ಮಧ್ಯಮ ವರ್ಗದ ವಸತಿ ಹಸ್ತಾಂತರಕ್ಕೆ ತಡೆ: ಧೂಳು ಹಿಡಿಯುತ್ತಿದೆ ಕೋಟ್ಯಾಂತರ ರೂ. ವೆಚ್ಚದ ಆಸ್ತಿ

ಕಂಪನಿಯು 25 ಕೋಟಿ ರೂಪಾಯಿಗಳನ್ನು ಗೃಹ ಮಂಡಳಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದು, ಸರಕಾರದ ವತಿಯಿಂದ ಪರಿಹರಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಇಂಜಿನಿಯರ್​​​ ವಿಜಯ್ ಕುಮಾರ್ ನ್ಯೂಸ್ 18 ಗೆ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಸಮ್ಮುಚ್ಚಾಯ

ಸರ್ಕಾರಿ ಸಮ್ಮುಚ್ಚಾಯ

  • Share this:
ಪುತ್ತೂರು(ಸೆ.29): ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಎನ್ನುವ ಕನಸನ್ನು ಸಕಾರಗೊಳಿಸುವ ಕರ್ನಾಟಕ ಗೃಹ ಮಂಡಳಿಯ ವಸತಿ ಸಮುಚ್ಛಯವೊಂದು ಪಾಳು ಬೀಳುವ ಹಂತಕ್ಕೆ ತಲುಪಿದೆ. ಯಾವುದೋ ಕಾಮಗಾರಿಯ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಮಧ್ಯಮ ವರ್ಗದ ಜನರಿಗಾಗಿ ಕಟ್ಟಿಸಿರುವ ಈ ವಸತಿ ಸಮುಚ್ಛಯವನ್ನು ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿಸಿದೆ. ಈ ಕಾರಣಕ್ಕೆ ಕಟ್ಟಡ ಪೂರ್ಣಗೊಂಡು 4 ವರ್ಷವಾದರೂ, ಅಗತ್ಯವಿರುವ ಜನರಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಸುಮಾರು 65 ಕೋಟಿ ವೆಚ್ಚದಲ್ಲಿ ಈ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. ಕರ್ನಾಟಕ ಗೃಹ ಮಂಡಳಿ ಈ ವಸತಿ ಸಮುಚ್ಛಯವನ್ನು ನಿರ್ಮಿಸಿದ್ದು, ಮಧ್ಯಮ ವರ್ಗದ ಜನರಿಗೆ ಕೈಗೆಟಕುದ ದರದಲ್ಲಿ ಮನೆಗಳನ್ನು ನೀಡುವ ಯೋಜನೆಯ ಅಡಿಯಲ್ಲಿ ಈ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. ವಸತಿ ಸಮುಚ್ಛಯದ ಕಾಮಗಾರಿಯೆಲ್ಲಾ ಮುಗಿದು ಇನ್ನೇನು ಈ ಮನೆಗಳನ್ನು ಜನರಿಗೆ ಕೈಗೆಟಕುವ ದರದಲ್ಲಿ ನೀಡಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಗುತ್ತಿಗೆ ಕಾಮಗಾರಿ ನಡೆಸುವ ಕಂಪನಿಯೊಂಡು ಈ ಸಿದ್ಧತೆಗಳಿಗೆ ತಡೆಯೊಡ್ಡಿದೆ.

ಹೌದು, 65 ಕೋಟಿ ವೆಚ್ಚ ಮಾಡಿ, 216 ಫ್ಲಾಟ್ ಗಳನ್ನು ಈ ವಸತಿ ಸಮುಚ್ಛಯದಲ್ಲಿ ನಿರ್ಮಿಸಲಾಗಿದೆ. ಆದರೆ ಆ್ಯಂಕರ್ ಲಯನ್ ಹೆಸರಿನ ಕಂಪನಿಯೊಂದು ಈ ವಸತಿ ಸಮುಚ್ಛಯವನ್ನು ಜನರಿಗೆ ಹಸ್ತಾಂತರ ಮಾಡುವುದಕ್ಕೆ ನ್ಯಾಯಾಲಯದಿಂದ ತಡೆ ತಂದಿದೆ. 1991 ರಲ್ಲಿ ಕರ್ನಾಟಕ ಗೃಹ ಮಂಡಳಿಯು ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಮನೆಗಳ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದ ಈ ಕಂಪನಿಗೆ ಹಣ ಪಾವತಿಯಾಗಿಲ್ಲ ಎನ್ನುವ ಕಾರಣಕ್ಕೆ ದೇರಳಕಟ್ಟೆಯಲ್ಲಿ ನಿರ್ಮಾಣಗೊಂಡಿದ್ದ ಈ ವಸತಿ ಸಮುಚ್ಛಯವನ್ನು ನ್ಯಾಯಾಲಯದ ನೀಡಿದ ದೂರಿನಲ್ಲಿ ಸೇರಿಸಿಕೊಂಡಿದೆ.

ಕರ್ನಾಟಕ ಗೃಹ ಮಂಡಳಿಯ ಆಸ್ತಿಯಾಗಿರುವ ಕಾರಣ ಈ ವಸತಿ ಸಮುಚ್ಛಯವನ್ನು ಗುತ್ತಿಗೆ ಕಂಪನಿಯು ಸೇರಿಸಿಕೊಂಡಿದೆ. ಇದರಿಂದಾಗಿ ಮಧ್ಯಮವರ್ಗಕ್ಕೆ ಸಿಗಬೇಕಾಗಿದ್ದ ಮನೆಗಳು ಇದೀಗ ಧೂಳು ಹಿಡಿದು , ಪಾಳು ಬೀಳುವ ಸ್ಥಿತಿಯಲ್ಲಿದೆ. ಈ ವಸತಿ ಸಮುಚ್ಛಯವನ್ನು ತನ್ನ ದೂರಿನಲ್ಲಿ ಸೇರಿಸಿರುವ ಕಾರಣದಿಂದಾಗಿ ಪೂರ್ಣಗೊಂಡ ಮನೆಗಳನ್ನು ಅಗತ್ಯವಿರುವ ಕುಟುಂಬಗಳಿಗೆ ಹಸ್ತಾಂತರ ಮಾಡಲು ತೊಡಕಾಗಿದೆ.

ಕಂಪನಿಯು 25 ಕೋಟಿ ರೂಪಾಯಿಗಳನ್ನು ಗೃಹ ಮಂಡಳಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದು, ಸರಕಾರದ ವತಿಯಿಂದ ಪರಿಹರಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಇಂಜಿನಿಯರ್​​​ ವಿಜಯ್ ಕುಮಾರ್ ನ್ಯೂಸ್ 18 ಗೆ ಪ್ರತಿಕ್ರಿಯಿಸಿದ್ದಾರೆ.
Published by:Ganesh Nachikethu
First published: