ಗುಜರಾತ್​​​: ಮೂರು ತಿಂಗಳಲ್ಲಿ ರಾಜಕೋಟ್​​​​​ ಸರ್ಕಾರಿ ಆಸ್ಪತ್ರೆಯಲ್ಲಿ 269 ಎಳೆ ಮಕ್ಕಳು ಸಾವು

ಎಎನ್​​ಐ ವರದಿ ಪ್ರಕಾರ, ಕಳೆದ ವರ್ಷ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 87 ಶಿಶುಗಳ ಸಾವನ್ನಪ್ಪಿವೆ. ಇನ್ನು ನವೆಂಬರ್​​ನಲ್ಲಿ 71 ಮತ್ತು ಡಿಸೆಂಬರ್​​ನಲ್ಲಿ ಅತೀ ಹೆಚ್ಚು ಅಂದರೆ 111 ಹಸುಳೆಗಳು ಸಾವಿಗೀಡಾಗಿವೆ ಎನ್ನಲಾಗುತ್ತಿದೆ.

news18-kannada
Updated:January 5, 2020, 7:17 PM IST
ಗುಜರಾತ್​​​: ಮೂರು ತಿಂಗಳಲ್ಲಿ ರಾಜಕೋಟ್​​​​​ ಸರ್ಕಾರಿ ಆಸ್ಪತ್ರೆಯಲ್ಲಿ 269 ಎಳೆ ಮಕ್ಕಳು ಸಾವು
ಮುಖ್ಯಮಂತ್ರಿ ವಿಜಯ್​ ರೂಪಾನಿ
  • Share this:
ನವದೆಹಲಿ(ಜ.05): ರಾಜಸ್ಥಾನದ ಬೆನ್ನಲ್ಲೀಗ ಗುಜರಾತ್​​​ ರಾಜ್‌ಕೋಟ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಳೆದ ಮೂರು ತಿಂಗಳಲ್ಲಿ 269 ಶಿಶುಗಳು ಸಾವಿಗೀಡಾಗಿವೆ ಎಂಬ ಸುದ್ದಿಯೀಗ ಬೆಳಕಿಗೆ ಬಂದಿದೆ. ಕಳೆದ ವರ್ಷ 2019 ಡಿಸೆಂಬರ್​​​​ ತಿಂಗಳಲ್ಲಿ ಗುಜರಾತ್​​ನಲ್ಲಿ ಮಾತ್ರ ಅತೀ ಹೆಚ್ಚು ಶಿಶುಗಳು ಮೃತಪಟ್ಟಿವೆ ಎಂದು ಎಎನ್​​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಎಎನ್​​ಐ ವರದಿ ಪ್ರಕಾರ, ಕಳೆದ ವರ್ಷ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 87 ಶಿಶುಗಳ ಸಾವನ್ನಪ್ಪಿವೆ. ಇನ್ನು ನವೆಂಬರ್​​ನಲ್ಲಿ 71 ಮತ್ತು ಡಿಸೆಂಬರ್​​ನಲ್ಲಿ ಅತೀ ಹೆಚ್ಚು ಅಂದರೆ 111 ಹಸುಳೆಗಳು ಸಾವಿಗೀಡಾಗಿವೆ ಎನ್ನಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶು ಮರಣಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನಿರಾಕರಿಸಿದ್ದಾರೆ.


ನಮ್ಮ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಶುಶ್ರೂಷೆಗೆ ಬೇಕಾದ ಉತ್ತಮ ವ್ಯವಸ್ಥೆ ಇಲ್ಲ. ಹಾಗಾಗಿ 500 ಹಾಸಿಗೆಗಳನ್ನು ಹೊಂದಿರುವ ಹೊಸ ಆಸ್ಪತ್ರೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಶಿಶುಮರಣ ತಡೆಯಲು ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಲಿದೆ ಎಂಬ ಭರವಸೆ ಇದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಮನೀಶ್ ಮೆಹ್ತಾ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಕೋಟ ಪ್ರಕರಣ: ಶಿಶುಮರಣ 107ಕ್ಕೇರಿಕೆ; ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೊಟೀಸ್

ರಾಜಸ್ಥಾನದ ಕೋಟದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಡಿಸೆಂಬರ್‌ 30ನೇ ತಾರೀಕಿನಂದ ನಾಲ್ಕು ಶಿಶುಗಳು ಮೃತಪಟ್ಟಿದ್ದವು. ಬಳಿಕ ಡಿಸೆಂಬರ್​ 31ಕ್ಕೆ ಈ ಸಂಖ್ಯೆ ಐದಕ್ಕೇರಿತ್ತು. ಆದರೀಗ ಒಂದು ತಿಂಗಳಿನಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ನೂರಾರು ಮಕ್ಕಳು ಮೃತಪಟ್ಟ ಬೆನ್ನಲ್ಲೀಗ ಕೇಂದ್ರ ಮಾನವ ಹಕ್ಕು ಆಯೋಗ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.

ಶಿಶುಮರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಮಾಧ್ಯಮಗಳ ವರದಿ ಆಧಾರದ ಮೇರೆಗೆ ಕೇಸ್​ ದಾಖಲಿಸಿಕೊಂಡ ಆಯೋಗ ಈ ಸಂಬಂಧ ರಾಜಸ್ಥಾನ ಸರ್ಕಾರಕ್ಕೆ ನೋಟಿಸ್​ ನೀಡಿದೆ. ನಾಲ್ಕು ವಾರಗಳೊಳಗೆ ವಿಸ್ತೃತ ವರದಿ ನೀಡುವಂತೆ ಸೂಚಿಸಿದೆ.
Published by: Ganesh Nachikethu
First published: January 5, 2020, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading