ಬೆಳಗಾವಿಯಲ್ಲಿ ಕಾಂಗ್ರೆಸ್​​ಗೆ ಭಾರೀ ಹಿನ್ನಡೆ​​: ಗೋಕಾಕ್​​ನ 23 ತಾಲೂಕು ಸದಸ್ಯರು ಸಾಮೂಹಿಕ ರಾಜೀನಾಮೆ

ಗೋಕಾಕ್​​​​ ತಾಲೂಕು ಪಂಚಾಯಿತಿ ಸದಸ್ಯರ ರಾಜೀನಾಮೆ ಹಿಂದೆ ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್​​ ಜಾರಕಿಹೊಳಿ, ನನಗೂ ಕಾಂಗ್ರೆಸ್ಸಿನವರ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

news18-kannada
Updated:October 30, 2019, 7:24 PM IST
ಬೆಳಗಾವಿಯಲ್ಲಿ ಕಾಂಗ್ರೆಸ್​​ಗೆ ಭಾರೀ ಹಿನ್ನಡೆ​​: ಗೋಕಾಕ್​​ನ 23 ತಾಲೂಕು ಸದಸ್ಯರು ಸಾಮೂಹಿಕ ರಾಜೀನಾಮೆ
ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ
  • Share this:
ಬೆಂಗಳೂರು(ಅ.30): ಗೋಕಾಕ್​​ನ 23 ತಾಲೂಕು ಪಂಚಾಯತಿ ಸದಸ್ಯರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಶಾಕ್​​ ನೀಡಿದ್ದಾರೆ. ಮೊದಲಿಗೆ 15 ಸದಸ್ಯರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಗೋಕಾಕ್​​ನ 42 ಸದಸ್ಯರ 23 ಸದಸ್ಯರು ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​​​ಗೆ ತಾಲೂಕು ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಮಾಜಿ ಸಚಿವ ಸತೀಶ್​ ಜಾರಕಿಹೊಳಿಗೆ ಭಾರೀ ಹಿನ್ನಡೆಯಾಗಿದೆ.

ಕಾಂಗ್ರೆಸ್​​ನ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು 23 ತಾಲೂಕು ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಗೋಕಾಕ್​​​ ಪಂಚಾಯಿತಿ ಅಧಿಕಾರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಗೋಕಾಕ್​​​​ ತಾಲೂಕು ಪಂಚಾಯಿತಿ ಸದಸ್ಯರ ರಾಜೀನಾಮೆ ಹಿಂದೆ ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್​​ ಜಾರಕಿಹೊಳಿ, ನನಗೂ ಕಾಂಗ್ರೆಸ್ಸಿನವರ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಮೇಶ್​​ ಜಾರಕಿಹೊಳಿ ನೇತೃತ್ವದಲ್ಲಿ 17 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಬೀಳಿಸಿದ್ದರು. ಅಂದಿನಿಂದಲೂ ಸಚಿವ ಸತೀಶ್​​ ಜಾರಕಿಹೊಳಿ ಮತ್ತು ಶಾಸಕ ರಮೇಶ್​​ ಜಾರಕಿಹೊಳಿ ಸಹೋದರರ ನಡುವೆ ಸತತ ವಾಕ್ಸಮರ ಮುಂದುವರಿದಿದೆ. ಇಬ್ಬರು ಪರಸ್ಪರ ಏಕವಚನದಲ್ಲೇ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ.

ಇದನ್ನೂ ಓದಿ: ನ.1ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ; ಭದ್ರತೆ, ರಕ್ಷಣೆ ಒದಗಿಸಲು ಹೈಕೋರ್ಟ್​ ನಿರ್ದೇಶನ

ಮೈತ್ರಿ ಸರ್ಕಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದ ರಮೇಶ್​ ಜಾರಕಿಹೊಳಿಯನ್ನು ಈಗಾಗಲೇ ಅನರ್ಹ ಮಾಡಲಾಗಿದೆ. ಕಾಂಗ್ರೆಸ್​ನ ಹಿಂದಿನ ಸ್ಪೀಕರ್​​ ರಮೇಶ್​ ಕುಮಾರ್​​ ಕೈಗೊಂಡ ನಿರ್ಧಾರದಿಂದ ರಮೇಶ್​​ ಜಾರಕಿಹೊಳಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಇನ್ನು ಇದರಿಂದ ಬೇಸರಗೊಂಡ ರಮೇಶ್, ಬೆಳಗಾವಿಯಲ್ಲೀಗ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಈಗಾಗಲೇ ರಮೇಶ ಜಾರಕಿಹೊಳಿ ಪರ್ಯಾಯವಾಗಿ ಮತ್ತೊಬ್ಬ ಸಹೋದರನನ್ನು ಬೆಳೆಸಲು ಸತೀಶ ಜಾರಕಿಹೊಳಿಯೂ ಮುಂದಾಗಿದ್ದಾರೆ.

ಹಿಂದಿನಿಂದಲೂ ಗೋಕಾಕ್ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆಗೆ ಲಖನ್ ಜಾರಕಿಹೊಳಿ ಗುರುತಿಸಿಕೊಂಡಿದ್ದರು. ಲಖನ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಅನೇಕ ಬಾರಿ ಕೇಳಿ ಬಂದಿದ್ದವು. ಆದರೇ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ನಿಷ್ಠರಾಗಿದ್ದರು. ಕಾಂಗ್ರೆಸ್​ವೊಂದಿಗೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿಗೆ ಪರ್ಯಾಯವಾಗಿ ಲಖಲ್​​ ಜಾರಹೊಳಿ ಬೆಳೆಸುವಲ್ಲಿ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ನಾಳೆ ಸರ್ದಾರ್ ಪಟೇಲ್‌ 144ನೇ ಜನ್ಮದಿನ: ‘ಏಕತಾ ದಿವಸ್‘​​ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಭಾಗಿಈ ಬೆನ್ನಲ್ಲೀಗ ಸ್ಥಳೀಯ ಕಾಂಗ್ರೆಸ್ಸಿಗರನ್ನು ರಮೇಶ್​​ ಜಾರಕಿಹೊಳಿ ಸೆಳೆಯುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಉಪಚುನಾವಣೆ ಆಗಮಿಸಲಿದೆ. ಈ ಚುನಾವಣೆ ಗೆಲ್ಲಲು ಪಣತೊಟ್ಟಿರುವ ರಮೇಶ್​​, ಕಾಂಗ್ರೆಸ್​​ಗೆ ಎದುರೇಟು ನೀಡುತ್ತಿದ್ದಾರೆ. ಹಾಗಾಗಿ ಗೋಕಾಕ್​​ ಕಾಂಗ್ರೆಸ್​​ ತಾಲೂಕು ಪಂಚಾಯಿತಿ ಸದಸ್ಯರ ರಾಜೀನಾಮೆಗೆ ರಮೇಶ್​ ಜಾರಿಕಿಹೊಳಿ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
---------
First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ