುಟುಂಬ. ಅದರಂತೆ ಮತ್ತೆ ಕೆಲವು ಕುಟುಂಬ ವೃದ್ಧ ಪೋಷಕರನ್ನು ಕರೆದುಕೊಂಡಯ ಹೋಗುವುದು ಕಷ್ಟ ಸಾಧ್ಯ. ಅಲ್ಲದೇ ಮಕ್ಕಳ ಶಾಲೆಗಳು ಅರ್ಧದಲ್ಲಿಯೇ ಹಾಳಾಗುತ್ತದೆ ಎಂಬ ಕಾರಣ ನೀಡಿದ್ದಾರೆ.

ಕೆಜಿಎಫ್​ನಿಂದಲೇ ಇಷ್ಟು ಪ್ರಮಾಣದ ಮಂದಿ ವರ್ಗಾವಣೆ ಯಾಕೆ
ಕೋಲಾರದ ಕೆಜಿಎಪ್ ಪೊಲೀಸ್ ಇಲಾಖೆಯನ್ನು ನೂತನ ಜಿಲ್ಲೆಯಾದ ವಿಜಯನಗರಕ್ಕೆ ವರ್ಗಾಯಿಸುವ ಆಡಳಿತಾತ್ಮಕ ಪ್ರಕ್ರಿಯೆಯನ್ನ ಸರ್ಕಾರ ಆರಂಭಿಸಿದೆ. 1900 ನೇ ವರ್ಷದಲ್ಲಿ ಇಲ್ಲಿ ಮೊದಲ ಬಾರಿಗೆ, ಎಸ್ಪಿಯನ್ನ ಬ್ರಿಟೀಷರು ನೇಮಿಸಿದ್ದರು, ಸ್ವಾತಂತ್ರ್ಯ ಗಳಿಸಿದ ನಂತರವೂ ಇಲ್ಲಿನ ಎಸ್ಪಿ ಕಚೇರಿಗೆ ಎಂದಿನಂತೆ ಮುಂದುವರೆಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಕೆಜಿಎಫ್​​ ತಾಲೂಕು ಆಗಿದ್ದರು, ಇಂದಿಗೂ ಕೋಲಾರ ಹಾಗೂ ಕೆಜಿಎಫ್​​ ನಲ್ಲಿ ಇಬ್ಬರು ಎಸ್ಪಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಲಾರದಿಂದ ಚಿಕ್ಕಬಳ್ಳಾಪುರ ಜಿಲ್ಲೆಯನ್ನ ಬೇರ್ಪಡಿಸಿದಾಗ, ಕೆಜಿಎಫ್​​​ ಪೊಲೀಸ್ ಇಲಾಖೆಯನ್ನ ವಿಸರ್ಜ‌ನೆ ಮಾಡುವ ಚರ್ಚೆಗಳು ನಡೆದಿದ್ದವು. ಇದೀಗ ರಾಜ್ಯದ ನೂತನ ಜಿಲ್ಲೆಯಾಗಿ ವಿಜಯನಗರ ರಚನೆಯಾಗಿದೆ, ಹೊಸ ಜಿಲ್ಲೆಗೆ, ನೂತನ ಜಿಲ್ಲಾಧಿಕಾರಿ ಸೇರಿದಂತೆ, ಎಸ್ಪಿ ಕಚೇರಿಯನ್ನು ಆರಂಭಿಸಬೇಕಿದೆ, ಹೀಗಾಗಿ ಕೆಜಿಎಫ್ ಎಸ್ಪಿ ಕಚೇರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಇದನ್ನು ಓದಿ: .ಎಸ್​. ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್​ ಮೊಸಳೆ ಕಣ್ಣೀರು ಹರಿಸುವ ಅಗತ್ಯವಿಲ್ಲ; ಟ್ವಿಟರ್​ನಲ್ಲಿ ಬಿಜೆಪಿ ಕಿಡಿ

288 ಮಂದಿ ವರ್ಗಾವಣೆ
ಕೆಜಿಎಫ್​​ ಎಸ್ಪಿ ಕಚೇರಿಯ 40 ಮಂದಿ ಸಿಬ್ಬಂದಿ, 248 ಡಿಎಆರ್ ವಿಭಾಗದ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಎಸ್ಪಿ ಕಚೇರಿ ರದ್ದಾದ ಮೇಲೆ ಕೆಜಿಎಫ್​​ ಹಾಗು ಬಂಗಾರಪೇಟೆ ತಾಲೂಕಿಗೆ ಪ್ರತ್ಯೇಕವಾಗಿ ಡಿವೈಎಸ್ಪಿ ರನ್ನ ನೇಮಿಸಲಾಗುವುದು ಎಂದು ತಿಳಿದುಬಂದಿದ್ದು, ಕೆಜಿಎಫ್ ಜಿಲ್ಲಾ ಎಸ್ಪಿಯಾಗಿ ಇಲಕ್ಕಿಯಾ ಕರುಣಾಗರನ್ ಅವರು ಕೆಜಿಎಫ್​​ ಕೊನೆಯ ಎಸ್ಪಿ ಆಗಲಿದ್ದಾರೆ.

ಇದನ್ನು ಓದಿ: ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿರಲು, ಮಗುವನ್ನು ಹೆರದಿರಲು ಬಯಸಿದ್ದಾರೆ; ಸಚಿವ ಸುಧಾಕರ್

ಬೊಕ್ಕಸಕ್ಕೆ ಆಗುವ ನಷ್ಟ ತಡೆಯಲು ಸರ್ಕಾರದಿಂದ ಈ ಮಾರ್ಗ
ಕೆಜಿಎಫ್​​ ಎಸ್ಪಿ ಸ್ಥಳಾಂತರ ವಿಚಾರ ತಿಳಿದು ಈ ಹಿಂದೆ ಬಂದ್ ಗೆ ಕರೆ ನೀಡಲಾಗಿದ್ದು, ಕೆಜಿಎಫ್​​ ಶಾಸಕಿ ರೂಪಾಶಶಿಧರ್ ಸಹ ಕಚೇರಿ ಸ್ಥಳಾಂತರಕ್ಕೆ ವಿರೋದ ವ್ಯಕ್ತಪಡಿಸಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸ್ಥಳಾಂತರ ಮಾಡದಂತೆ ಮನವಿಯನ್ನು ಸಲ್ಲಿಸಿದ್ದಾರೆ, ಕೋಲಾರದ ಕೆಜಿಎಫ್​​ ನಲ್ಲಿ ಪ್ರತ್ಯೇಕ ಎಸ್ಪಿ ಕಚೇರಿ ಸ್ತಾಪನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದನ್ನ ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಎಸ್ಪಿ ಕಚೇರಿ ಸ್ತಳಾಂತರ ಬಳಿಕ ಕೆಜಿಎಫ್​​ ನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುವ ಆತಂಕವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
Published by:Seema R
First published: