ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟ (Siddaramaiah Cabinet) ಭರ್ತಿಯಾಗಿದ್ದು, ಮೊದಲ ಹಂತದಲ್ಲಿ ಎಂಟು ಜನರು ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡನೇ ಹಂತದಲ್ಲಿ ಇಂದು 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ (Raj Bhavan) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar chand gehlot, Governor) ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಸಂಪುಟ ಸೇರಿದ ಎಲ್ಲಾ ಶಾಸಕರಿಗೂ ಪುಷ್ಟಗುಚ್ಛ ನೀಡಿ ರಾಜ್ಯಪಾಲ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸ್ಪೀಕರ್ ಯುಟಿ ಖಾದರ್ ಶುಭಾಶಯ ಕೋರಿದರು.
ಈ ಬಾರಿ ಕಾಂಗ್ರೆಸ್ ಹಿರಿಯ ಶಾಸಕರ ಬದಲಿಗೆ ಹೊಸಬರಿಗೆ ಆದ್ಯತೆ ನೀಡಿದೆ. ಎಂಟು ಶಾಸಕರು ಮೊದಲ ಬಾರಿಗೆ ಸಂಪುಟ ಸೇರಿದರು.
ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು
ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ , ಡಾ.ಎಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ್, ಭೈರತಿ ಸುರೇಶ್, ಕೃಷ್ಣ ಬೈರೇಗೌಡ , ರಹೀಂ ಖಾನ್, ಮಧು ಬಂಗಾರಪ್ಪ , ಡಾ.ಎಂ.ಸಿ ಸುಧಾಕರ್, ಎಚ್.ಕೆ. ಪಾಟೀಲ್
ಚಲುವರಾಯಸ್ವಾಮಿ, ಕೆ.ಎನ್. ರಾಜಣ್ಣ, ಸಂತೋಷ್ ಲಾಡ್, ಡಿ.ಸುಧಾಕರ್, ಮಾಂಕಾಳ ವೈದ್ಯ , ಶಿವರಾಜ ತಂಗಡಗಿ , ಆರ್.ಬಿ ತಿಮ್ಮಾಪುರ , ದಿನೇಶ್ ಗುಂಡೂರಾವ್ , ಶರಣ ಪ್ರಕಾಶ್ ಪಾಟೀಲ್, ಭೋಸರಾಜು ಮತ್ತು ನಾಗೇಂದ್ರ
ಸಚಿವ ಸ್ಥಾನ ವಂಚಿತರ ಅಸಮಾಧಾನ
ಶಾಸಕ ತನ್ವೀರ್ ಸೇಠ್, ರಾಜಾ ವೆಂಕಟ್ಟಪ್ಪ ನಾಯಕ, ಟಿಬಿ ಜಯಚಂದ್ರ, ರುದ್ರಪ್ಪ ಲಮಾಣಿ, ಬಿಕೆ ಸಂಗಮೇಶ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತ ಹಾಕಲ್ಲ ಎಂದು ಬಿಕೆ ಸಂಗಮೇಶ್ ಬೆಂಬಲಿಗರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೊಮ್ಮಾಯಿ ಸವಾಲ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
ಪ್ರಮಾಣ ವಚನಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಚಿವ ಸ್ಥಾನ ಸಿಗದವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಜೊತೆ ಹೇಳಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್
ನಮ್ಮ ಜೊತೆ ಹೇಳಿಲ್ಲ. ಸಂಘ ಪರಿವಾರ ನಿಷೇಧ ಮಾಡುವ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಸವಾಲು ಹಾಕಿರುವ ಬಗ್ಗೆ ಮಾತನಾಡಿದ ಸಿಎಂ, ನಾವು ಎಲ್ಲಿ ನಿಷೇಧ ಮಾಡ್ತೀವಿ ಎಂದು ಹೇಳಿದ್ದೇವೆ. ಯಾವುದೇ ಸಂಘಟನೆ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ರೆ , ಸಾಮರಸ್ಯ ಕದಡುವ ಕೆಲಸ ಮಾಡಿದ್ರೆ, ಕ್ರಮ ತೆಗೆದುಕೊಳ್ತೇವೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ