Kalaburagi: ಜಿಮ್ ಗೆ ಹೊರಟವ ಬಸ್ ನಿಲ್ದಾಣದಲ್ಲಿ ನೂರಾರು ಜನರ ಮುಂದೆಯೇ ಕೊಲೆಯಾದ ಯುವಕ

ಇನ್ನು ಅಭಿಷೇಕ್ ಕಳೆದ ಅನೇಕ ತಿಂಗಳಿಂದ ಬೆಂಗಳೂರಿನಲ್ಲಿದ್ದ. ಆದ್ರೆ ಹಬ್ಬಕ್ಕಾಗಿ ಮೂರ್ನಾಲ್ಕು ದಿನಗಳ ಹಿಂದೆ  ಕಲಬುರಗಿ ನಗರಕ್ಕೆ ಬಂದಿದ್ದ.  ಅಭಿಷೇಕ ಕಲಬುರಗಿಗೆ ಬರೋದನ್ನೆ ಕಾದಿದ್ದ ದುಷ್ಕರ್ಮಿಗಳು ಇಂದು ಕೊಲೆ ಮಾಡಿದ್ದಾರೆ.

ಕೊಲೆಯಾದ ಅಭಿಷೇಕ್

ಕೊಲೆಯಾದ ಅಭಿಷೇಕ್

  • Share this:
ಸಾರ್ವಜನಿಕರು ಆಗಷ್ಟೇ ಎದ್ದು ತಮ್ಮ ಊರಿನತ್ತ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು.. ಆದರೆ ಅಲ್ಲಿ ಮಾತ್ರ ಕ್ಷಣಾರ್ಧದಲ್ಲಿ ಇಡೀ ಕೇಂದ್ರ ಬಸ್ ನಿಲ್ದಾಣ ರಣಾಂಗಣವಾಗಿದೆ. ಅಷ್ಟಕ್ಕೂ ಹಂತಕರ ಗ್ಯಾಂಗ್‌ವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ‌ಕೊಚ್ಚಿ ಯುವಕನೋರ್ವನನ್ನ ಸಾರ್ವಜನಿಕರ ಮಧ್ಯೆಯೇ ಭೀಕರವಾಗಿ ಹತ್ಯೆ ಮಾಡಿ ಎಸ್ಕೆಪ್ ಆಗಿದ್ದು, ಲೈವ್ ಮರ್ಡರ್ ಕಂಡು ತೊಗರಿಯ ಕಣಜದ ಮಂದಿ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ನೂರಾರು ಜನರ ಮುಂದೆಯೇ ಯುವಕನೋರ್ವನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಈ ಎಲ್ಲ ದೃಶ್ಯಗಳು ಅಂಗಡಿಗಳ ಮುಂಭಾಗದ ಸಿಸಿಟಿವಿ (CCTV Footage), ಸ್ಥಳೀಯರ ಮೊಬೈಲ್ (Mobile) ನಲ್ಲಿ ಸೆರೆಯಾಗಿವೆ.

ಅದು ಭಯಾನಕ ದೃಶ್ಯ

ಯುವಕನೋರ್ವನನ್ನು (25 Year Old Youth)ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗ್ತಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಲು ಯುವಕ ಹರಸಾಹಸ ಪಡುತ್ತಿದ್ದಾನೆ. ಸುತ್ತಮುತ್ತಲು ಅನೇಕ ಜನರು ಇದ್ದಾರೆ. ಜನರ ನಡುವೆ ಯುವಕನೋರ್ವ ಓಡಿ ಹೋಗುತ್ತಿದ್ದರೆ, ಆತನ ಬೆನ್ನುಬಿದ್ದ ದುಷ್ಕರ್ಮಿಗಳು ಪಾಲೋ ಮಾಡಿದ್ದಾರೆ. ನಂತರ ನಡೆದಿದ್ದೇ ರಕ್ತದೋಕುಳಿ. ಸುತ್ತಮುತ್ತಲು ನೂರಾರು ಜನರಿದ್ದಾರೆ. ಆದರೂ ಕೂಡಾ ಯಾರ ಅಂಜಿಕೆ ಅಳುಕಿಲ್ಲದೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಯುವಕನಿಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.  

ಸಿಸಿಟಿವಿ ಮತ್ತು ಮೊಬೈಲ್ ವಿಡಿಯೋ 

ಕಲಬುರಗಿ ನಗರದ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರು. ಜನರು ಗಡಿಬಿಡಿಯಿಂದ ತಮ್ಮ ಮನೆಗೆ ಹೋಗುತ್ತಿದ್ದರೆ, ಮತ್ತೊಂದಡೆ ಜನನಿಬಿಡ ಪ್ರದೇಶದಲ್ಲಿಯೇ ರೌಡಿ ಶೀಟರ್ ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂದು ಮುಂಜಾನೆ ಏಳು  ಗಂಟೆಗೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿಶೀಟರ್ ರ್ ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಜಿಮ್ ಗೆ ಹೊರಟವನ ಕೊಲೆ

ಕೊಲೆಯಾದ ಯುವಕನ ಹೆಸರು ಅಭಿಷೇಕ್ ನಂದೂರ್ ಅಂತ. ವಯಸ್ಸು ಕೇವಲ 25. ಕಲಬುರಗಿ ನಗರದ ವಿದ್ಯಾ ನಗರದ ನಿವಾಸಿ. ಇಂದು ಮುಂಜಾನೆ ಜಿಮ್ ಗೆ ಹೋಗಲು ಅಭಿಷೇಕ, ಮನೆಯಿಂದ ಸ್ಕೂಟಿ ಹತ್ತಿ ಹೋಗಿದ್ದ.  ಆದ್ರೆ ಕೇಂದ್ರ ಬಸ್ ನಿಲ್ದಾಣದ ಮುಂದೆ ಬಂದಾಗ,  ಅಭಿಷೇಕ ಬೈಕ್ ಗೆ ದುಷ್ಕರ್ಮಿಗಳು ತಮ್ಮ ಪಲ್ಸರ್ ಬೈಕ್ ನಿಂದ ಡಿಕ್ಕಿ ಹೊಡೆಸಿದ್ದಾರೆ.

ಬೆನ್ನಹಿಂದ ಬಂದವರು, ತನ್ನ ಕೊಲೆ ಮಾಡಲಿಕ್ಕೆ ಬಂದಿದ್ದಾರೆ ಅನ್ನೋದು ಅಭಿಷೇಕ್ ಗೆ ಅರ್ಥವಾಗಿತ್ತು. ಹೀಗಾಗಿ ದಿಡೀರನೆ ಅಲ್ಲಿಂದ ಕಾಲ್ಕಿತ್ತಿದ್ದ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ. ಆದ್ರೆ ದುಷ್ಕರ್ಮಿಗಳು ಅಭಿಷೇಕ್ ನನ್ನು ಬೆನ್ನು ಹತ್ತಿದ್ದರು. ಕೊನೆಗೆ ಅಭಿಷೇಕ್ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದೊಳಗೆ ಹೋಗಿದ್ದ. ಆದ್ರೆ ಅಲ್ಲಿ ಹೋದ್ರು ಕೂಡಾ ಬಿಡದ ನಾಲ್ವರು ದುಷ್ಕರ್ಮಿಗಳು ಬಸ್ ನಿಲ್ದಾಣದ ಆವರಣದಲ್ಲಿಯೇ ನೂರಾರು ಜನರು ಇದ್ರು ಕೂಡಾ ಅಭಿಷೇಕ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅಭಿಷೇಕ್ ಕಲಬುರಗಿಗೆ ಬರೋದನ್ನ ಕಾಯ್ತಾ ಇದ್ರು

ಇನ್ನು ಕೊಲೆಯಾದ ಅಭಿಷೇಕ ರೌಡಿ ಶೀಟರ್‌ನಾಗಿದ್ದ. ಕಲಬುರಗಿ ನಗರದ ಅಶೋಕ್ ನಗರ ಸೇರಿದಂತೆ ಕೆಲ ಠಾಣೆಗಳಲ್ಲಿ ಆತನ ವಿರುದ್ದ ಅನೇಕ ಪ್ರಕರಣಗಳು ಇದ್ದವು. ಕೊಲೆಯಾದ ಅಭಿಷೇಕ ತಂದೆ ಕಲಬುರಗಿ ನಗರದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಕಾನಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನಸ್ಟೇಬಲ್ ಪುತ್ರನನ್ನೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇನ್ನು ಅಭಿಷೇಕ್ ಕಳೆದ ಅನೇಕ ತಿಂಗಳಿಂದ ಬೆಂಗಳೂರಿನಲ್ಲಿದ್ದ. ಆದ್ರೆ ಹಬ್ಬಕ್ಕಾಗಿ ಮೂರ್ನಾಲ್ಕು ದಿನಗಳ ಹಿಂದೆ  ಕಲಬುರಗಿ ನಗರಕ್ಕೆ ಬಂದಿದ್ದ.  ಅಭಿಷೇಕ ಕಲಬುರಗಿಗೆ ಬರೋದನ್ನೆ ಕಾದಿದ್ದ ದುಷ್ಕರ್ಮಿಗಳು ಇಂದು ಕೊಲೆ ಮಾಡಿದ್ದಾರೆ.

ಪದೇ ಪದೇ ನಗರದಲ್ಲಿ ಗ್ಯಾಂಗ್ ವಾರ್ 

ಕೊಲೆ ಮಾಡಿದವರು ಕಲಬುರಗಿ ನಗರದ ಸಾಗರ್ ಮತ್ತು ಆತನ ಗ್ಯಾಂಗ್ ನ ಸಹಚರರು ಅಂತ ಪೊಲೀಸರು ಗುರುತಿಸಿದ್ದಾರೆ. ಹೌದು ಕೊಲೆಯ ವಿಡಿಯೋ ಆಧಾರದ ಮೇಲೆ ಸಾಗರ್ ಮತ್ತು ಆತನ ಗ್ಯಾಂಗ್  ಕೊಲೆ ಮಾಡಿದ್ದಾರೆ ಅಂತ ಹೇಳಲಾಗಿದೆ. ಸಾಗರ್ ಮತ್ತು ಅಭಿಷೇಕ್ ನಡುವೆ ಕಳೆದ ಮೂರ್ನಾಲ್ಕು ವರ್ಷಗಳಿಂದ ದ್ವೇಷ ಬೆಳದಿತ್ತು. ಎರಡು ಗ್ಯಾಂಗ್ ಗಳ ನಡುವೆ ಆಗಾಗ ಗ್ಯಾಂಗ್ ವಾರ್ ಗಳು ನಡೆಯುತ್ತಲೇ ಇದ್ದವು. ಇದೇ ದ್ವೇಷದ ಹಿನ್ನಲೆಯಲ್ಲಿ ಇಂದು ಸಾಗರ್ ಮತ್ತು ಆತನ ದುಷ್ಕರ್ಮಿಗಳು ಅಭಿಷೇಕ್ ನನ್ನು ಕೊಲೆ ಮಾಡಿದ್ದಾರೆ.

ಸದ್ಯ ಅಭಿಷೇಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ನಂತರ ತಲೆ ಮರೆಸಿಕೊಂಡಿರೋ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.  ಆದ್ರೆ ಜನನಿಬಿಡ ಪ್ರದೇಶದಲ್ಲಿಯೇ ಬರ್ಬರ ಕೊಲೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ವರದಿ; ಅರುಣ್ ಕುಮಾರ್ 
Published by:Mahmadrafik K
First published: