• Home
  • »
  • News
  • »
  • state
  • »
  • Bengaluru: 11 ಲಕ್ಷದ ಕಾರ್ ರಿಪೇರಿಗೆ 22 ಲಕ್ಷ, ಬಿಲ್ ನೋಡಿ ಬೆಂಗ್ಳೂರು ಟೆಕ್ಕಿ ಶಾಕ್!

Bengaluru: 11 ಲಕ್ಷದ ಕಾರ್ ರಿಪೇರಿಗೆ 22 ಲಕ್ಷ, ಬಿಲ್ ನೋಡಿ ಬೆಂಗ್ಳೂರು ಟೆಕ್ಕಿ ಶಾಕ್!

ಮುಳುಗಡೆಯಾದ ಕಾರ್

ಮುಳುಗಡೆಯಾದ ಕಾರ್

22 ಲಕ್ಷ ರೂಪಾಯಿ ಬಿಲ್ ವಿಷಯ ಕೇಳುತ್ತಿದ್ದಂತೆ ಶಾಕ್ ಆದ ಅನಿರುದ್ಧ ಗಣೇಶ್, ಎಕೊ (ACKO) ವಿಮಾ ಕಂಪನಿಯನ್ನು ಸಂಪರ್ಕಿಸಿದ್ದಾರೆ. ವಿಮಾ ಕಂಪನಿ ಸಿಬ್ಬಂದಿ ಸರ್ವಿಸ್ ಸೆಂಟರ್​​ನಿಂದ ಕಾರ್ ಪಡೆದುಕೊಂಡು ನಷ್ಟವನ್ನು ಲೆಕ್ಕ ಹಾಕಲಾಗುವುದು ಎಂದು ಹೇಳಿದ್ದಾರೆ.

  • Share this:

ಈ ಬಾರಿ ಬೆಂಗಳೂರು ಮಳೆಗೆ (Bengaluru Flood) ಮನೆ ಮುಂದೆ, ಪಾರ್ಕಿಂಗ್ ಲಾಟ್​ನಲ್ಲಿ ನಿಲ್ಲಿಸಿ ಕಾರುಗಳು ಜಲಾವೃತಗೊಂಡಿದ್ದವು (Car Sink). ಆದ್ರೆ ಈಗ ಕಾರ್ ಮಾಲೀಕರು ಖರೀದಿಸಿದ ಬೆಲೆಗಿಂತ (Purchase Value) ಅಧಿಕ ಹಣವನ್ನು ರಿಪೇರಿಗೆ (Repair Expenses) ಪಾವತಿಸುವಂತಾಗಿದೆ. ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಅಂತಹುವುದೇ ಒಂದು ಪ್ರಕರಣ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 11 ಲಕ್ಷ ರೂ. ವೋಕ್ಸ್‌ವ್ಯಾಗನ್ (Volkswagen Polo) ಕಂಪನಿ ಪೋಲೋ ಹ್ಯಾಚ್​ಬ್ಯಾಕ್ (Polo hatchback)​ ರಿಪೇರಿಗೆ 22 ಲಕ್ಷ ರೂಪಾಯಿಯ ಬಿಲ್ ನೀಡಿದೆ. ಅನಿರುದ್ಧ್ ಗಣೇಶ್ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದು, ಅಮೆಜಾನ್ ಕಂಪನಿಯ (Amazon Company Employee) ಉದ್ಯೋಗಿಯಾಗಿದ್ದಾರೆ. 22 ಲಕ್ಷ ರೂಪಾಯಿ ಬಿಲ್ ಫೋಟೋ ಸಮೇತ ಎಲ್ಲಾ ಮಾಹಿತಿಯನ್ನು ಲಿಂಕ್ಡ್​ ಇನ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಮಳೆಗೆ ಅನಿರುದ್ಧ್ ಅವರ ಕಾರ್ ಹಾನಿಯಾಗಿತ್ತು. ವೈಟ್​ಫೀಲ್ಡ್​​​ ನಲ್ಲಿರುವ ವೋಕ್ಸ್‌ವ್ಯಾಗನ್ ಸರ್ವಿಸ್​ ಸೆಂಟರ್​ಗೆ ಕಾರ್ ಶಿಫ್ಟ್ ಮಾಡಿದ್ದರು. 20 ದಿನಗಳ ನಂತರ ಸರ್ವಿಸ್ ಕೇಂದ್ರದಿಂದ ಅನಿರುದ್ಧ್ ಗಣೇಶ್ ಅವರಿಗೆ ಕರೆ ಬಂದಿದೆ. ಕರೆ ಮಾಡಿದ ಸಿಬ್ಬಂದಿ 22 ಲಕ್ಷ ರೂಪಾಯಿ ಬಿಲ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.


22 ಲಕ್ಷದ ಬಿಲ್ ಕೇಳುತ್ತಿದ್ದಂತೆ ಶಾಕ್


22 ಲಕ್ಷ ರೂಪಾಯಿ ಬಿಲ್ ವಿಷಯ ಕೇಳುತ್ತಿದ್ದಂತೆ ಶಾಕ್ ಆದ ಅನಿರುದ್ಧ ಗಣೇಶ್, ಎಕೊ (ACKO) ವಿಮಾ ಕಂಪನಿಯನ್ನು ಸಂಪರ್ಕಿಸಿದ್ದಾರೆ. ವಿಮಾ ಕಂಪನಿ ಸಿಬ್ಬಂದಿ ಸರ್ವಿಸ್ ಸೆಂಟರ್​​ನಿಂದ ಕಾರ್ ಪಡೆದುಕೊಂಡು ನಷ್ಟವನ್ನು ಲೆಕ್ಕ ಹಾಕಲಾಗುವುದು ಎಂದು ಹೇಳಿದ್ದಾರೆ.


22 lakh rupees estimate by Volkswagen service centre to repair 11 lakh Polo
ಮುಳುಗಡೆಯಾದ ಕಾರ್


ಕೊನೆಗೆ 5 ಸಾವಿರ ಪಾವತಿ


ಅನಿರುದ್ಧ್ ಗಣೇಶ್ ತಮ್ಮ ಕಾರ್ ದಾಖಲೆಗಳನ್ನು ಸಂಗ್ರಹಿಸಲು ಹೋದಾಗ ಶೋರೂಂ ಸಿಬ್ಬಂದಿ 44,840 ರೂ. ಬಿಲ್ ನೀಡಿದೆ.  ನಂತರ ಫೋಕ್ಸ್‌ವ್ಯಾಗನ್ ಸಿಬ್ಬಂದಿ ಸಂಪರ್ಕಿಸಿದಾಗ 48 ಗಂಟೆಯಲ್ಲಿ ಸಮಸ್ಯೆ ಬಗೆಹರಿಸೋದಾಗಿ ಹೇಳಿದ್ದಾರೆ. ಎರಡು ದಿನಗಳ ಬಳಿಕ ಕರೆ ಮಾಡಿದ ಫೋಕ್ಸ್ ವ್ಯಾಗನ್ ಕಸ್ಟಮರ್ ಕೇರ್ ಸಿಬ್ಬಂದಿ ನೀವು ಕೇವಲ 5 ಸಾವಿರ ರೂಪಾಯಿ ಪಾವತಿಸುವಂತೆ ಹೇಳಿದ್ದಾರೆ.


ಇದನ್ನೂ ಓದಿ: Bengaluru: ಗೊಂಬೆಯಲ್ಲಿ ಮಡಿಕೇರಿ, ಉತ್ತರ ಕನ್ನಡದ ಭೂಕುಸಿತ!


ಗರಿಷ್ಠ 5 ಸಾವಿರ ರೂ ಮಾತ್ರ ಪಾವತಿ


ಸೆಪ್ಟೆಂಬರ್ 25ರಂದು ಅನಿರುದ್ಧ್ ಅವರಿಗೆ ಕರೆ ಮಾಡಿದ ಫೋಕ್ಸ್‌ವ್ಯಾಗನ್ ಇಂಡಿಯಾ ಸಿಬ್ಬಂದಿ, ನಿಮ್ಮ ವಾಹನ ಹಾನಿಯ ಎಷ್ಟೇ ಆಗಿದ್ರೂ ಗ್ರಾಹಕರು ಗರಿಷ್ಠ 5 ಸಾವಿರ ರೂಪಾಯಿವರಗೆ ಮಾತ್ರ ಪಾವತಿಸಬೇಕು ಎಂದು ಹೇಳಿದ್ದಾರೆ. ವಿಮಾ ಕಾನೂನುಗಳ ಪ್ರಕಾರ, ಕಾರ್ ಸೇವಾ ಕೇಂದ್ರಗಳು ವಿಮಾ ಕಂಪನಿಗೆ ಅಂದಾಜು ನಷ್ಟದ ದಾಖಲೆಯನ್ನು ಒದಗಿಸಬೇಕು. ಅದು ಮುಂದಿನ ಹಕ್ಕುಗಾಗಿ ಕಾನೂನು ದಾಖಲೆಯಾಗುತ್ತದೆ.


22 lakh rupees estimate by Volkswagen service centre to repair 11 lakh Polo
ಬಿಲ್


11 ಲಕ್ಷ ಮೌಲ್ಯದ ವಾಹನಕ್ಕೆ 22 ಲಕ್ಷ ರೂ. ಬಿಲ್


ಇನ್ನೂ ಕಾರ್ ರಿಪೇರಿ ಸಂದರ್ಭದಲ್ಲಿ ವೆಚ್ಚವು ವಾಹನದ ಘೋಷಿತ ಮೌಲ್ಯಕ್ಕಿಂತ ಹೆಚ್ಚಾದ್ರೆ , ಅದನ್ನು ಒಟ್ಟು ನಷ್ಟ ಎಂದು ಅಂದಾಜಿಸಲಾಗುತ್ತದೆ. ನಂತರ ಮಾಲೀಕರಿಗೆ ಸೆಟಲ್ಮೆಂಟ್ ಮೊತ್ತವನ್ನು ಪಾವತಿಸಲಾಗುತ್ತದೆ. ಇನ್ನು ಅನಿರುದ್ಧ್ ಅವರ ಪ್ರಕರಣದಲ್ಲಿ 11 ಲಕ್ಷ ಮೌಲ್ಯದ ವಾಹನಕ್ಕೆ 22 ಲಕ್ಷ ರೂ. ಬಿಲ್ ಮಾಡಿದ್ದಾರೆ. ಇಲ್ಲಿ ಯಾವುದೇ ದಾಖಲೆ ನೀಡಿಲ್ಲ. ಇಲ್ಲಿ ಹಣ ದುರಪಯೋಗವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.


ಇದನ್ನೂ ಓದಿ:  Koppal: ನಿಮ್ಮ ತಂದೆಯ ಸಾಲ ತೀರಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡು; ಬಾಲಕನ ಬಟ್ಟೆ ಬಿಚ್ಚಿಸಿ ವಿಡಿಯೋ!


ಶೂನ್ಯ ಸವಕಳಿಯ ವಿಮೆ


ಸಾಮಾನ್ಯವಾಗಿ ಕಾರ್ಮಿಕ ಸೇವಾ ಶುಲ್ಕ, ದುರಸ್ತಿ ವೆಚ್ಚಗಳು ಹೆಚ್ಚಿರುತ್ತವೆ. ಆದ್ದರಿಂದ ಗ್ರಾಹಕರು ಈ ವೆಚ್ಚಗಳಿಂದ ಪಾರಾಗಲು ಹಾನಿಯೂ ಸೇರಿದಂತೆ ವಾಹನದ ಶೂನ್ಯ ಸವಕಳಿಯ ವಿಮೆಯನ್ನು (zero-depreciation insurance) ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಎಲ್ಲಾ ಹಾನಿಯನ್ನು ಒಳಗೊಂಡಿರುತ್ತದೆ.

Published by:Mahmadrafik K
First published: