25 ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಂದಾದರು ಧ್ವನಿ ಎತ್ತಿದ್ದಾರಾ?; ಸಿದ್ದರಾಮಯ್ಯ ಕಿಡಿ

ಬಿಹಾರ, ಉತ್ತರ ಪ್ರದೇಶಗಳೇನೋ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆದರೆ, ಗುಜರಾತಿಗೇನಾಗಿದೆ? ಕರ್ನಾಟಕದ ಜನರೇಕೆ ಗುಜರಾತಿನ ಉದ್ಧಾರಕ್ಕೆ ಹಣ ನೀಡಬೇಕು? ಗುಜರಾತ್ ಮಾದರಿ ಹೇಳಕೊಂಡೇ ನರೇಂದ್ರ ಮೋದಿಯವರು ಪ್ರಧಾನಿಯಾದರು. ಹಾಗಿದ್ದರೆ ಗುಜರಾತ್ ಮಾದರಿ ಸುಳ್ಳೇ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

  • Share this:
ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವೆಸಗುತ್ತಿದ್ದು, ಇದರ ವಿರುದ್ಧ ಸಂಸತ್​ನಲ್ಲಿ ರಾಜ್ಯದ 25 ಸಂಸದರು ಎಂದಾದರೂ ಧ್ವನಿ ಎತ್ತಿದ್ದಾರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್​ ಮೂಲಕ ಕಿಡಿಕಾರಿದ್ದಾರೆ.

ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಭಾಷಣದಲ್ಲಿ ಇಂದು ತಾವು ಉಲ್ಲೇಖಿಸಿ ಮಾತನಾಡಿದ್ದ ಅದೇ ವಿಚಾರವನ್ನು ಟ್ವಿಟರ್​ನಲ್ಲೂ ಪ್ರಶ್ನೆ ಮಾಡುವ ಮೂಲಕ ಆಡಳಿತರೂಢ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, “ತೆರಿಗೆ ಸಂಗ್ರಹದಲ್ಲಿ ದೆಹಲಿ ಮಹಾರಾಷ್ಟ್ರ ನಂತರದ 3ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಆದರೆ, ಕೇಂದ್ರದ ಅನುದಾನ ನೀಡಿಕೆಯಲ್ಲಿ 17,000 ಕೋಟಿ ಕಡಿಮೆಯಾಗಿದೆ. ರಾಜ್ಯದ ಜಿಎಸ್​ಟಿ ಪಾಲು ಹಾಗೂ ಪ್ರವಾಹ ಪರಿಹಾರ ನಿಧಿಯೂ ಬಂದಿಲ್ಲ.14ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯದ ತೆರಿಗೆ ಪಾಲು ಶೇ.42ರಷ್ಟು. ಈ ಬಾರಿ ನಮ್ಮ ಪಾಲಿನ ರೂ.9,000 ಕೋಟಿ ತೆರಿಗೆ ಹಣ ಖೋತಾ ಆಗಿದೆ. 2020-21 ನೇ ಸಾಲಿನಲ್ಲಿ 11,000 ಕೋಟಿಗೂ ಅಧಿಕ ಹಣ ಕಡಿಮೆಯಾಗಲಿದೆ. ಒಟ್ಟು ಐದು ವರ್ಷಕ್ಕೆ 60,000 ಕೋಟಿ ರಾಜ್ಯದ ಪಾಲಿನ ಹಣ ಕಡಿಮೆಯಾಗುತ್ತೆ. ಇದು ಸದ್ಯದ ನಮ್ಮ ಆರ್ಥಿಕ ಪರಿಸ್ಥಿತಿ" ಎಂದು ವಿವರಿಸಿದ್ದಾರೆ.ಇನ್ನೂ "ಕೇಂದ್ರಕ್ಕೆ ಕರ್ನಾಟಕ ತೆರಿಗೆ ಸಂಗ್ರಹ ರೂಪದಲ್ಲಿ ರೂ.100 ನೀಡಿದರೆ ರೂ.42 ಮಾತ್ರ ರಾಜ್ಯಕ್ಕೆ ವಾಪಾಸು ಬರುತ್ತಿದೆ. ಅದೇ ಉತ್ತಪ್ರದೇಶಕ್ಕೆ ರೂ.198, ಗುಜರಾತ್​ಗೆ ರೂ.235 ವಾಪಾಸು ನೀಡಲಾಗುತ್ತಿದೆ. ಬಿಹಾರ ಬಡ ರಾಜ್ಯ, ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ಜಾಸ್ತಿ ಎಂಬ ಕಾರಣಕ್ಕೆ ಹೆಚ್ಚು ಪಾಲು ನೀಡಲಾಗುತ್ತಿದೆ. ಇದು ನಮಗೆ ಆಗುತ್ತಿರುವ ಅನ್ಯಾಯವಲ್ಲವೇ? ಎಂದು ಪ್ರಶ್ನೆ ಮಾಡಿರುವ ಅವರು,ಬಿಹಾರ, ಉತ್ತರ ಪ್ರದೇಶಗಳೇನೋ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆದರೆ, ಗುಜರಾತಿಗೇನಾಗಿದೆ? ಕರ್ನಾಟಕದ ಜನರೇಕೆ ಗುಜರಾತಿನ ಉದ್ಧಾರಕ್ಕೆ ಹಣ ನೀಡಬೇಕು? ಗುಜರಾತ್ ಮಾದರಿ ಹೇಳಕೊಂಡೇ ನರೇಂದ್ರ ಮೋದಿಯವರು ಪ್ರಧಾನಿಯಾದರು. ಹಾಗಿದ್ದರೆ ಗುಜರಾತ್ ಮಾದರಿ ಸುಳ್ಳೇ?" ಎಂದು ಕಿಡಿಕಾರಿದ್ದಾರೆ."ಸಾಮಾನ್ಯವಾಗಿ ಒಂದು ಹಣಕಾಸು ಆಯೋಗದಿಂದ ಇನ್ನೊಂದು ಹಣಕಾಸು ಆಯೋಗಕ್ಕೆ ಬದಲಾದಾಗ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು, ದುರಂತವೆಂದರೆ ವರ್ಷ ಕಳೆದಂತೆ ನಮ್ಮ ರಾಜ್ಯಕ್ಕೆ ಈ ಪಾಲು ಕಡಿಮೆಯಾಗುತ್ತಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಧ್ವನಿ ಎತ್ತಿದರೆ ಮಾತ್ರ ನಮಗೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲು ಸಿಗಲು ಸಾಧ್ಯಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ರಾಜ್ಯದಲ್ಲಿ ರಾಮರಾಜ್ಯ ಬರುತ್ತೆ ಎಂದು ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದೀರಿ. ಇದೇನಾ ರಾಮರಾಜ್ಯ? ನಿಮ್ಮ 25 ಸಂಸದರು ಎಂದಾದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಕ್ಕೆ ದನಿ ಎತ್ತಿದ್ದಾರಾ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, "ಮಹದಾಯಿ ನೀರು ಹಂಚಿಕೆ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ. ಐತೀರ್ಪು ಪ್ರಶ್ನಿಸಿರುವ ಮೇಲ್ಮನವಿಯ ವಿಚಾರಣೆ ಜುಲೈ 15ರಿಂದ ಪ್ರಾರಂಭವಾಗಲಿದೆ. ರಾಜ್ಯವನ್ನು ಪ್ರತಿನಿಧಿಸುವ ವಕೀಲರ ತಂಡಕ್ಕೆ ರಾಜ್ಯ ಸರ್ಕಾರ ಅಗತ್ಯ ಮಾಹಿತಿ ನೀಡಿ ಸಹಕರಿಸಿ ನ್ಯಾಯಾಲಯದಲ್ಲಿಯೂ ಗೆಲುವು ನಮ್ಮದಾಗುವಂತೆ ನೋಡಿಕೊಳ್ಳಬೇಕು.ಸುಪ್ರೀಮ್ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ತಕ್ಷಣ ಗೆಜೆಟ್ ಪ್ರಕಟಣೆ ಮಾಡಿ ಕಳಸಾ-ಬಂಡೂರಿ ನಾಲೆ ನಿರ್ಮಾಣ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪ್ರಾರಂಭಿಸಬೇಕು. ಯೋಜನೆಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರಕ್ಕೆ ಜೈ ಅಂದ ಬಿಜೆಪಿ ಶಾಸಕ ಬಸವರಾಜ ಮತ್ತಿಮೋಡ್ ಹೆಂಡತಿ; ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮಾಪಣೆ
First published: