Hubballli: ಅಪ್ಕೊಂಡು ಫೋಟೋ ಕ್ಲಿಕ್ ಮಾಡ್ಕೊಂಡ, ಬೆದರಿಕೆ ಹಾಕಿ ಐದಾರು ಸಲ ರೇಪ್ ಮಾಡಿದ್ದ ಯುವಕ ಅರೆಸ್ಟ್

ಈ ಬಗ್ಗೆ ಯಾರಿಗಾದರೂ ಹೇಳಿದರೆ ಹಗ್ ಮಾಡಿದ ಫೋಟೋ ಎಲ್ಲರಿಗೂ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಆಕೆಯ ಪಾಲಕರಿಗೂ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಎನ್ನಲಾಗಿದೆ.

ಗೋಕುಲ್ ರೋಡ್ ಪೊಲೀಸ್ ಠಾಣೆ

ಗೋಕುಲ್ ರೋಡ್ ಪೊಲೀಸ್ ಠಾಣೆ

  • Share this:
ಹುಬ್ಬಳ್ಳಿ: ಪ್ರೀತಿಯ (Love) ನಾಟಕವಾಡಿ ಅಪ್ರಾಪ್ತೆಗೆ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ಬೆಳಕಿಗೆ ಬಂದಿದೆ. ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ (Rape Allegation) ಮೇಲೆ ಕಾರವಾರ ಮೂಲದ 21 ವರ್ಷದ ಯುವಕನನ್ನು ಹುಬ್ಬಳ್ಳಿ ಪೊಲೀಸರು (Hubballi Police) ಬಂಧಿಸಿದ್ದಾರೆ. ಆರೋಪಿ ವಿರುದ್ಧ ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ (Gokul Road Police Station) ಪ್ರಕರಣ ದಾಖಲಾಗಿತ್ತು. 17 ವರ್ಷದ ಅಪ್ರಾಪ್ತೆ ಜೊತೆ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿದ್ದ. ಪುಸಲಾಯಿಸಿ ಆಕೆ ಜತೆಗೆ ಆಲಿಂಗನದ ಫೋಟೋ (Photo) ತೆಗೆದುಕೊಂಡಿದ್ದ. ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ (Photo Blackmail) ಅತ್ಯಾಚಾರ ಎಸಗಿದ್ದ. 2021ರ ನವೆಂಬರ್‌ನಿಂದ 2022ರ ಫೆಬ್ರವರಿ ನಡುವೆ ಅಕ್ಷಯ ಪಾರ್ಕ್ ಬಳಿಯ ಲಾಡ್ಜ್​​ವೊಂದಕ್ಕೆ ಐದಾರು ಸಲ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ.

ಈ ಬಗ್ಗೆ ಯಾರಿಗಾದರೂ ಹೇಳಿದರೆ ಹಗ್ ಮಾಡಿದ ಫೋಟೋ ಎಲ್ಲರಿಗೂ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಆಕೆಯ ಪಾಲಕರಿಗೂ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಯುವತಿಯ ತಾಯಿ ಸಲ್ಲಿಸಿದ ದೂರನ್ನು ಆಧರಿಸಿ ಇನ್‌ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದ ತಂಡ ಕಾರವಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:  Karnataka BJP: ನಳಿನ್ ಕುಮಾರ್ ಕಟೀಲ್ ಬದಲಾವಣೆ ಬಹುತೇಕ ಫಿಕ್ಸ್; ಈ ಐವರಲ್ಲಿ ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ?

ರೇಡಿಯೇಟರ್ ಬ್ಲಾಸ್ಟ್ ಆಗಿ ವಿದ್ಯಾರ್ಥಿಗಳಿಗೆ ಗಾಯ

ಸ್ಕೂಲ್ ವ್ಯಾನ್‌‌ನ ರೇಡಿಯಟರ್ ಬ್ಲಾಸ್ಟ್ ಆಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾದ ಘಟನೆ ಹುಬ್ಬಳ್ಳಿಯ ಗೋಕುಲ ರೋಡ್‌ನ ಸೆಂಟ್ರಲ್ ಎಕೈಸ್ ಕಾಲೋನಿಯಲ್ಲಿ ನಡೆದಿದೆ.  ಗಾಯಗೊಂಡ ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 21 year old youth arrest in minor rape case saklb mrq
ಸಾಂದರ್ಭಿಕ ಚಿತ್ರ


ಚೇತನಾ ಪಬ್ಲಿಕ್ ಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.  ಶಾಲೆಯಿಂದ ಮನೆಗೆ ವಾಪಸ್ ಬಿಡುವಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಗೋಕುಲ ರೋಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನ್ಯಾಯ ಕೊಡಿಸುವಂತೆ ಗೃಹಿಣಿ ಕಣ್ಣೀರು

ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮಾನಸಿಕ ಖಿನ್ನತೆಗೆ ಒಳಗಾದ ಪತಿ, ಹೀಗಿರುವಾಗ ಮನೆ ಖಾಲಿ ಮಾಡುವಂತೆ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದಾರೆ ಎಂದು ಗೃಹಿಣಿಯೊಬ್ಬರು ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಪ್ಯಾಕ್ಟರಿ ಬಳಿಯ ನಿವಾಸಿ ವಿದ್ಯಾರಾಣಿ ಹಬೀಬ್ ಎಂಬ ಮಹಿಳೆ ಆರೋಪಿಸಿದ್ದಾಳೆ. ವಿದ್ಯಾರಾಣಿ ಹಬೀಬ್ ಗೆ ಇಬ್ಬರು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ. ಸಹೋದರರ ಕಿರುಕುಳದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ವಿದ್ಯಾರಾಣಿ ಆರೋಪಿಸಿದ್ದಾಳೆ. ಗಂಡನಿಗೆ ಕೆಲಸವೂ ಇಲ್ಲ, ಇರೋ ಮನೆಯನ್ನೂ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ.

21 year old youth arrest in minor rape case saklb mrq
ಗೋಕುಲ್ ರೋಡ್ ಪೊಲೀಸ್ ಠಾಣೆ


ಮನೆ ಬಿಟ್ಟು ಹೋಗುವಂತೆ ವಿದ್ಯಾರಾಣಿಗೆ ಕುಟುಂಬದ ಸದಸ್ಯರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಇಲಾಖೆಯಿಂದ ಮನೆ ಖಾಲಿ ಮಾಡುವಂತೆ ನೋಟೀಸ್ ಜಾರಿಯಾಗಿದೆ ಎನ್ನಲಾಗಿದೆ.

ಕಣ್ಣೀರು ಹಾಕುತ್ತಿರುವ ವಿದ್ಯಾರಾಣಿ ಕುಟುಂಬ

ಇದರಿಂದಾಗಿ ಬೀದಿ ಪಾಲಾಗೋ ಆತಂಕದಲ್ಲಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೂ ವಿದ್ಯಾರಾಣಿ ಮನವಿ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ನನಗೆ ನ್ಯಾಯ ಕೊಡಿ ಎಂದು ವಿದ್ಯಾರಾಣಿ ಕಣ್ಣೀರು ಹಾಕಿದ್ದು, ನ್ಯಾಯ ಸಿಗದೇ ಇದ್ದಲ್ಲಿ ಇಬ್ಬರು ಮಕ್ಕಳಿಗೆ ವಿಷ ಇಟ್ಟು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಎಚ್ಚರಿಸಿದ್ದಾರೆ.
Published by:Mahmadrafik K
First published: