ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್​​ಗಾಗಿ ಭಾರೀ ಪೈಪೋಟಿ

ಮಹಾಸಮರಕ್ಕೆ ಇನ್ನೇನು ಕೆಲವು ತಿಂಗಳುಗಳಷ್ಟೇ ಬಾಕಿ ಉಳಿದಿದ್ದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕ್ಕಾಗಿ ಭಾರೀ ಪೈಪೋಟಿ ಏರ್ಪಡಿದೆ. ಸದ್ಯ ಮೈತ್ರಿ ಪಕ್ಷಗಳಲ್ಲಿ ಯಾರಿಗೆ ಟಿಕೆಟ್ ಎಂಬ ಗೊಂದಲ ಸೃಷ್ಟಿಯಾಗಿದ್ದು ಎರಡು ಪಕ್ಷಗಳು ಕೂಡ ನಮಗೆ ಟಿಕೆಟ್ ನೀಡಿ ಅಂತಿದ್ದಾರೆ

G Hareeshkumar | news18
Updated:February 11, 2019, 11:03 PM IST
ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್​​ಗಾಗಿ ಭಾರೀ ಪೈಪೋಟಿ
ಸಾಂದರ್ಭಿಕ ಚಿತ್ರ
G Hareeshkumar | news18
Updated: February 11, 2019, 11:03 PM IST
- ವೀರೇಶ್ ಜಿ ಹೊಸೂರ್ 

ಚಿಕ್ಕಮಗಳೂರು (ಫೆ.11) :  ಲೋಕಸಭಾ ಚುನಾವಣೆಗೆ ಇನ್ನೇನು ಕೆಲವು ತಿಂಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್ ಕ್ಕಾಗಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ನಡುವೆ ಟಿಕೆಟ್  ಫೈಟ್​ ಏರ್ಪಟಿದ್ದು ಟಿಕೆಟ್ ಗಾಗಿ ಎರಡು ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

1957 ರಲ್ಲಿ ಕಾಫಿನಾಡು ಚಿಕ್ಕಮಗಳೂರು-ಹಾಸನ ಲೋಕಸಭಾ ಕ್ಷೇತ್ರವಾಗಿ ಮೊದಲ ಚುನಾವಣಾ ಭಾಗ್ಯವನ್ನು ಕಂಡಿತ್ತು, ನಂತರದಲ್ಲಿ 1967 ರಲ್ಲಿ ಚಿಕ್ಕಮಗಳೂರು ಸ್ವತಂತ್ರ ಲೋಕಸಭಾ ಕ್ಷೇತ್ರವಾಯ್ತು, 2009 ರಲ್ಲಿ ಮತ್ತೆ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಕಾಫಿನಾಡು ಇದೀಗ 2 ಉಪಲೋಕಸಭಾ ಸೇರಿದಂತೆ 19 ನೇ ಲೋಕಸಭಾ ಚುನಾವಣೆಯನ್ನ ಎದುರು ನೋಡುತ್ತಿದೆ.

ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್​ಗಾಗಿ ಭಾರೀ ಪೈಪೋಟಿ

ಚುನಾವಣೆಗೆ ಇನ್ನೇನು ಹತ್ತಿರ ಬಂದಿದ್ದು,ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕ್ಕಾಗಿ ಭಾರೀ ಪೈಪೋಟಿ ಏರ್ಪಡಿದೆ. ಸದ್ಯ ಮೈತ್ರಿ ಪಕ್ಷಗಳಲ್ಲಿ ಯಾರಿಗೆ ಟಿಕೆಟ್ ಎಂಬ ಗೊಂದಲ ಸೃಷ್ಟಿಯಾಗಿದ್ದು ಎರಡು ಪಕ್ಷಗಳು ಕೂಡ ನಮಗೆ ಟಿಕೆಟ್ ನೀಡಿ ಅಂತಿದ್ದಾರೆ. ಕಾಂಗ್ರೆಸ್ ನವರು ನಮ್ಮಗೆ ಟಿಕೆಟ್ ಕೊಡಿ ಅಂತಿಂದ್ರೆ, ಜೆಡಿಎಸ್ ನವರು ನಮ್ಮಗೂ ಒಂದು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು ನಮಗೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್ ಗೆ ಮನವಿ ಮಾಡಲಾಗುವುದು ಎನ್ನುತ್ತಾರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ್ ಕುಮಾರ್.

ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. 730289 ಪುರುಷರು, 764105 ಮಹಿಳೆಯರು ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 14,94,452 ಮತದಾರರಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಹಾಗೂ ಎಸ್.ಎಲ್.ಧರ್ಮೇಗೌಡರು ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳಾಗಿದ್ದು ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠರು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ನಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸದೃಡವಾಗಿದ್ದು ನಮ್ಮ ಪಕ್ಷಕ್ಕೆ ಟಿಕೆಟ್ ನೀಡುವಂತೆ ವರಿಷ್ಟರಿಗೆ ನಾವು ಮನವಿ ಮಾಡಿದ್ದೇವೆ ಅಂತಿದ್ದಾರೆ ಜೆಡಿಎಸ್ ಮುಖಂಡರು.

ಇದನ್ನೂ ಓದಿ :  ಸಿಬಿಐ ತನಿಖೆ ಆಗಬೇಕು ಎನ್ನುತ್ತಿದ್ದವರ ಮೇಲೆಯೇ ಈಗ ಸಿಬಿಐ ತನಿಖೆ ಬೇಕಿದೆ; ಸಿದ್ದರಾಮಯ್ಯ ವ್ಯಂಗ್ಯ

ಒಟ್ಟಾರೆ, ಮಲೆನಾಡು, ಅರೆಮಲೆನಾಡು ಹಾಗೂ ಕರಾವಳಿ ಸೇರಿದಂತೆ ವೈವಿದ್ಯಮಯ ವಾತಾವರಣವನ್ನು ಹೊಂದಿರುವ ಕ್ಷೇತ್ರ ಉಡುಪಿ-ಚಿಕ್ಕಮಗಳೂರು. ಹಲವರಿಗೆ ನೆಲೆಕೊಟ್ಟು, ಇನ್ನು ಕೆಲವರಿಗೆ ಮಣ್ಣು ಮುಕ್ಕಿಸಿದ್ದು ಈ ಕ್ಷೇತ್ರದ ವಿಶೇಷತೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಟಿಕೆಟ್ ಕ್ಕಾಗಿ ಭಾರೀ ಪೈಪೊಟಿ ನಡೆದಿದ್ದು ಮೈತ್ರಿ ಪಕ್ಷದಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುಂದನ್ನ ಕಾದು ನೋಡಬೇಕಿದೆ.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...