IISC ಮೇಲೆ 2005 ರಲ್ಲಿ ಉಗ್ರರು ದಾಳಿ ಮಾಡಿದ್ದ ಪ್ರಕರಣ; ಸಾಕ್ಷಾಧಾರ ಕೊರತೆಯಿಂದ ಶಂಕಿತ ಉಗ್ರ ಖುಲಾಸೆ
2005ರ ಡಿಸೆಂಬರ್ನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ದಾಳಿ ಯಲ್ಲಿ ಪ್ರಾಧ್ಯಾಪಕ ಮನೀಶ್ ಚಂದ್ರಪುರಿ ಮೃತಪಟ್ಟಿದ್ದರು. 2017ರಲ್ಲಿ ತ್ರಿಪುರಾದಲ್ಲಿ ಶಂಕಿತ ಉಗ್ರ ಹಬೀಬ್ ಮಿಯಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಬೆಂಗಳೂರು (ಜೂನ್ 22); ಉಗ್ರರು 2005ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದರು. ಈ ದಾಳಿ ಇಡೀ ಬೆಂಗಳೂರಿಗರನ್ನು ಆತಂಕಕ್ಕೀಡು ಮಾಡಿತ್ತು. ಪ್ರಕರಣ ನಡೆದು 12 ವರ್ಷಗಳ ನಂತರ ಅಂದರೆ 2017ರಲ್ಲಿ ಸಿಸಿಬಿ ಪೊಲೀಸರು 2017ರಲ್ಲಿ ತ್ರಿಪುರಾದಲ್ಲಿ ಶಂಕಿತ ಉಗ್ರ ಹಬೀಬ್ ಮಿಯಾನನ್ನು ಬಂಧಿಸಿದ್ದರು. ಆದರೆ, ಸತತ 16 ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದ್ದು, ಉಗ್ರನ ವಿರುದ್ಧ ಸಾಕ್ಷ್ಯಾಧಾರ ಕೊರತೆ ಇದೆ ಎಂಬ ಅಭಿಪ್ರಾಯ ಪಟ್ಟಿರುವ ಎನ್ಐಎ ವಿಶೇಷ ನ್ಯಾಯಾಲಯ ಆತನನ್ನು ಪ್ರಕರಣದಿಂದ ಖುಲಾಸೆ ಮಾಡಿದೆ. ಹೀಗಾಗಿ 2017ರಿಂದ ಜೈಲು ವಾಸ ಅನುಭವಿಸಿದ್ದ ಹಬೀಬ್ ಮಿಯಾ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
2005ರ ಡಿಸೆಂಬರ್ನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ದಾಳಿ ಯಲ್ಲಿ ಪ್ರಾಧ್ಯಾಪಕ ಮನೀಶ್ ಚಂದ್ರಪುರಿ ಮೃತಪಟ್ಟಿದ್ದರು. ಆದರೆ, ಆರೋಪಿಯನ್ನು ಬಂಧಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸಿಸಿಬಿ ಪೊಲೀಸರು ಸತತ ಪ್ರಯತ್ನದಿಂದಾಗಿ 2017ರಲ್ಲಿ ತ್ರಿಪುರಾದಲ್ಲಿ ಶಂಕಿತ ಉಗ್ರ ಹಬೀಬ್ ಮಿಯಾನನ್ನು ಬಂಧಿಸಿದ್ದರು. ಬಳಿಕ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಆದರೆ, ಸಿಸಿಬಿ ಪೊಲೀಸರು ಆ ಚಾರ್ಚ್ಶೀಟ್ನಲ್ಲಿ ಆರೋಪಿ-1 ಶಬಾವುದ್ದಿನ್ ಹೇಳಿಕೆ ಯನ್ನು ಮಾತ್ರ ದಾಖಲಿಸಲಾಗಿದ್ದರು. ಅದನ್ನು ಹೊರತುಪಡಿಸಿ ಉಗ್ರರ ದಾಳಿಗೆ ಸಂಬಂಧಿಸಿದಂತೆ ಮತ್ಯಾವುದೇ ದಾಖಲೆ, ಸಾಕ್ಷ ಅಥವಾ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಲಾಗಿರಲಿಲ್ಲ. ಇದೇ ಕಾರಣಕ್ಕೆ ಸಾಕ್ಷಾಧಾರ ಕೊರತೆ ಇದೆ ಎಂಬ ಅಭಿಪ್ರಾಯ ಪಟ್ಟಿರುವ ಎನ್ಐಎ ವಿಶೇಷ ನ್ಯಾಯಾಲಯ ಶಂಕಿತ ಹಬೀಬ್ ಮಿಯಾನನ್ನು ಆರೋಪದಿಂದ ಮುಕ್ತಗೊಳಿಸಿ ಆದೇಶಿಸಿದೆ. ಜೊತೆಗೆ ಆತನನ್ನು ಬಿಡುಗಡೆಗೊಳಿಸುವಂತೆ ಯೂ ಪೊಲೀಸರಿಗೆ ಸೂಚಿಸಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ