ಸಾಂಸಾರಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ ಉದ್ಯಮಿಯ ಮಗಳು

ದೀಕ್ಷಾರ್ಥಿ ಮೋನಿಕಾ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಓದಿ ನೌಕರಿ ಮಾಡುವ ಬದಲು ಲೋಕಕಲ್ಯಾಣಕ್ಕಾಗಿ ಜೀವನದ ಮೋಕ್ಷೆ ಪ್ರಾಪ್ತಿಗಾಗಿ ಸನ್ಯಾಸತ್ವ ಸ್ವೀಕಾರ ಮಾಡುತ್ತಿದ್ದೇನೆ ಎಂದರು.

news18-kannada
Updated:January 13, 2020, 2:41 PM IST
ಸಾಂಸಾರಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ಶ್ರೀಮಂತ ಉದ್ಯಮಿಯ ಮಗಳು
ಮೋನಿಕಾ
  • Share this:
ಯಾದಗಿರಿ(ಜ.13): ಶ್ರೀಮಂತನ ಮಗಳು, ಬಿಕಾಂ ಪದವೀಧರೆ ಸಾಂಸಾರಿಕ ಜೀವನ ತೊರೆದು ವೈರಾಗ್ಯದ ಹಾದಿ ತುಳಿದಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಾ, ಕಷ್ಟವೆಂದರೆ ಏನೆಂದು ಗೊತ್ತೇ ಇರದ ಯುವತಿ ಈಗ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಉದ್ಯಮಿಯ ಮಗಳಾಗಿರುವ ಇವರು, ಸುಖಭೋಗ ಜೀವನ ನಡೆಸುವ ಬದಲು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾಳೆ.

ಮೋನಿಕಾ 24 ವರ್ಷಗಳ ಕಾಲ ಐಷಾರಾಮಿ ಜೀವನ ನಡೆಸಿ ಈಗ ಸನ್ಯಾಸತ್ವದತ್ತ ಒಲವು ತೋರಿದ್ದಾಳೆ. ವೈಭವದ ಕುದುರೆ ಸಾರೋಟು ಮೆರವಣಿಗೆಯಲ್ಲಿ ದೀಕ್ಷಾರ್ಥಿ ಮೋನಿಕಾ   ಖುಷಿಯಿಂದ ಜನರಿಗೆ ವಸ್ತುಗಳನ್ನು ದಾನ ಮಾಡಿದರು. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ರಾಜ ವೈಭವ ನೆನಪಿಸುವಂತೆ ಯುವತಿ ಮೋನಿಕಾಳ ಸನ್ಯಾಸತ್ವ ಕಾರ್ಯಕ್ರಮ ಜರುಗಿತ್ತು.

ಕುಟುಂಬ ಸದಸ್ಯರೊಂದಿಗೆ ಮೋನಿಕಾ


ಸುರಪುರ ಪಟ್ಟಣದ ಉದ್ಯಮಿ ಭರತಕುಮಾರ ಹಾಗೂ ಗುಣವಂತಿ ಸುಪುತ್ರಿ ಮೋನಿಕಾ ಈಗ ಆಧ್ಯಾತ್ಮಿಕ ‌ಜೀವನಕ್ಕೆ ಹೆಜ್ಜೆ ಇಟ್ಟಿದ್ದಾಳೆ. ಬಿಕಾಂ ಪದವೀಧರೆ ಮೋನಿಕಾ ಉನ್ನತ ಮಟ್ಟದ ವ್ಯಾಸಂಗ ಮಾಡಿ ಐಎಎಸ್, ಐಪಿಎಸ್ ಪಾಸಾಗಿ, ಡಿಸಿ ಇಲ್ಲವೇ ಪೊಲೀಸ್ ಅಧಿಕಾರಿಯಾಗಿ ನೆಮ್ಮದಿ ಜೀವನ ನಡೆಸಬೇಕಾಗಿತ್ತು. ಮೋನಿಕಾ ಜೈನ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಚಿಕ್ಕಂದಿನಿಂದಲೇ ಹೆಚ್ಚಾಗಿ ಭಾಗಿಯಾದ ಹಿನ್ನೆಲೆ, ಧಾರ್ಮಿಕ ಒಲವು ಹೊಂದಿದ್ದರು. ಹೀಗಾಗಿ ಆಧ್ಯಾತ್ಮಿಕ ಚಿತ್ತದತ್ತ ಒಲವು ಹೊಂದಿ ಪೋಷಕರಿಗೆ ಸನ್ಯಾಸತ್ವ ಸ್ವೀಕಾರ ಮಾಡುತ್ತೇನೆಂದು ಹೇಳಿದ್ದರು.‘ಬಿಜೆಪಿ ಪ್ರತಿಭಟನೆ ಕಂಡು ಗಡಗಡ ನಡುಗುತ್ತಿದ್ದೇನೆ‘: ಡಿ.ಕೆ ಶಿವಕುಮಾರ್​​

ಇದನ್ನು ಒಪ್ಪದ  ಪೋಷಕರು ಮಗಳಿಗೆ ಬುದ್ಧಿ ಮಾತು ಹೇಳಿದರು. ಆದರೆ, ಪೋಷಕರ ಮಾತಿಗೆ ಬಗ್ಗದ ಮೋನಿಕಾ ಸನ್ಯಾಸತ್ವ ಸ್ವೀಕಾರ ಮಾಡಿ ಜೀವನದಲ್ಲಿ ಮೋಕ್ಷ ಕಾಣುತ್ತೇನೆಂದು ಪಟ್ಟು ಹಿಡಿದಿದ್ದಳು.  ಇದರಿಂದ ಮಗಳ ಆಧ್ಯಾತ್ಮಿಕ ಒಲವು ತೊರಿದ ಹಿನ್ನಲೆ ಪೋಷಕರು ಒಪ್ಪಿಗೆ ಸೂಚಿಸಿದರು. ಅದರಂತೆ 24 ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ತೊರಲು ಮುಂದಾಗಿ ಸನ್ಯಾಸತ್ವದ ಧಾರ್ಮಿಕ ವಿಧಿ ಪೂರ್ಣಗೊಳಿಸುತ್ತಿದ್ದಾಳೆ.ಈ ಬಗ್ಗೆ ದೀಕ್ಷಾರ್ಥಿ ಮೋನಿಕಾ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಓದಿ ನೌಕರಿ ಮಾಡುವ ಬದಲು ಲೋಕಕಲ್ಯಾಣಕ್ಕಾಗಿ ಜೀವನದ ಮೋಕ್ಷೆ ಪ್ರಾಪ್ತಿಗಾಗಿ ಸನ್ಯಾಸತ್ವ ಸ್ವೀಕಾರ ಮಾಡುತ್ತಿದ್ದೇನೆ ಎಂದರು.ಮೋನಿಕಾ ದೀಕ್ಷೆ ಕಾರ್ಯಕ್ರಮ ಮೂರು ದಿನಗಳ ಕಾಲ ಸುರಪುರ ಪಟ್ಟಣದಲ್ಲಿ ನಡೆಸಲಾಯಿತು. ಪೋಷಕರ ಸಮ್ಮುಖದಲ್ಲಿಯೇ ದೀಕ್ಷಾರ್ಥಿ ಮೋನಿಕಾ ಅವರನ್ನು ಮೆರವಣಿಗೆ ಮಾಡಲಾಯಿತು. ಕಬಾಡಗೇರಾದ ಮೋನಿಕಾ ನಿವಾಸದಿಂದ ಶೆಟ್ಟಿಮೋಹಲ್ಲಾದ ಜೈನ ಮಂದಿರ ವರಗೆ ಕುದಿರೆ ಸಾರೋಟ ವಾಹನದಲ್ಲಿ ರಾಜ ವೈಭವದಿಂದ ಮೆರವಣಿಗೆ ನಡೆಸಲಾಗಿದೆ. ಭಾಜಾ ಭಜಂತ್ರಿ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಸಖತ್ ಸ್ಟೆಪ್ ಹಾಕಿದರು. ದೀಕ್ಷಾರ್ಥಿ ‌ಮೋನಿಕಾ ವಿವಿಧ ವಸ್ತುಗಳನ್ನು ಜನರಿಗೆ ದಾನ ಮಾಡಿ ಖುಷಿ ಪಟ್ಟರು. ಸಹೋದರಿ ಸನ್ಯಾಸತ್ವ ದೀಕ್ಷೆ ಪಡೆಯುತ್ತಿದ್ದಕ್ಕೆ ಸಹೋದರ ಮೋಹಿತ್ ಜೈನ್ ಸಂತಷ ವ್ಯಕ್ತಪಡಿಸಿದ್ದಾರೆ.ನಮ್ಮ ಬಲಿದಾನಕ್ಕೂ ಮೊದಲು ನಿಮ್ಮ ರಾಜಕೀಯ ಭವಿಷ್ಯ ನಾಶ; ಡಿಕೆಶಿಗೆ ಕಲ್ಲಡ್ಕ ಪ್ರಭಾಕರ ಭಟ್ ಎಚ್ಚರಿಕೆ

ಮೆರವಣಿಗೆ ನಂತರ ಜೈನ ಮಂದಿರದಲ್ಲಿ ಜೈನ ಮುನಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಫೆಬ್ರವರಿ 1ರಂದು ದೀಕ್ಷಾರ್ಥಿ ಮೋನಿಕಾ ಅವರು ರಾಜಸ್ಥಾನನಲ್ಲಿ ಅಧಿಕೃತವಾಗಿ ಜೈನಮುನಿಗಳ ಸಾನಿಧ್ಯದಲ್ಲಿ ಸಾಂಸಾರಿಕ ಜೀವನಕ್ಕೆ ವೈರಾಗ್ಯರಾಗಿ ಸನ್ಯಾತ್ವದ ದೀಕ್ಷೆ ಪಡೆಯಲಿದ್ದಾರೆ.ಸನ್ಯಾತ್ವ ಸ್ವೀಕಾರ ಮಾಡಿ ಲೋಕಕಲ್ಯಾಣದ ಹೆಜ್ಜೆಗೆ ಆಧ್ಯಾತ್ಮಿಕ ಜೀವನ ನಡೆಸಲಿದ್ದಾರೆ.

(ವರದಿ: ನಾಗಪ್ಪ ಮಾಲಿಪಾಟೀಲ)

 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ