ಹಾಸನ: ಅಣ್ಣ ಮೃತಪಟ್ಟ (Brothers) ಒಂದು ವರ್ಷದ ನಂತರ ಅದೇ ದಿನವೇ ತಮ್ಮ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನದಲ್ಲಿ (Hassan) ನಡೆದಿದೆ. ನೆಟ್ಟೆಕೆರೆ ಗ್ರಾಮದ ಪುಟ್ಟಸ್ವಾಮಿ-ಸರೋಜಾ ದಂಪತಿಗೆ ಶ್ರೀಧರ್ (22), ದಿಲೀಪ್ (21) ಎಂಬ ಇಬ್ಬರು ಗಂಡು ಮಕ್ಕಳಿದ್ದರು. 2022ರ ಜನವರಿ 9ರಂದು ಹಿರಿಯ ಮಗ ಶ್ರೀಧರ್ ಕೊನೆಯುಸಿರೆಳೆದಿದ್ದರು. ಶ್ರೀಧರ್ ಸಹೋದರ ದಿಲೀಪ್ ಜನವರಿ 4ರಂದು ಬೈಕ್ ಅಪಘಾತದಲ್ಲಿ (Bike Accident) ಗಾಯಗೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿಲೀಪ್ ಆಸ್ಪತ್ರೆಯಲ್ಲಿ (Hospital) ಜನವರಿ 9ರಂದೇ ಸಾವನ್ನಪ್ಪಿದ್ದಾನೆ.
2022ರ ಜನವರಿ 9 ರಂದು ಅಣ್ಣ ಶ್ರೀಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಘಟನೆ ಒಂದು ವರ್ಷದ ನಂತರ ಅಂದರೇ ಜನವರಿ 9ರಂದೇ ಅಪಘಾತದಲ್ಲಿ ಶ್ರೀಧರ್ ತಮ್ಮ ದಿಲೀಪ್ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ.
ಇದನ್ನೂ ಓದಿ: Crime News: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ಛಿದ್ರ ಛಿದ್ರವಾಯ್ತು ದೇಹ
ಆಂಧ್ರ ಪ್ರದೇಶದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ದಿಲೀಪ್, ಅಣ್ಣನ ವರ್ಷದ ಆರಾಧನೆಗೆ ಅಂತ ಜನವರಿ 4 ರಂದು ಹುಟ್ಟೂರಿಗೆ ಆಗಮಿಸುತ್ತಿದ್ದ. ಆದರೆ ಈ ವೇಳೆ ಬೈಕ್ ಚಾಲನೆ ಮಾಡಿಕೊಂಡು ಬರ್ತಿದ್ದ ಸಮಯದಲ್ಲಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ.
ತೀವ್ರವಾಗಿ ಗಾಯಗೊಂಡಿದ್ದ ದಿಲೀಪ್ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಜನವರಿ 9ರಂದು ಚಿಕಿತ್ಸೆ ಫಲಕಾರಿಯಾಗದೆ ದಿಲೀಪ್ ಕೊನೆಯುಸಿಳೆದಿದ್ದಾರೆ. ದಿಲೀಪ್ ಬೈಕ್ ಅಪಘಾತದ ವಿಡಿಯೋ ಸಿಸಿಟಿಯಲ್ಲಿ ಸೆರೆಯಾಗಿದ್ದು, ಬೇಲೂರು ತಾಲ್ಲೂಕಿನ ರಾಯಪುರ ಬಳಿ ಬೈಕ್ ಅಪಘಾತ ಸಂಭವಿಸಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸ್ ಅಂತ ಮಸಾಜ್ ಮಾಡಿಸಿಕೊಂಡು ಸುಲಿಗೆ
ಬೆಂಗಳೂರಲ್ಲಿ ಪೊಲೀಸರ ಹೆಸರಿನಲ್ಲಿ ಸಾಮಾನ್ಯ ಜನರ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊನ್ನೆ ಕೊಡಿಗೇಹಳ್ಳಿ ಮಹಿಳಾ ಪೊಲೀಸ್ ಎಂದು ಮಹಿಳೆಯೊಬ್ಬಳು ಬಜ್ಜಿ ಬೋಂಡಾ ತಿಂದಿದ್ಲು. ಈಗ ಸಿಐಡಿ ಅಧಿಕಾರಿ ಅಂತ ಪ್ರದೀಪ್ ಎಂಬ ವ್ಯಕ್ತಿಯೋರ್ವ ಮಸಾಜ್ ಮಾಡಿಸಿ ದುಡ್ಡು ಕಿತ್ತುಕೊಂಡಿದ್ದಾನೆ.
ಆಯುರ್ ವೆಲ್ನೆಸ್ ಸ್ಪಾ ಆ್ಯಂಡ್ ಕ್ಲಿನಿಕ್ಗೆ ಬಂದ ಆರೋಪಿ, ಕೆಳಗಡೆ ಪೊಲೀಸ್ ವಾಹನ ನಿಂತಿದೆ. ಠಾಣೆಗೆ ಎಳೆದೊಯ್ದು ಯೂಟ್ಯೂಬ್ನಲ್ಲಿ ಅಕ್ರಮ ಬಯಲು ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಮಸಾಜ್ ಮಾಡಿಸಿಕೊಡ ಬಳಿಕ ನಕಲಿ ಐಡಿ ಕಾರ್ಡ್ ತೋರಿಸಿ 30 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾನೆ. ಸದ್ಯ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದಕ್ಕೂ ಮುನ್ನ ಶೇಕ್ ಸಲಾಂ ಬಳಿ ಬಂದ ಅಪರಿಚಿತ ಮಹಿಳೆಯೋರ್ವಳು, ತಾನು ಪೊಲೀಸ್ ಅಧಿಕಾರಿ ಎಂದು ಹೇಳಿ ಪುಕ್ಕಟ್ಟೆಯಾಗಿ ಬಜ್ಜಿ, ಬೋಂಡಾ ಪಡೆದುಕೊಂಡಿದ್ದ ಘಟನೆ ಬ್ಯಾಟರಾಯನಪುರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ನಡೆದಿತ್ತು. ಮಹಿಳೆ ಮೇಲೆ ಅನುಮಾನ ಬಂದ ಹಿನ್ನೆಲೆ ಶೇಕ್ ಸಲಾಂ ದೂರು ದಾಖಲಿಸಿದ್ದರು.
ವ್ಯಾಪಾರ ಮಾಡುತ್ತಿರುವಾಗ ಶೇಕ್ ಸಲಾಂ ಬಳಿ ಬಂದ, ಮಹಿಳೆಯೊಬ್ಬಳು ನಾನು ಕೊಡಿಗೇಹಳ್ಳಿ ಠಾಣೆಯಲ್ಲಿ ಪೊಲೀಸ್ ಇದ್ದೀನಿ. ಇಲ್ಲಿ ಅಂಗಡಿ ಹಾಕಿಕೊಳ್ಳಲು ನಾನು ಬಂದಾಗಲೆಲ್ಲಾ, ಕೇಳಿದಷ್ಟು ಬಜ್ಜಿ, ಬೋಂಡಾ ನೀಡಬೇಕು ಎಂದು ಹೇಳಿದ್ದರಂತೆ. ನಿಜ ಪೊಲೀಸರಿಗೆ ಇರ್ಬೇಕು ಅಂತ ಶೇಖ್ ಸಲಾಂ, ತನ್ನ ವ್ಯಾಪಾರಕ್ಕೆ ಎಲ್ಲಿ ತೊಂದರೆ ಆಗುತ್ತೆ ಎಂದು ಹೆದರಿ ಬಂದಾಗಲೆಲ್ಲಾ ಬಜ್ಜಿ ಬೋಂಡಾ ನೀಡಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ