ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಅಂತಿಮ ಮತದಾರರ ಪಟ್ಟಿಯನ್ನು (Voters List 2023) ಗುರುವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (Manoj Kumar Meena) ಪ್ರಕಟಿಸಿದರು. ಸಂಜೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ (Tushar Giri nath, BBMP Chief Commissioner) ಸಹ ಮೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಬೆಂಗಳೂರಿನ (Bengaluru) ಎಲ್ಲಾ ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟಿಸಿದರು. ಚಿಕ್ಕಪೇಟೆ, ಶಿವಾಜಿನಗರ, ಮಹದೇವಪುರ ಮತದಾರರ ಅಂತಿಮ ಪಟ್ಟಿ ಜನವರಿ 15 ಪ್ರಕಟ ಮಾಡುತ್ತೇವೆ ಎಂದು ತುಷಾರ್ ಗಿರಿ ನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಮೂರು ಕ್ಷೇತ್ರದ ಹೊರತಾಗಿ 221 ವಿಧಾನಸಭಾ ಕ್ಷೇತ್ರದ ಪಟ್ಟಿ ಪ್ರಕಟ ಮಾಡುತ್ತೇವೆ. ಇಂದೇ ಮತದಾರರ ತಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ ಅಂತ ಮನವಿ ಮಾಡಿಕೊಂಡರು.
5 ಕೋಟಿಗೂ ಅಧಿಕ ಮತದಾರರು
18,32,000 ಅರ್ಜಿಗಳು ನಮಗೆ ಬಂದಿದೆ. 5,05,48,553 ಮತದಾರರು ರಾಜ್ಯದಲ್ಲಿದ್ದಾರೆ. ಅಂತಿಮವಾಗಿ ರಾಜ್ಯದಲ್ಲಿ 5 ಕೋಟಿ 5 ಲಕ್ಷ, 48 ಸಾವಿರ 553 ಮತದಾರರಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು.
ರಾಜ್ಯದ ಮತದಾರರ ವಿವರ
ಪುರುಷರು: 2,54,49,725
ಮಹಿಳೆಯರು: 2,50,94,326
ಇತರರು: 4,502
ಒಟ್ಟು - 5,05,48,553
2011ರ ಜನಗಣತಿ ಪ್ರಕಾರ ಈ ಬಾರಿ 7 ಲಕ್ಷ ಯುವ ಮತದಾರರು ರಾಜ್ಯದಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. 221 ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರು ಹೊಂದಿದ್ದಾರೆ
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ: 6,50,532
ಶೃಂಗೇರಿ ವಿಧಾನಸಭಾ ಕ್ಷೇತ್ರ: 1,66,521
ಮತದಾರರ ಲಿಂಗಾನುಪಾತ
ರಾಜ್ಯದ ಮತದಾರರ ಲಿಂಗಾನುಪಾತ ಕಳೆದ ಬಾರಿ 1000ಕ್ಕೆ 983 ಇತ್ತು. ಈ ಬಾರಿ 5 ಪಾಯಿಂಟ್ ಮಹಿಳಾ ಮತದಾರರ ಅನುಪಾತದಲ್ಲಿ ಏರಿಕೆ ಕಂಡಿದೆ.
221 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 57,388 ಮತಗಟ್ಟೆಗಳು ಇರಲಿವೆ. 2023ರ ಚುನಾವಣೆಗೆ ಮತದಾನ ಪಟ್ಟಿಯಲ್ಲಿ 30,517 ಆದಿವಾಸಿಗಳಿದ್ದಾರೆ.
ವೆಬ್ ಸೈಟ್ ನಲ್ಲಿ ಪಿಡಿಎಫ್ ಮಾದರಿಯಲ್ಲಿ ಮತದಾರರು ತಮ್ಮ ಹೆಸರು ಮುಂತಾದ ವಿವರಗಳು ಪರಿಶೀಲಿಸಬಹುದು
www.nvsp.in or Voter Portal or Voter Helpline Mobile App- ಈ ಮೂರು ವಿಧಾನವಾಗಿ ಮತದಾರರು ತಮ್ಮ ಮಾಹಿತಿ ತಪ್ಪಿದ್ದಲ್ಲಿ ಮತ್ತೆ ಬದಲಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ. 70.02% ಈವರೆಗೆ ರಾಜ್ಯದಲ್ಲಿ ಮತದಾರರ ಆಧಾರ್ ಲಿಂಕ್ ಆಗಿದೆ. ಮಾರ್ಚ್ 31ರವರೆಗೆ ಆಧಾರ್ ಲಿಂಕ್ ಮಾಡಿಸಲು ಅವಕಾಶ ನೀಡಲಾಗಿದೆ.
ಬೆಂಗಳೂರು ಮತದಾರರ ವಿವರ
ಚಿಕ್ಕಪೇಟೆ, ಶಿವಾಜಿನಗರ, ಮಹಾದೇವಪುರ ಕ್ಷೇತ್ರದ ಮಾಹಿತಿ ಹೊರತುಪಡಿಸಿ 25 ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ಗುರುವಾರ ಬಿಬಿಎಂಪಿ ಪ್ರಕಟಿಸಿದೆ.
ಪುರುಷರುಳ: 42,65,140
ಮಹಿಳೆಯರು: 39,62,712
ತೃತೀಯಲಿಂಗಿಗಳು: 1,523
ಒಟ್ಟು: 82,29,375
ಇದನ್ನೂ ಓದಿ: Accident: ಪ್ರತ್ಯೇಕ ಅಪಘಾತ; ಗದ್ದೆಗೆ ಉರುಳಿದ KSRTC ಬಸ್, ಚಾಮುಂಡಿ ಬೆಟ್ಟದಲ್ಲಿ 50 ಜನರಿದ್ದ ಬಸ್ನಲ್ಲಿ ಬೆಂಕಿ
ಕಪ್ಪು ಪಟ್ಟಿಗೆ ಸೇರಿದ ಚಿಲುಮೆ ಸಂಸ್ಥೆ!
ಮತದಾರರ (Voters) ಖಾಸಗಿ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪ ಹೊತ್ತಿರುವ ಬೆಂಗಳೂರಿನ ಚಿಲುಮೆ ಸಂಸ್ಥೆಗೆ (Chilume organization) ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಈಗಾಗಲೇ ವೋಟರ್ ಐಡಿ ಹಗರಣದಲ್ಲಿ (Voter ID Scam) ತನಿಖೆ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ (blacklist) ಸೇರಿಸಲಾಗಿದೆ.
ಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Chief Commissioner Tushar Girinath) ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ್ದಾರೆ. ಚಿಲುಮೆ ಸಂಸ್ಥೆಗೆ ಈಗಾಗಲೇ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.
ಒಂದೆಡೆ ಚಿಲುಮೆ ಸಂಸ್ಥೆಯ ವಿರುದ್ದ ರಾಜ್ಯ ಚುನಾವಣಾ ಆಯೋಗ (State Election Commission) ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪೊಲೀಸ್ ಇಲಾಖೆಯಿಂದಲೂ (Police Department) ಚಿಲುಮೆ ಸಂಸ್ಥೆಯ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ