ರಂಗೇರಿದ ಲೋಕಸಭಾ ಚುನಾವಣೆ: ಉಪ್ಪಿ ಸ್ಪರ್ಧಿಸಲ್ಲ, ಅಖಾಡದಲ್ಲಿದ್ದಾರೆ ಪ್ರಜಾಕೀಯ ಅಭ್ಯರ್ಥಿಗಳು

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ತಮ್ಮ 50ನೇ ಹುಟ್ಟುಹಬ್ಬದಂದು ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಪಿ) ಎಂಬ ಹೊಸ ಪಕ್ಷಕ್ಕೆ ಚಾಲನೆ ನೀಡಿದ್ದರು.

zahir | news18
Updated:March 9, 2019, 9:24 AM IST
ರಂಗೇರಿದ ಲೋಕಸಭಾ ಚುನಾವಣೆ: ಉಪ್ಪಿ ಸ್ಪರ್ಧಿಸಲ್ಲ, ಅಖಾಡದಲ್ಲಿದ್ದಾರೆ ಪ್ರಜಾಕೀಯ ಅಭ್ಯರ್ಥಿಗಳು
ನಟ ಉಪೇಂದ್ರ
  • News18
  • Last Updated: March 9, 2019, 9:24 AM IST
  • Share this:
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷವು 28 ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ನಟ ಉಪೇಂದ್ರ ತಿಳಿಸಿದ್ದಾರೆ.  ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ನಮ್ಮ ಪಕ್ಷವು ಈಗಾಗಲೇ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಅಭ್ಯರ್ಥಿಗಳ ಆಯ್ಕೆಯನ್ನು ಮೌಖಿಕ ಮತ್ತು ಬರವಣಿಗೆ ಸಂದರ್ಶನಗಳ ಮೂಲಕ ಆಯ್ಕೆ ಮಾಡಲಾಗಿದ್ದು, ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳೊಂದಿಗೆ ರಾಜ್ಯ ಪ್ರವಾಸ ಮಾಡುವುದಾಗಿ ಉಪೇಂದ್ರ ಹೇಳಿದರು.

ಇನ್ನು ರಂಗೇರುತ್ತಿರುವ ಮಂಡ್ಯ ರಾಜಕಾರಣದ ಬಗ್ಗೆ ಮಾತನಾಡಿದ ರಿಯಲ್ ಸ್ಟಾರ್, ನಾನು ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇನೆ. ಹೀಗಾಗಿ ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವ ಸಾಧ್ಯತೆಯಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ತಮ್ಮ 50ನೇ ಹುಟ್ಟುಹಬ್ಬದಂದು 'ಉತ್ತಮ ಪ್ರಜಾಕೀಯ ಪಾರ್ಟಿ' (ಯುಪಿಪಿ) ಎಂಬ ಹೊಸ ಪಕ್ಷಕ್ಕೆ ಚಾಲನೆ ನೀಡಿದ್ದರು. ಈ ಮೂಲಕ ರಾಜಕೀಯ ಬದಲಿಗೆ ಪ್ರಜಾಗಳಿಂದ ಪ್ರಜೆಗಳಿಗೋಸ್ಕರ ಎಂಬ ಪ್ರಜಾಕೀಯ ಕಲ್ಪನೆಯನ್ನು ಉಪ್ಪಿ ಮಂಡಿಸಿದ್ದರು. ಈ ಪಕ್ಷದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಉಪೇಂದ್ರ ಅವರು, ತಮ್ಮ ಅಭಿವೃದ್ಧಿ ಕಾರ್ಯಗಳ ಯೋಜನೆಗಳನ್ನು ವಿಡಿಯೊ ಮಾಡಿ ಅದನ್ನು ಪ್ರಜಾಕೀಯ ವೆಬ್‌ಸೈಟ್‌ಗೆ ಕಳುಹಿಸಿಕೊಡಬೇಕು ಎಂದು ತಿಳಿಸಿದ್ದರು.

ಅದನ್ನು ಯುಪಿಪಿಯಲ್ಲಿರುವ ಸ್ವಯಂ ಸೇವಕರು ಚರ್ಚಿಸಿ ಆನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಪಿಪಿಯಿಂದ ಒಂದು ಲಿಖಿತ ಪರೀಕ್ಷೆ ಸಹ ಇರಲಿದೆ. ಆ ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ತಮ್ಮ ಪಕ್ಷದಿಂದ ಟಿಕೆಟ್‌ ಸಿಗುತ್ತದೆ ಎಂದು ವಿವರಿಸಿದ್ದರು. ಅದರಂತೆ ಈಗ ಮುಂಬರುವ ಸಾರ್ವತ್ರಿಕ ಚುನಾವಣೆಗೆ 28 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
First published: March 9, 2019, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading