ಬೆಂಗಳೂರು: ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ, ಬಳ್ಳಾರಿ ಭಾಗದಲ್ಲಿಯ ಬಹುತೇಕರ ಹೆಸರಿನ ಉಪನಾಮ ಪಾಟೀಲ್ (Patil Surname) ಎಂದು ಕೊನೆಯಾಗುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಪಾಟೀಲ್ ಎಂದು ಉಪನಾಮ ಕೊನೆಗೊಳ್ಳುವ 20 ನಾಯಕರು ಶಾಸಕರಾಗಿ (MLA) ಆಯ್ಕೆಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 87 ಅಭ್ಯರ್ಥಿಗಳ ಉಪನಾಮ ಪಾಟೀಲ್ ಎಂದಾಗಿತ್ತು. 87 ಜನರಲ್ಲಿ 20 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ 20 ಶಾಸಕರಲ್ಲಿ 12 ಜನರು ಕಾಂಗ್ರೆಸ್ (Congress), 7 ಜನರು ಬಿಜೆಪಿ (BJP) ಮತ್ತು ಒಬ್ಬರು ಜೆಡಿಎಸ್ನಿಂದ (JDS) ಆಯ್ಕೆಯಾಗಿದ್ದಾರೆ.
ಪಾಟೀಲ/ಪಾಟೀಲ್ ಎಂದರೇನು?
ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಉಪನ್ಯಾಸಕ ಅಮರೇಶ್ ನುಗಡೋಣಿ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪಾಟೀಲ್ ಎಂಬ ಉಪನಾಮ ಚಿರಪರಿಚಿತ. ಬ್ರಿಷಿಷರು, ಪೇಶ್ವೆಗಳು ಮತ್ತು ನಿಜಾಮರು ಸೃಷ್ಟಿಸಿದ ಹುದ್ದೆ ಪಾಟೀಲ್. ಗ್ರಾಮದ ನಾಯಕರಿಗೆ ಇನಾಮುದಾರು, ಜಹಗೀರದಾರರಿಗೆ ಸಮಾನವಾದ ಪದವೇ ಪಾಟೀಲ್ ಆಗಿದೆ ಎಂದು ಹೇಳುತ್ತಾರೆ.
ಆರಂಭದಲ್ಲಿ ಮೇಲ್ಜಾತಿಯವರಿಗೆ ಮಾತ್ರ ಪಾಟೀಲ್ ಎಂದು ಹೇಳಲಾಗುತ್ತಿತ್ತು. ಪಾಟೀಲರು ವೀರಶೈವ ಲಿಂಗಾಯತರು ಎಂದು ಹೇಳಲಾಗುತ್ತಿತ್ತು. ಕಾಲಾನಂತರ ಪಾಟೀಲ್ ಎಂಬ ಉಪನಾಮವನ್ನು ಬ್ರಾಹ್ಮಣರು, ಮರಾಠರು ಮತ್ತು ಕುರುಬರು ಸಹ ಬಳಕೆ ಮಾಡಲು ಆರಂಭಿಸಿದರು ಎಂದು ಅಮರೇಶ್ ನುಗಡೋಣಿ ಹೇಳುತ್ತಾರೆ.
ಉಪನಾಮದ ಬಗ್ಗೆ ಶಾಸಕ ಜಿಎಸ್ ಪಾಟೀಲ್ ಹೇಳಿದ್ದು ಹೀಗೆ
ಪಾಟೀಲ್ ಉಪನಾಮದ ಬಗ್ಗೆ ಪ್ರತಿಕ್ರಿಯಿಸಿರುವ ರೋಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್, ನಮ್ಮ ಪೂರ್ವಜರನ್ನು ಪೊಲೀಸ್ ಪಾಟೀಲ್ ಎಂದು ಕರೆಯಲಾಗುತ್ತಿತ್ತು. ಪೊಲೀಸ್ ಪಾಟೀಲರು ಅಂದ್ರೆ ಗ್ರಾಮದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ ಎಂದರ್ಥ.
ಇದನ್ನೂ ಓದಿ: Prediction: ನೂತನ ಕಾಂಗ್ರೆಸ್ ಸರ್ಕಾರದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಸ್ವಾತಂತ್ರ್ಯದ ಬಳಿಕ ಪೊಲೀಸ್ ಪಾಟೀಲ್ ಹುದ್ದೆ ರದ್ದಾಯ್ತು. ಬಳಿಕ ಪೊಲೀಸ್ ಪದ ತೆಗೆದು ಪಾಟೀಲ್ ಎಂದು ಉಳಿಸಿಕೊಳ್ಳಲಾಯ್ತು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ