Siddaramaiah: 2023ರ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಎಂದ ಸಿದ್ದರಾಮಯ್ಯ!

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯನವರು 2023ರ ವಿಧಾನಸಭೆ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ. 2023 ಚುನಾವಣೆ ನಂತರ ಬೇರೆ ಯಾವ ಚುನಾವಣೆಯಲ್ಲೂ ನಾನು ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವ ನೀಡಿದರೂ ಸ್ವೀಕರಿಸಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

  • Share this:
ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಲವು ಬಾರಿ ತಾವು ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ತಮ್ಮದೇ ಆದ ವರ್ಚಸ್ ಉಳಿಸಿಕೊಂಡಿದ್ದಾರೆ. ರಾಜ್ಯದ ಹಲವು ಮತದಾರರವ ಒಲವು ಇವರ ಪರ ಇದೆ. 2023ರ ವಿಧಾನಸಭೆ ಚುನಾವಣೆ (Election) ಕಾಂಗ್ರೆಸ್ (Congress) ಗೆದ್ರೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕೆಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಇಂದು ಮೈಸೂರಿ (Mysuru)ನಲ್ಲಿ ಮಾತನಾಡಿದ ಸಿದ್ದರಾಮಯ್ಯ ನವರು 2023ರ ವಿಧಾನಸಭೆ ಚುನಾವಣೆ ನನ್ನ ಕೊನೆ (Last) ಚುನಾವಣೆ ಎಂದಿದ್ದಾರೆ. 2023 ಚುನಾವಣೆ ನಂತರ ಬೇರೆ ಯಾವ ಚುನಾವಣೆಯಲ್ಲೂ ನಾನು ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವ ನೀಡಿದರೂ ಸ್ವೀಕರಿಸಲ್ಲ ಎಂದು ಹೇಳಿದ್ದಾರೆ.

ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಸಿದ್ದರಾಮಯ್ಯ?
ಸಿದ್ದರಾಮಯ್ಯ ಅವರನ್ನು 2023ರ ವಿಧಾನಸಭೆಯ ಚುನಾವಣೆಯಲ್ಲಿ ಬಾದಾಮಿ, ಕೊಪ್ಪಳ, ಕೋಲಾರ, ಹುಣಸೂರು ಮತ್ತು ವರುಣದಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರಂತೆ. ಇದೇ ಕೊನೆ ಚುನಾವಣೆ ಎಂದಿರುವ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಅಂತ ಇನು ಸ್ಪಷ್ಟವಾಗಿ ಹೇಳಿಲ್ಲ.

ಚಾಮುಂಡಿ ಕ್ಷೇತ್ರ, ಬಾದಾಮಿ ಕ್ಷೇತ್ರಕ್ಕಿರುವ ವ್ಯತ್ಯಾಸ ಏನು?
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಸೋತಿದ್ರು. ಆಗ ಅನೇಕ ಬೂತ್ ಕಮಿಟಿಗಳಿರಲಿಲ್ಲ, ಅದಕ್ಕೆ ಸೋತೆ ಎಂದು ಸಿದ್ದಾರಾಮಯ್ಯನವರು ಹೇಳಿದ್ದಾರೆ. ಸೋಲು ಮತ್ತು ಗೆಲುವನ್ನು ನಾನು ಸಮವಾಗಿ ಸ್ವೀಕರಿಸಿದ್ದೇನೆ. ಚಾಮುಂಡಿ ಕ್ಷೇತ್ರದಲ್ಲಿ ಬೇರೆ ಯಾವ ಪಕ್ಷವೂ ಮಾಡದಷ್ಟು ಕೆಲಸ ಮಾಡಿಸಿದ್ದೇನೆ. ಬಾದಾಮಿ ಕ್ಷೇತ್ರಕ್ಕೆ 2 ಬಾರಿ ಮಾತ್ರ ಹೋಗಿದ್ದೆ. ಆದ್ರೂ ಅಲ್ಲಿಯ ಜನ ಗೆಲ್ಲಿಸಿದು ಎಂದು ಹೇಳಿದ್ದಾರೆ.

ಇದನ್ನೂ ಓದಿ: PSI Recruitment Scam: ಅಮೃತ್ ಪೌಲ್​ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಅವ್ರ ಡೈರಿಯಲ್ಲಿ ಏನಿದೆ ಹೇಳಿ- ಸಿದ್ದರಾಮಯ್ಯ

ನಾನು ಚಾಮುಂಡೇಶ್ವರಿಯಿಂದ ಮತ್ತೆ ನಿಲ್ಲಲ್ಲ!
ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಮತ್ತೆ ನಿಲ್ಲಲ್ಲ ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ಘೋಷಣೆ ಮಾಡಿದ್ದಾರೆ. ನನ್ನನ್ನು ಮತ್ತೆ ಒತ್ತಾಯ ಮಾಡಬೇಡಿ. ನನ್ನನ್ನು ಖುಷಿಪಡಿಸಲೂ ಇನ್ಮುಂದೆ ಹೀಗೆ ಮಾತನಾಡಬೇಡಿ. ದಟ್ ಇಸ್ ವೆರಿ ವೆರಿ ಕ್ಲಿಯರ್. ಇದು ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.

ಚಾಮುಂಡಿ ಕ್ಷೇತ್ರದಲ್ಲಿ ಸೋತ್ತಿದ್ದರ ಬಗ್ಗೆ ಹೇಳಿದ್ದೇನು?
ಯಾವುದೇ ಪಕ್ಷ ಚುನಾವಣೆಯಲ್ಲಿ ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುತ್ತೆ. ಅಭ್ಯರ್ಥಿ ಆಗುವವರು ಪಕ್ಷದ ಅಭ್ಯರ್ಥಿ ಅಷ್ಟೇ. ಮನೆ ಮನೆಗೆ ಹೋಗಿ ಮತ ಕೇಳೋರು ಕಾರ್ಯಕರ್ತರು. ನಾನು ಹತ್ತು ವರ್ಷ ಚಾಮುಂಡೇಶ್ವರಿಯಲ್ಲಿ ನಿಂತಿರಲಿಲ್ಲ. 2018 ರಲ್ಲಿ ಸ್ಪರ್ದಿಸಿದಾಗ ಅನೇಕ ಬೂತ್‍ಗಳಲ್ಲಿ ಕಾರ್ಯಕರ್ತರು ನಿಂತಿರಲಿಲ್ಲ. ಹೀಗಾಗಿ ನಾನು ಸೋಲಬೇಕಾಯ್ತು.

ಇದನ್ನೂ ಓದಿ: Siddaramaiah: ಏ ಅದನ್ನ ತರಬೇಡಪ್ಪ, ಅದರಲ್ಲಿ ಹುಳು ಇರುತ್ತೆ: ಸಿದ್ದರಾಮಯ್ಯ

ನಾನು 83 ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದಾಗ ಚಾಮುಂಡೇಶ್ವರಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಿ. ಇಂದು ಮೂಲಭೂತ ಸೌಲಭ್ಯ ಸಿಕ್ಕಿದ್ರೆ ಸಿದ್ದರಾಮಯ್ಯ ಶಾಸಕರಾಗಿ, ಸಿಎಂ ಆಗಿದ್ರಿಂದ.
ನಾನು ಮಾಡಿದ ಕೆಲಸವನ್ನ ಯಾವ ಮಂತ್ರಿಯೂ ಮಾಡಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಕೆಲಸ ನೋಡಿ ಮತ ಹಾಕೋರು ಕಡಿಮೆ!
ಈಗ ಜನ ತುಂಬಾ ಬದಲಾಗಿದ್ದಾರೆ. ಪಕ್ಷ, ಅಭ್ಯರ್ಥಿ ಮಾಡಿದ ಕೆಲಸ ನೋಡಿ ಮತ ಹಾಕಲ್ಲ. ಜಾತಿ, ಹಣದ ಮೇಲೆ ಚುನಾವಣೆ ನಡೆಯುತ್ತಿದೆ. ನಮ್ಮ ಪರ್ಫಾಮೆನ್ಸ್ ಮೇಲೆ ಅಧಿಕಾರಕ್ಕೆ ಬರ್ತೀನಿ ಎಂಬುದು ಸುಳ್ಳು. ಕಾರ್ಯಕರ್ತರು ಮತದಾರರ ಬಳಿ ಸಂಪರ್ಕ ಇಟ್ಟುಕೊಳ್ಳಬೇಕು. ಹಿಂದೆ ಕಾಂಗ್ರೆಸ್ ಬಿ ಫಾರಂ ತೆಗೆದುಕೊಂಡು ಬಂದ್ರೆ ಗೆಲ್ತಾರೆ ಅಂತಿದ್ರು.

ಲಿಂಗಾಯತ ಧರ್ಮ ಒಡೆದ ಸಿದ್ದರಾಮಯ್ಯ ಅಂತ ನಮ್ಮ ಪಕ್ಷದವರೇ ಅಪಪ್ರಚಾರ ಮಾಡಿದ್ರು. ರಾಮುಲು ಮೀಸಲಾತಿ ಬಗ್ಗೆ ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದರು. ಸಚಿವ ಬಿ.ಶ್ರೀರಾಮುಲು ಎಸ್‍ಟಿಗೆ ಮೀಸಲಾತಿ ಕೊಡಿಸಿದರಾ ಎಂದು ಪ್ರಶ್ನಿಸಿದ್ದಾರೆ. ವಾಲ್ಮೀಕಿ ಸ್ವಾಮಿಜಿ ಧರಣಿ ಕುಳಿತು 155 ದಿನ ಆಯ್ತು. ಯಾಕೆ ನ್ಯಾಯ ಕೊಡಿಸಿಲ್ಲ ಅಂದ್ರು. ಕುಮಾರಸ್ವಾಮಿ, ಪ್ರತಾಪ್ ಸಿಂಹ ವಿರುದ್ಧವೂ ಸಿದ್ದರಾಮಯ್ಯ ಗರಂ ಆಗೇ ಮಾತನಾಡಿದ್ರು.
Published by:Savitha Savitha
First published: