Note Ban: 2,000 ಮುಖಬೆಲೆಯ ನೋಟ್ ನಿಜಕ್ಕೂ​ ಬ್ಯಾನ್​ ಆಗಲಿದೆಯಾ?; ಇಲ್ಲಿದೆ ಉತ್ತರ

2016ರ ನವೆಂಬರ್​ 8ರ ರಾತ್ರಿ ನರೇಂದ್ರ ಮೋದಿ ನೋಟ್​ ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದರು. ಇದಾದ ನಂತರ ಚಲಾವಣೆಗೆ ಬಂದಿದ್ದು 2,000 ರೂ. ಮುಖಬೆಲೆಯ ನೋಟ್​. ಈಗ ಈ ನೋಟ್​ ಬ್ಯಾನ್​ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

news18-kannada
Updated:December 11, 2019, 1:52 PM IST
Note Ban: 2,000 ಮುಖಬೆಲೆಯ ನೋಟ್ ನಿಜಕ್ಕೂ​ ಬ್ಯಾನ್​ ಆಗಲಿದೆಯಾ?; ಇಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
  • Share this:
ಎರಡು ಸಾವಿರ ರೂಪಾಯಿ ನೋಟ್​ ಬ್ಯಾನ್​ ಆಗಲಿದೆಯಾ? 500, 1,000 ರೂಪಾಯಿ ನೋಟಿನಂತೆ ರಾತ್ರೋರಾತ್ರಿ ಈ ಪಿಂಕ್​ ನೋಟ್​ ತನ್ನ ಮೌಲ್ಯ ಕಳೆದುಕೊಳ್ಳಲಿದೆಯಾ? ಹೀಗೆಯೇ ಸಾಕಷ್ಟು ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಈ ಸುದ್ದಿ ಹುಟ್ಟಿಕೊಂಡಿದ್ದು ಎಲ್ಲಿಂದ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

2016ರ ನವೆಂಬರ್​ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೋಟ್​ ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದರು. ಇದಾದ ನಂತರ ಚಲಾವಣೆಗೆ ಬಂದಿದ್ದು 2,000 ರೂ. ಮುಖಬೆಲೆಯ ಹೊಸ ನೋಟ್​. ‘ಈ ನೋಟನ್ನು ತಾತ್ಕಾಲಿಕವಾಗಿ ಚಲಾವಣೆಗೆ ತರಲಾಗಿದೆ. ಇದನ್ನು ಶೀಘ್ರವೇ ಅಮಾನ್ಯೀಕರಣಗೊಳಿಸಲಾಗುತ್ತದೆ’ ಎಂಬಿತ್ಯಾದಿ ಚರ್ಚೆ ಕಳೆದ ಮೂರು ವರ್ಷಗಳಿಂದ ನಡೆದೇ ಇದೆ. ಆದರೆ, ಈ ವಿಚಾರವನ್ನು ಕೇಂದ್ರ ಸರ್ಕಾರ ಅಲ್ಲಗಳೆಯುತ್ತಲೇ ಇದೆ.

ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬರಲು ಕಾರಣ ಖಾಸಗಿ ಲಾಜಿಸ್ಟಿಕ್​ ಸಂಸ್ಥೆ ಹೊರಡಿಸಿದ ಆದೇಶದ ಪ್ರತಿ. ಕರ್ನಾಟಕ ಮೂಲದ ಲಾಜಿಸ್ಟಿಕ್​ ಸಂಸ್ಥೆ, “ಇನ್ನುಮುಂದೆ 2,000 ರೂಪಾಯಿ ನೋಟನ್ನು ಸ್ವೀಕರಿಸಬೇಡಿ. 2,000 ನೋಟುಗಳು ನಿಮ್ಮ ಬಳಿ ಇದ್ದರೆ ಅದನ್ನು ಈಗೆಯೇ ಬ್ಯಾಂಕ್​ಗೆ ಠೇವಣಿ ಮಾಡಿ. ಇದನ್ನು ತಪ್ಪದೇ ಪಾಲಿಸಿ,” ಎಂದು ಸಂಸ್ಥೆ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ.

ಇದನ್ನೂ ಓದಿ: 2002 ಗೋಧ್ರಾ ದಂಗೆ ಪ್ರಕರಣ: ಮೋದಿ ನೇತೃತ್ವದ ಗುಜರಾತ್​ ಸರ್ಕಾರಕ್ಕೆ ಕ್ಲೀನ್​ಚಿಟ್​

ಈ ಪ್ರಕಟಣೆಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ನೋಟ್​ ಬ್ಯಾನ್​ ಹಿನ್ನೆಲೆಯಲ್ಲಿ ಸಂಸ್ಥೆ ಈ ರೀತಿ ಆದೇಶ ಹೊರಡಿಸಿರಬಹುದು ಎಂದು ಊಹಿಸಿದ್ದಾರೆ.

ಇನ್ನು, ಮಾಜಿ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಎಸ್​.ಸಿ. ಗಾರ್ಜ್​ ಅವರು ಕೂಡ 2,000 ನೋಟ್​ ಬ್ಯಾನ್​ ಸೂಚನೆ ನೀಡಿದ್ದಾರೆ. “2,000 ರೂ. ನೋಟು ಕಡಿಮೆ ಚಲಾವಣೆಯಲ್ಲಿದೆ. ಕಪ್ಪು ಹಣವನ್ನು ಇದೇ ಮುಖಬೆಲೆಯ ನೋಟಿನಲ್ಲಿ ಇಡಲಾಗಿದೆ,” ಎಂದು ಅವರು ಹೇಳಿದ್ದಾರೆ.

ಸರ್ಕಾರದ ಸ್ಪಷ್ಟನೆ:ಕೇಂದ್ರ ಸರ್ಕಾರ ಈ ವಿಚಾರವಾಗಿ ಸ್ಪಷ್ಟನೆ ನೀಡಿದೆ. ನಮ್ಮ ಮುಂದೆ ಆ ರೀತಿ ಆಲೋಚನೆಗಳು ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ನೋಟ್​ ಬ್ಯಾನ್​ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

 
First published: December 11, 2019, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading