• Home
  • »
  • News
  • »
  • state
  • »
  • Bengaluru: ಮೂರೇ ತಿಂಗಳಲ್ಲಿ ಕುಸಿದ 25 ಕೋಟಿಯ ಕಾಮಗಾರಿ; 40 ಪರ್ಸೆಂಟ್​​ಗೆ ಸಾಕ್ಷ್ಯ ಅಂದ್ರು ಕಾಂಗ್ರೆಸ್ ನಾಯಕ

Bengaluru: ಮೂರೇ ತಿಂಗಳಲ್ಲಿ ಕುಸಿದ 25 ಕೋಟಿಯ ಕಾಮಗಾರಿ; 40 ಪರ್ಸೆಂಟ್​​ಗೆ ಸಾಕ್ಷ್ಯ ಅಂದ್ರು ಕಾಂಗ್ರೆಸ್ ನಾಯಕ

ಕುಸಿದ ರಸ್ತೆ

ಕುಸಿದ ರಸ್ತೆ

ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದು, ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಬಸವರಾಜ್ ಬೊಮ್ಮಾಯಿ ವಿಫಲರಾಗಿದ್ದಾರೆ ಎಂದು ನಾಗರಾಜ್ ಯಾದವ್ ಆರೋಪಿಸಿದರು.

  • Share this:

ಬೆಂಗಳೂರಿನ ಕುಂದಲಹಳ್ಳಿಯ (Kundalahalli, Bengaluru) ಬಳಿ ಮೂರು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್​ಪಾಸ್ (Underpass) ನಿರ್ಮಾಣಗೊಂಡಿದೆ. ಆದ್ರೆ ಈ ಅಂಡರ್​​ಪಾಸ್ ಕೇವಲ ಮೂರು ತಿಂಗಳಲ್ಲಿ ಕುಸಿದಿದ್ದು, ಸಾರ್ವಜನಿಕರು (Public) ಆಕ್ರೋಶ ಹೊರಹಾಕಿದ್ದಾರೆ. ಅಂಡರ್​ಪಾಸ್ ಕುಸಿದಿರುವ ವಿಡಿಯೋವನ್ನು (Video) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು (Congress Leaders) ಇದು ಬಿಜೆಪಿ ಸರ್ಕಾರದ (BJP Government) 40% ಕಮಿಷನ್ ಆರೋಪಕ್ಕೆ (Commission Allegation) ಸಾಕ್ಷಿ ಎಂದು ಕಿಡಿಕಾರಿದ್ದಾರೆ. ಅಂಡರ್​ಪಾಸ್​ ಕುಸಿದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಹೂಡಿ ಮುಖ್ಯ ರಸ್ತೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಂದನಹಳ್ಳಿಯಲ್ಲಿ ಅಂಡರ್​ಪಾಸ್ ಕುಸಿದಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪೈಪ್‌ಲೈನ್ ಸೋರಿಕೆಯಾಗಿದ್ದರಿಂದಲೇ ಅಂಡರ್​ಪಾಸ್ ಕುಸಿತ ಕಂಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.


ಮೂರು ತಿಂಗಳ ಹಿಂದೆಯೇ ಉದ್ಘಾಟನೆ


2019ರಲ್ಲಿ ಅಂಡರ್​ಪಾಸ್​ ಕಾಮಗಾರಿ ಶುರುವಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಈ ಅಂಡರ್​ಪಾಸ್ ಉದ್ಘಾಟನೆ ಆಗಿತ್ತು. ಆದ್ರೆ ಈಗ ಮಳೆಯಿಂದಾಗಿ ಅಂಡರ್​ಪಾಸ್​​ ಹಂತ ಹಂತವಾಗಿ ಕುಸಿಯಲು ಆರಂಭಿಸಿದೆ.


ಇನ್ನು ಪೈಪ್​ಲೈನ್ ಸೋರಿಕೆಗೊಂಡ ಕಾರಣ ಈ ಭಾಗದಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಕುಸಿದ ರಸ್ತೆಗೆ ಜಲ್ಲಿ ಕಲ್ಲು ಹಾಕಲಾಗಿದೆ. ಸದ್ಯ ರಸ್ತೆ ಸರಿಪಡಿಸಲು ಕೆಲವು ದಿನಗಳು ಬೇಕಾಗಬಹುದು. ವಾರ್ಷಿಕ ನಿರ್ವಹಣೆ ಮತ್ತು ನ್ಯೂನತೆ ಹೊಣೆಗಾರಿಕೆ ಷರತ್ತುಗಳು ಅನ್ವಯ ಆಗುವ ಕಾರಣ ಗುತ್ತಿಗೆದಾರರು ಮತ್ತೆ ಹೊಸ ಬಿಲ್ ಸಲ್ಲಿಕೆ ಮಾಡಲು ಬರಲ್ಲ. ಹಾಗಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರು ರಸ್ತೆ ಸರಿಪಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.


ಬಿಜೆಪಿ ವಿರುದ್ಧ ನಾಗರಾಜ್ ಯಾದವ್ ಕಿಡಿ


ಇದು ಬಿಜೆಪಿ ಸರ್ಕಾರದ ಶೇ.40ರ ಕಮಿಷನ್​ಗೆ ಮತ್ತೊಂದು ಸಾಕ್ಷಿಯಾಗಿದೆ. ಇಂತಹ ಆರೋಪಗಳು ಆಧಾರರಹಿತ ಎಂದು ಸರ್ಕಾರ ತಳ್ಳಿಹಾಕುತ್ತಿದೆ. ಈ ಕೂಡಲೇ ಕಾಮಗಾರಿ ನಡೆಸಿದ ಗುತ್ತಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲಿಸಬೇಕು ಎಂದು ಕಾಂಗ್ರೆಸ್ ನಾಯಕ ನಾಗರಾಜ್ ಯಾದವ್ ಆಗ್ರಹಿಸಿದ್ದಾರೆ.


ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದು, ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಬಸವರಾಜ್ ಬೊಮ್ಮಾಯಿ ವಿಫಲರಾಗಿದ್ದಾರೆ ಎಂದು ನಾಗರಾಜ್ ಯಾದವ್ ಆರೋಪಿಸಿದರು.


ಬಿಎಂಟಿಸಿ ಬಸ್ ಅಪಘಾತ


ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅವಘಡದಲ್ಲಿ ವಿದ್ಯಾರ್ಥಿನಿಯ ಕಾಲಿಗೆ ಗಂಭೀರವಾಗಿ ಪೆಟ್ಟಾಗಿದೆ. ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದ್ದು, ಚಾಲಕ ಎಸ್ಕೇಪಾಗಿದ್ದಾನೆ. ಗಂಭೀರ ಗಾಯಗೊಂಡಿರುವ ಯುವತಿಯನ್ನ ನಾಗರಭಾವಿಯ  ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.


ಇದನ್ನೂ ಓದಿ:  MLA Rajugowda: ಸಿಎಂ ಬೊಮ್ಮಾಯಿ, ನಾಡಿನ ಜನತೆ ಬಳಿ ಕ್ಷಮೆ ಕೇಳಿದ ಶಾಸಕ ರಾಜುಗೌಡ


ವಿದ್ಯುತ್ ಸಂಪರ್ಕಕ್ಕಾಗಿ ಪರದಾಟ


ವಿದ್ಯುತ್ ಸಂಪರ್ಕಕ್ಕಾಗಿ ಬಡ ಕುಟುಂಬವೊಂದು ಪರದಾಡ್ತಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಬುಕ್ಕಸಾಗರದಲ್ಲಿ ರಾಜಮ್ಮ ಮತ್ತು ಕುಟುಂಬ ಗೋಮಾಳ ಜಾಗದಲ್ಲಿ ಕಳೆದ 20 ವರ್ಷಗಳಿಂದ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ರಾಜಮ್ಮ ಈ ವಿಷಯವನ್ನ ಸ್ಥಳೀಯ ಶಾಸಕ ಎಂ ಕೃಷ್ಣಪ್ಪ ಗಮನಕ್ಕೆ ತಂದಿದ್ದಾರೆ.


ಕೂಡಲೇ ಸ್ಪಂದಿಸಿದ ಶಾಸಕರು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಸಕರ ಸೂಚನೆ ಮೇರೆಗೆ ಬೆಸ್ಕಾಂ ಅಧಿಕಾರಿಗಳು ಕೇವಲ ಒಂದು ವಾರದಲ್ಲಿ ರಾಜಮ್ಮನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಆದ್ರೆ ಆದಾಗಿ ಮೂರೇ ದಿನಕ್ಕೆ ಪಕ್ಕದ ಜಮೀನಿನ ಶ್ರೀನಿವಾಸ್ ಎಂಬುವವರು ದೂರು ನೀಡಿದ್ದು, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.


ಇದನ್ನೂ ಓದಿ:  Exams: 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್​ ಎಕ್ಸಾಂ ಇರುತ್ತಾ? ಸಚಿವ ಬಿ ಸಿ ನಾಗೇಶ್ ಸ್ಪಷ್ಟನೆ


ಹತ್ಯೆ ಹಿಂದೆ ಅನೈತಿಕ ಪ್ರೀತಿ..!


ವೈದ್ಯನ ಕೊಲೆ ಕೇಸ್​ ಸಂಬಂಧ ಆತನ ಮಾಜಿ ಪ್ರೇಯಸಿಯನ್ನು ಬೇಗೂರು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ವೈದ್ಯ ವಿಕಾಸ್ ಪ್ರೀತಿಸುತ್ತಿದ್ದ ಪ್ರತಿಭಾಗೆ ಮತ್ತೊಬ್ಬನ ಮೇಲೆ ಪ್ರೇಮಾಂಕುರವಾಗಿದೆ. ಇದರಿಂದ ಕೋಪಗೊಂಡ ವಿಕಾಸ್, ಪ್ರತಿಭಾಳ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದ.


ಇದರಿಂದ ಕೋಪಗೊಂಡ ಪ್ರತಿಭಾ ಮತ್ತಿತರರು ಸೇರಿ ವಿಕಾಸ್​ನನ್ನು ಮನೆಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಪರಿಣಾಮವಾಗಿ ವಿಕಾಸ್ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಸುಶೀಲ್, ಗೌತಮ್, ಪ್ರತಿಭಾ, ಸೂರ್ಯ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ

Published by:Mahmadrafik K
First published: