• Home
 • »
 • News
 • »
 • state
 • »
 • Bengaluru: ಗಂಡನ ಸಾವಿನಿಂದ ಮನನೊಂದು ನೇಣಿಗೆ ಶರಣಾದ 24 ವರ್ಷದ ವಿವಾಹಿತೆ

Bengaluru: ಗಂಡನ ಸಾವಿನಿಂದ ಮನನೊಂದು ನೇಣಿಗೆ ಶರಣಾದ 24 ವರ್ಷದ ವಿವಾಹಿತೆ

ಮೃತ ಸೌಂದರ್ಯ

ಮೃತ ಸೌಂದರ್ಯ

ಸೌಂದರ್ಯ ಸಾವಿಗೆ ಶರಣಾದ ಮಹಿಳೆಯಾಗಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮೃತ ಸೌಂದರ್ಯ, ಪತಿ ಮಾಗಡಿ ರಸ್ತೆಯಲ್ಲಿ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರಂತೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಗಂಡನ (Husband) ಸಾವಿನಿಂದ ಮನನೊಂದಿದ್ದ 24 ವರ್ಷದ ಮಹಿಳೆ (Women) ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನ (Bengaluru) ಕಾಡುಗೋಡಿಯ (Kadugodi) ಓಪಾರಂ ಸಮೀಪದ ರಾಮಯ್ಯ ಗಾರ್ಡನ್ ಬಳಿ ನಡೆದಿದೆ. ಸೌಂದರ್ಯ (Soundarya) ಸಾವಿಗೆ ಶರಣಾದ ಮಹಿಳೆಯಾಗಿದ್ದು, ಮಾನಸಿಕ ಖಿನ್ನತೆಯಿಂದ (Mental illness) ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮೃತ ಸೌಂದರ್ಯ, ಪತಿ ಮಾಗಡಿ ರಸ್ತೆಯಲ್ಲಿ (Magadi Road) ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರಂತೆ.


ಗಂಡನ ಸಾವಿನ ನೋವಿನಿಂದ ಹೊರಬರಲಾದರೆ ಯುವತಿ ಕೂಡ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗಂಡನ ಸಾವಿನ ಬಳಿಕ ತವರು ಮನೆಗೆ ಆಗಮಿಸಿದ್ದ ಸೌಂದರ್ಯ ಒಂದೂವರೆ ವರ್ಷದ ಮಗನೊಂದಿಗೆ ತಾಯಿಯ ಮನೆಯಲ್ಲೇ ವಾಸಿಸುತ್ತಿದ್ದರು. ಆದರೆ ಶನಿವಾರ ಮಧ್ಯಾಹ್ನ ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ಸೌಂದರ್ಯ ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: DK Shivakumar: 'ಬಸ್ ಯಾತ್ರೆಗೆ ಯಾವುದೇ ಕಂಡೀಷನ್​​ ಇಲ್ಲ' -ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್​​ ಪರೋಕ್ಷ ಟಾಂಗ್


ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಟೆಕ್ಕಿ


ಮಾನಸಿಕ ಖಿನ್ನತೆಯಿಂದ ಬಳುತ್ತಿದ್ದ 26 ವರ್ಷದ ಮಹಿಳೆಯೊಬ್ಬರು ಕಳೆದ ಎರಡು ದಿನಗಳ ಹಿಂದೆ ಬಸವೇಶ್ವರ ನಗರ ಪೊಲೀಸ್ ಠಾಣೆಯ (Basaveshwara Police Station) ವ್ಯಾಪ್ತಿಯ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಗ್ಲೋಬಲ್ ವಿಲೇಜ್‌ನ (Global Village) ಐಟಿ ಕಂಪನಿಯಲ್ಲಿ (IT companie) ಕೆಲಸ ಮಾಡುತ್ತಿದ್ದ ಸ್ವಾತಿ, ಕಳೆದ ಎರಡು ವರ್ಷಗಳ ಹಿಂದೆ ದಾಮೋದರ್ ಎಂಬಾತನನ್ನು ವಿವಾಹ (Marriage)ವಾಗಿದ್ದಳು.


ಆದರೆ ತಡರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಸ್ವಾತಿ ಮತ್ತು ದಾಮೋದರ್​ ಅವರ ಮದುವೆ ಅಂತರ್​​​ಜಾತಿ (Intercaste Marriage) ವಿವಾಹವಾಗಿದ್ದು, ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ವಿವಾಹ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.


ಮೃತ ಸ್ವಾತಿ


ಗುರುವಾರ ರಾತ್ರಿ ತಾಯಿ ಮನೆಯಲ್ಲಿ ಊಟ ಮಾಡಿಕೊಂಡು ಬಂದಿದ್ದ ಸ್ವಾತಿ, ಗಂಡನ ಮನೆಗೆ ಬಂದು ರೂಮ್​​ ತೆರಳಿದ್ದರಂತೆ, ಆದರೆ ಎಷ್ಟೋತ್ತಾದರೂ ಬಾಗಿಲು ತೆರೆಯದ ಕಾರಣ ಪತಿ ಬಾಗಿಲು ಬಡಿದಿದ್ದಾರೆ. ಆದರೂ ಪ್ರತಿಕ್ರಿಯೆ ನೀಡದ ಕಾರಣ, ಕುಟುಂಬಸ್ಥರು ರೂಮ್​ ಡೋರ್​ ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Karnataka Politics: ಸಿದ್ದರಾಮಯ್ಯ ಸ್ಪರ್ಧೆಗೆ ಹೆಚ್ಚಿದ ಒತ್ತಡ; ಬಾದಾಮಿ ಜನರಿಂದ ಹೆಲಿಕಾಪ್ಟರ್​ ಗಿಫ್ಟ್​- ಜಮೀರ್​


ಪಾದಚಾರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಯುವಕ ಸಾವು


ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಬಿಲ್ಲಿನಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ (National Highway 48) ನಡೆದಿದೆ.


ನೆಲಮಂಗಲ ಸಂಚಾರ ಪೊಲೀಸ್ ಠಾಣೆ


26 ವರ್ಷದ ಬಿಲ್ಲಿನಕೋಟೆ ನಿವಾಸಿ ಸಾಬು ಲಾಲ್ ಮೃತ ದುರ್ದೈವಿಯಾಗಿದ್ದಾರೆ. ಬೆಂಗಳೂರು ಕಡೆಯಿಂದ ತುಮಕೂರಿನ ಕಡೆಗೆ ತೆರಳುತ್ತಿದ್ದ ಕಾರು, ರಸ್ತೆ ದಾಟಲು ಮುಂದಾಗಿದ್ದ ಸಾಬು ಲಾಲ್​ಗೆ ಡಿಕ್ಕಿ ಹೊಡೆದಿತ್ತು. ಅಪಘಾತ ನಡೆದರೂ ಚಾಲಕ ಕಾರು ನಿಲ್ಲಿಸದೆ ಎಸ್ಕೇಪ್​ ಆಗಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Sumanth SN
First published: