ಬೆಂಗಳೂರು: ಪ್ರತೀ ವರ್ಷ ಗಣರಾಜ್ಯೋತ್ಸವ (Republic Day) ದಿನದಂದು ಪೊಲೀಸರಿಗೆ (Police) ತಾವು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ರಾಷ್ಟ್ರಪತಿ ಪದಕ (President Police Medal for Distinguished Service) ಘೋಷಣೆಯನ್ನು ಈ ವರ್ಷವೂ ಪ್ರಕಟ ಮಾಡಲಾಗಿದೆ. ಈ ಬಾರಿ ಕರ್ನಾಟಕದಿಂದ (Karnataka Police) ಒಟ್ಟು 20 ಮಂದಿ ಈ ಅತ್ಯುನ್ನತ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 20 ಮಂದಿ ಪೊಲೀಸರ ಪೈಕಿ ಒಬ್ಬರು ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಆಯ್ಕೆಯಾದರೆ, ಇನ್ನುಳಿದ 19 ಮಂದಿ ಪೊಲೀಸ್ ಪದಕದ ಗೌರವವಕ್ಕೆ ಪಾತ್ರರಾಗಿದ್ದಾರೆ.
ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪೊಲೀಸರಿಗೆ ನೀಡಲಾಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ (President Police Medal for Distinguished Service) ಎಡಿಜಿಪಿ ಶರತ್ ಚಂದ್ರ ಅವರಿಗೆ ಸಿಕ್ಕಿದ್ದು, ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸೇರಿದಂತೆ ಹತ್ತಾರು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಎಡಿಜಿಪಿ ಶರತ್ ಚಂದ್ರ ಅವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ವೃತ್ತಿ ಜೀವನದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕರ್ನಾಟಕದ ಎಡಿಜಿಪಿ ಶರತ್ ಚಂದ್ರ ಅವರಿಗೆ ಈ ಬಾರಿಯ ಗಣರಾಜ್ಯೋತ್ಸವದಂದು ನೀಡಲಾಗುವ ರಾಷ್ಟ್ರಪತಿ ಪದಕ್ಕೆ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಹೊಸ ವರ್ಷದ ದಿನದಂದು ದಾಖಲಾಗಿದ್ದು 95 ಡ್ರಂಕ್ ಅಂಡ್ ಡ್ರೈವ್ ಕೇಸ್! ಪೊಲೀಸರು ಹೇಳಿದ್ದೇನು?
19 ಮಂದಿಗೆ ಪೊಲೀಸ್ ಪದಕದ ಗೌರವ - ಯಾರ್ಯಾರು?
ಇದರ ಜೊತೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ಪೊಲೀಸ್ ಪದಕ ಕೂಡ ಘೋಷಣೆ ಮಾಡಲಾಗಿದ್ದು, ಈ ಗೌರವಕ್ಕೆ ಕರ್ನಾಟಕದಿಂದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ. ಅವರೆಲ್ಲರ ವಿವರ ಇಲ್ಲಿದೆ.
ದೇಶಾದ್ಯಂತ ಒಟ್ಟು 544 ಪೊಲೀಸರಿಗೆ ಗೌರವ ಪುರಸ್ಕಾರ
ಇನ್ನುಳಿದಂತೆ ಸೇವೆಯ ಸಂದರ್ಭದಲ್ಲಿ ಶೌರ್ಯವನ್ನು ತೋರಿದ ಪೊಲೀಸರಿಗೆ ನೀಡಲಾಗುವ ಪೊಲೀಸ್ ಪದಕಕ್ಕೆ ದೇಶಾದ್ಯಂತ ಒಟ್ಟು 83 ಪೊಲೀಸರು ಆಯ್ಕೆಯಾಗಿದ್ದು, ರಾಷ್ಟ್ರಪತಿ ಪದಕಕ್ಕೆ ಒಟ್ಟು 54 ಮಂದಿ ಪೊಲೀಸರು ದೇಶಾದ್ಯಂತ ಆಯ್ಕೆಯಾಗಿದ್ದಾರೆ. ಇನ್ನು ಅತ್ಯುತ್ತಮ ಸೇವೆಗಾಗಿ ನೀಡಲ್ಪಡುವ ಪೊಲೀಸ್ ಪದಕಕ್ಕೆ ದೇಶಾದ್ಯಂತ ಒಟ್ಟು 407 ಪೊಲೀಸರು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೆ ಗಣರಾಜ್ಯೋತ್ಸವದ ದಿನ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ