ಬೆಂಗಳೂರು (ಜು.07): ಎಸಿಬಿ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ಧಾರೆ. ಮಲ್ಯ ರಸ್ತೆಯ UB ಸಿಟಿ ಎದುರಿನ ಫ್ಲ್ಯಾಟ್ (Near UB City Flat) ಮೇಲೆ ರೇಡ್ ನಡೆಸಿದ್ದಾರೆ. ನಾಲ್ಕನೇ ಪ್ಲೋರ್ನ 402ನೇ ಫ್ಲ್ಯಾಟ್ನಲ್ಲಿ ಪರಿಶೀಲನೆ ನಡೆದಿದೆ. ಮನೆ, ಟ್ರಾವೆಲ್ಸ್ ಕಚೇರಿ, ಫ್ಲ್ಯಾಟ್ನಲ್ಲಿ ಅಧಿಕಾರಿಗಳ ಶೋಧ ನಡೆಸಿದ್ದಾರೆ. ಫ್ಲ್ಯಾಟ್ನಲ್ಲಿ 24 ಜೀವಂತ ಗುಂಡು ಪತ್ತೆಯಾಗಿದೆ. ಜಮೀರ್ ಅಹಮ್ಮದ್ (Zameer Ahmed) ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ. ಹಾಗಾಗಿ ಇದೇ ಪಿಸ್ತೂಲ್ ನ ಗುಂಡುಗಳು ಇರಬಹುದು. ಆದರೆ ಇದೇ ಫ್ಲಾಟ್ ನಲ್ಲಿ 1 Empty bullet case ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ. ಪಿಸ್ತೂಲ್ ನಿಂದ ಗುಂಡು ಹಾರಿದ್ರೆ ಮಾತ್ರ ಈ Empty bullet case ಉಳಿಯುತ್ತದೆ.
ಬೇರೆಯವರ ಹೆಸರಲ್ಲಿ ದಾಖಲೆಗಳು ಪತ್ತೆ
ಯುಬಿ ಸಿಟಿ ಫ್ಲಾಟ್ ನಲ್ಲಿ ಪತ್ತೆಯಾಗಿದೆ 30ಕ್ಕೂ ಅಧಿಕ ಡಾಕ್ಯುಮೆಂಟ್ಸ್, ಬೇನಾಮಿ ದಾಖಲೆ ಪತ್ರ ಆಗಿರುವ ಸಾಧ್ಯತೆ ಇದೆ. ಯಾಕಂದ್ರೆ ಈ ಎಲ್ಲಾ ದಾಖಲೆಗಳು ಬೇರೆಯವರ ಹೆಸರಿನಲ್ಲಿ ಇವೆ. ಸೇಲ್ ಡೀಡ್, ಸೇಲ್ ಅಗ್ರಿಮೆಂಟ್ ಡಾಕ್ಯುಮೆಂಟ್ಸ್ ಪತ್ತೆಯಾಗಿದೆ. ಬೇರೆಯವರ ಹೆಸರಿನ ದಾಖಲೆಗಳು ಪತ್ತೆಯಾಗಿದೆ. ರಾಜಕಾರಣಿಗಳು ಸೇರಿ ಹಲವರ ಹೆಸರಿನ ದಾಖಲೆಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಫ್ಲ್ಯಾಟ್ನಲ್ಲಿ ಯಾಕಿಷ್ಟು ದಾಖಲೆ ಇಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಜಮೀನಿನ ದಾಖಲೆಗಳು ನಾಪತ್ತೆ
ಆನೇಕಲ್, ತುಮಕೂರು, ಹೆಬ್ಬಾಳ ಸೇರಿದಂತೆ ವಿವಿಧ ಕಡೆಗಳಲ್ಲಿ ಇರುವ ಎಕರೆಗಟ್ಟಲೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ. ಕೋಟ್ಯಾಂತರ ಮೌಲ್ಯದ ಬೇನಾಮಿ ಹೆಸರಿನಲ್ಲಿ ದಾಖಲೆಗಳು ಇರೋ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Chandrashekhar Guruji: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕಗ್ಗೊಲೆ
ಬೆಳ್ಳಂಬೆಳಗ್ಗೆ ಜಮೀರ್ಗೆ ACB ಶಾಕ್
ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ರೈಲ್ವೆ ಕಂಟೋನ್‌ಮೆಂಟ್ ಬಳಿಯಿರುವ ಮನೆ, ಕಲಾಸಿಪಾಳ್ಯದಲ್ಲಿ ಇರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್‌ಹೌಸ್ ಮತ್ತು ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಮೇಲೆ 40 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
10ಕ್ಕೂ ಹೆಚ್ಚುಅಧಿಕಾರಿಗಳ ತಂಡದಿಂದ ದಾಳಿ
ಜಾರಿ ನಿರ್ದೇಶನಾಲಯದ ನಿರ್ದೇಶನದಂತೆ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶಾಸಕ ಜಮೀರ್ ಮನೆ, ಕಚೇರಿ ಸೇರಿ 5 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಮುಂದುವರೆಸಿದ್ದಾರೆ. 5 ವಾಹನಗಳಲ್ಲಿ ಒಬ್ಬರು ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಇದನ್ನೂ ಓದಿ: CM Bommai: ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್ಗೆ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ ಕಿಡಿ
ಲಭ್ಯವಾದ ಕಡತಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಶಾಸಕ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಎದುರು ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜಾರಿ ನಿರ್ದೇಶನಾಲಯದ ವರದಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡಿದ್ದು, ಜಮೀರ್ ಖಾನ್ ಅವರಿಗೆ ಸೇರಿದ ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಸಕ ಜಮೀರ್ ನಿವಾಸಕ್ಕೆ ಎಸಿಬಿ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಳಿಯ ನಿವಾಸಕ್ಕೆ ಯಲಹಂಕ ಉಪವಿಭಾಗ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇನ್ನೊಂದೆಡೆ ಜಮೀರ್ ಕಂಟೋನ್ಮೆಂಟ್ ನಿವಾಸಕ್ಕೆ ಮತ್ತೋರ್ವ ಎಸಿಬಿ ಎಸ್ಪಿ ಯತೀಶ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ