ಬೆಂಗಳೂರಿನಲ್ಲಿವೆ 209 ಡೇಂಜರಸ್​ ಸ್ಪಾಟ್​​ಗಳು; ಕಣ್ಮುಚ್ಚಿ ಕುಳಿತಿದೆಯಾ ಬಿಬಿಎಂಪಿ?

ವಲಯವಾರು ಅಪಾಯಗ್ರಸ್ಥ ಸ್ಥಳಗಳ ಮಾಹಿತಿ ನೋಡೋದಾದ್ರೆ, ಹೆಚ್ಚು ಅಪಾಯಗ್ರಸ್ಥ ಸ್ಥಳಗಳಿರುವುದೇ ಪಶ್ಚಿಮ ವಲಯದಲ್ಲಿಯಂತೆ. 38 ಅಪಾಯಗ್ರಸ್ಥ ಸ್ಥಳಗಳು ಈ  ವಲಯದಲ್ಲಿದೆಯಂತೆ. ಹಾಗೆಯೇ ಆರ್ ಆರ್ ನಗರದಲ್ಲಿ 37 ಅಪಾಯಗ್ರಸ್ಥ ಸ್ಥಳಗಳಿದ್ರೆ ನಂತ್ರದ ಸ್ಥಾನದಲ್ಲಿ ಮಹಾದೇವಪುರ ವಲಯವಿದೆ.ಈ ವಲಯದಲ್ಲಿರೋ ಅಪಾಯಗ್ರಸ್ಥ ಸ್ಥಳಗಳು ಬರೋಬ್ಬರಿ 32.

news18-kannada
Updated:June 5, 2020, 12:10 PM IST
ಬೆಂಗಳೂರಿನಲ್ಲಿವೆ 209 ಡೇಂಜರಸ್​ ಸ್ಪಾಟ್​​ಗಳು; ಕಣ್ಮುಚ್ಚಿ ಕುಳಿತಿದೆಯಾ ಬಿಬಿಎಂಪಿ?
ಬೆಂಗಳೂರು ಮಹಾನಗರ ಪಾಲಿಕೆ.
  • Share this:
ಬೆಂಗಳೂರು(ಜೂ.05): ಮಳೆಗಾಲಕ್ಕೆ ಸನ್ನದ್ಧವಾಗಿದೆಯೇ ಬಿಬಿಎಂಪಿ. ಮಳೆಗಾಲ ಎದುರಿಸುವ ಸಮರ್ಪಕ ವ್ಯವಸ್ಥೆಯಿದೆಯೇ ಬಿಬಿಎಂಪಿಯಲ್ಲಿ. ಈ ಬಾರಿಯೂ ಬಿಬಿಎಂಪಿದು "ಯುದ್ಧಕಾಲೇ ಶಸ್ತ್ರಭ್ಯಾಸ"ನಾ? ದುರಂತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವ ಮನಸ್ಥಿತಿಯಲ್ಲಿದೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆ. ಇಂತದೊಂದಿಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಮಳೆಗಾಲದ ಸನ್ನಿಹಿತದಲ್ಲಿ ಬಿಬಿಎಂಪಿಯ ನಿರುತ್ಸಾಹ-ನಿರ್ಲಕ್ಷ್ಯ.

ಮಳೆಗಾಲದಲ್ಲಿ ಎದುರಾಗಬಹುದಾದ ವಿಪತ್ತನ್ನು ಕಳೆದ ವಾರ ಸುರಿದ ಮಳೆ ಪರಿಚಯಿಸಿಕೊಟ್ಟಿದ್ದರೂ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ ಎಮ್ಮೆ ಚರ್ಮದ ಆಡಳಿತ ವ್ಯವಸ್ಥೆ. ಬಿರುಸು ಮಳೆ  ಬಿಡಿ, ಸಾಧಾರಣ ಮಳೆಗೂ ಬೆಂಗಳೂರು ಅದುರಿ ಹೋಗುತ್ತದೆ, ತಲ್ಲಣಿಸಿ ಬಿಡುತ್ತದೆ. ಇದಕ್ಕೆಲ್ಲಾ ಕಾರಣ, ಮಳೆಗಾಲವನ್ನು ಎದುರಿಸಲು ಬೇಕಿರುವ ಪೂರ್ವನಿಯೋಜಿತ ಕಾರ್ಯಯೋಜನೆಯನ್ನು ಅನುಷ್ಟಾನಕ್ಕೆ ತರುವಲ್ಲಿನ ಆಡಳಿತ ವ್ಯವಸ್ಥೆಯ ವೈಫಲ್ಯ. ಅದರ ಜತೆಗೆ  ಬದುಕುಗಳ ಆಪೋಷನಕ್ಕೆ ಹೊಂಚು ಹಾಕಿ ಕೂತಂತಿರುವ   ಅಪಾಯಗ್ರಸ್ಥ ಸ್ಥಳಗಳನ್ನು ಅಪಾಯಮುಕ್ತಗೊಳಿಸುವ ಉಸಾಬರಿಗೇನೆ ಬಿಬಿಎಂಪಿ ಹೋಗಿಲ್ಲ. ಹಾಗಾಗಿ ಅಪಾಯಗ್ರಸ್ಥ ಸ್ಥಳಗಳ ಸಂಖ್ಯೆನೂ ಕಡಿಮೆಯಾಗಿಲ್ಲ. ಅಪಾಯದ ಪ್ರಮಾಣಕ್ಕೂ ಬ್ರೇಕ್ ಬಿದ್ದಿಲ್ಲ.

ಅಂದ ಹಾಗೆ ಬಿಬಿಎಂಪಿಯಲ್ಲಿ ಎಷ್ಟು ಅಪಾಯಗ್ರಸ್ಥ ಸ್ಥಳಗಳಿವೆ. ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ದುರಂತಕ್ಕೆ ಕಾರಣವಾಗುವ ಸ್ಥಳಗಳಿವೆ ಎನ್ನೋದನ್ನು ಪತ್ತೆ ಮಾಡಿದೆ. ಮಳೆನೀರು ಕಾಲುವೆ ವಿಭಾಗ ಅದ್ಯಾವ ಮಾನದಂಡಗಳನ್ನಿಟ್ಟುಕೊಂಡು ಈ ಡೇಂಜರಸ್ ಸ್ಪಾಟ್ ಗಳನ್ನು ಪತ್ತೆ ಮಾಡಿದೆಯೋ ಗೊತ್ತಿಲ್ಲ. ಮಳೆ ನೀರುಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್  ತಯಾರಿಸಿ ಕೊಟ್ಟ ಪಟ್ಟಿಯನ್ನೇ ಕಣ್ಣಿಗೊತ್ತಿಕೊಂಡು ಮೊನ್ನೆ ಕಂದಾಯ ಸಚಿವ ಆರ್.ಅಶೋಕ್ ಗಿಳಿಪಾಠದಂತೆ ಓದಿಮುಗಿಸಿದ್ದಾರೆ.

ಇನ್ನು, ಬೆಂಗಳೂರಿನಲ್ಲಿ ಮಳೆ ಬಂದರೆ ಅಪಾಯಕ್ಕೆ ಆಹ್ವಾನ ನೀಡುವಂಥ ಡೇಂಜರಸ್ ಸ್ಪಾಟ್ ಗಳು ಎಷ್ಟಿವೆ ಗೊತ್ತಾ? ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ವರದಿಯಂತೆ 209 ಸ್ಪಾಟ್​ಗಳಿವೆ. 198 ವಾರ್ಡ್​​ಗಳ ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಇಷ್ಟೇನಾ ಎಂದು ಹುಬ್ಬೇರಿಸಬೇಡಿ. ಪ್ರಹ್ಲಾದ್ ಎನ್ನುವ ಅಧಿಕಾರಿ ತನ್ನ ಕಚೇರಿಯಲ್ಲಿ ಕುಳಿತುಕೊಂಡು ಕಣ್ಣಳತೆಯಲ್ಲಿ ಪತ್ತೆ ಮಾಡಿರುವ ಸ್ಪಾಟ್ ಗಳಿವು. ಮಳೆಗಾಲ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಖುದ್ದು ಫೀಲ್ಡ್ ಗಿಳಿದು ಸರ್ವೇ ಮಾಡಿ ರಿಪೋರ್ಟ್ ಕೊಡಬೇಕಿದ್ದ ಈ ಮಹಾನುಭಾವ,  ಅಂದಾಜಿಗೊಂದಿಷ್ಟು ಸ್ಪಾಟ್ ಗಳನ್ನು ಪಟ್ಟಿ ಮಾಡಿ ಕಮಿಷನರ್ ಅವರ ಘನಸನ್ನಿಧಿಗೆ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸುವ ಕೆಲಸಕ್ಕೂ ಹೋಗದೆ ಅಪ್ರೂವ್ಡ್ ಎಂದು ಅನುಮೋದಿಸಿದ್ದಾರೆ ಅನಿಲ್ ಕುಮಾರ್.

Lunar Eclipse 2020: ಇಂದು ರಾತ್ರಿ ಸಂಭವಿಸಲಿದೆ ಅಪರೂಪದ ಸ್ಟ್ರಾಬೆರಿ ಚಂದ್ರಗ್ರಹಣ; ಭಾರತದಲ್ಲಿ ಗೋಚರವಿದೆಯೇ?

ಪ್ರಹ್ಲಾದ್ ಅವರ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿವೆಯಂತೆ 209 ಅಪಾಯಗ್ರಸ್ಥ ಸ್ಥಳಗಳು. ಈ ಸ್ಥಳಗಳಲ್ಲೇ ಅಪಾಯ ಹೆಚ್ಚು-ಸಾವು ನೋವು ಸರ್ವೇಸಾಮಾನ್ಯವಂತೆ. ಅಂದ ಹಾಗೆ  ಅತೀ ಹೆಚ್ಚು-ಗಂಭೀರ ಅಪಾಯಗ್ರಸ್ಥ ಸ್ಥಳಗಳನ್ನು ಕೂಡ ಪ್ರಹ್ಲಾದ್ ಲೆಕ್ಕ ಹಾಕಿ ಅದನ್ನು 58 ಎಂದಿದ್ದಾರೆ. ಹಾಗೆಯೇ ಸಾಮಾನ್ಯ ಅಪಾಯಗ್ರಸ್ಥ ಸ್ಥಳಗಳ ಸಂಖ್ಯೆ 151ರಷ್ಟಿದೆ ಎಂದು ರಿಪೋರ್ಟ್ ನೀಡಿದ್ದಾರೆ.

ವಲಯವಾರು ಅಪಾಯಗ್ರಸ್ಥ ಸ್ಥಳಗಳ ಮಾಹಿತಿ ನೋಡೋದಾದ್ರೆ, ಹೆಚ್ಚು ಅಪಾಯಗ್ರಸ್ಥ ಸ್ಥಳಗಳಿರುವುದೇ ಪಶ್ಚಿಮ ವಲಯದಲ್ಲಿಯಂತೆ. 38 ಅಪಾಯಗ್ರಸ್ಥ ಸ್ಥಳಗಳು ಈ  ವಲಯದಲ್ಲಿದೆಯಂತೆ. ಹಾಗೆಯೇ ಆರ್ ಆರ್ ನಗರದಲ್ಲಿ 37 ಅಪಾಯಗ್ರಸ್ಥ ಸ್ಥಳಗಳಿದ್ರೆ ನಂತ್ರದ ಸ್ಥಾನದಲ್ಲಿ ಮಹಾದೇವಪುರ ವಲಯವಿದೆ.ಈ ವಲಯದಲ್ಲಿರೋ ಅಪಾಯಗ್ರಸ್ಥ ಸ್ಥಳಗಳು ಬರೋಬ್ಬರಿ 32.ಇನ್ನು ಕೋರಮಂಗಲ ಕಣಿವೆಯಲ್ಲಿ 29 ಅಪಾಯಗ್ರಸ್ಥ ಸ್ಥಳಗಳಿವೆಯಂತೆ. ಬೊಮ್ಮನಹಳ್ಳಿ ವಲಯದಲ್ಲಿ 19, ದಾಸರಹಳ್ಳಿ ವಲಯದಲ್ಲಿ 13 ಅಪಾಯಕಾರಿ ಸ್ಥಳಗಳಿವೆಯಂತೆ. ಯಲಹಂಕ ವಲಯದಲ್ಲಿ  11 ಹಾಗೂ ಪೂರ್ವ ವಲಯದಲ್ಲಿ  10 ಅಪಾಯಗ್ರಸ್ಥ ಸ್ಥಳಗಳಿವೆ ಎಂದು ಪ್ರಹ್ಲಾದ್ ರಿಪೋರ್ಟ್ ನೀಡಿದ್ದಾರೆ. ಇದನ್ನು ಒಪ್ಪಿಕೊಳ್ಳೋದು ಕಷ್ಟವಾದ್ರೂ ನಂಬದೇ ಬೇರೆ ವಿಧಿಯಿಲ್ಲ ಎನ್ನುವಂತಾಗಿದೆ. ಇಷ್ಟೊಂದು ಅಪಾಯಕಾರಿ ಸನ್ನಿವೇಶದ ಚಿತ್ರಣವನ್ನು ಬಿಬಿಎಂಪಿಗೆ ಸಲ್ಲಿಸಿದರೂ ಈವರೆಗೆ ರಾಜಕಾಲುವೆಗಳಲ್ಲಿನ ಹೂಳು ತೆಗೆಸಿಲ್ಲ. ತಗ್ಗು ಪ್ರದೇಶಗಳನ್ನು ಅಪಾಯಮುಕ್ತಗೊಳಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಬೆಂಗಳೂರಿಗರು ಮಳೆಗಾಲದಲ್ಲಿ ಸೇಫ್ ಎಂದು ಭಾವಿಸಲು ಆಗುತ್ತಾ?

ವಲಯಗಳು                                                                                                                                                                                                                                                                                                                           ಪೂರ್ವ ವಲಯ                  05                                                 15                                      20
ಪಶ್ಚಿಮ ವಲಯ                  05                                                 33                                      38
ದಕ್ಷಿಣ ವಲಯ                     03                                                 07                                       10
ಕೋರಮಂಗಲ ಕಣಿವೆ          10                                                19                                        29
ಯಲಹಂಕ                           04                                                 07                                        11
ಮಹಾದೇವಪುರ                  11                                                 21                                         32
ಬೊಮ್ಮನಹಳ್ಳಿ                     12                                               07                                           19
ಆರ್ ಆರ್ ನಗರ                  08                                                29                                          37
ದಾಸರಹಳ್ಳಿ                        00                                                 13                                           13
ಒಟ್ಟು                                   58                                                 151                                        209
First published: June 5, 2020, 12:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading