Fake Website: ಮಂತ್ರಾಲಯದಲ್ಲಿ ರಾಯರ ಹೆಸರಲ್ಲಿ ವಂಚನೆ, ಗಾಣಗಾಪುರದಲ್ಲಿ 20 ಕೋಟಿ ದೋಖಾ!

ವಂಚಕರು ಈಗ ದೇವರ ಹೆಸರಲ್ಲಿ, ಭಕ್ತರ ದುಡ್ಡನ್ನೇ ದೋಖಾ ಮಾಡುತ್ತಿದ್ದಾರೆ. ಮಂತ್ರಾಲಯದಲ್ಲಿ ಆನ್‌ಲೈನ್‌ನಲ್ಲಿ ಪ್ರಸಾದ ಕೊಡುತ್ತೇವೆ ಅಂತ ವಂಚಕರು ಭಕ್ತರಿಗೆ ಮೋಸ ಮಾಡಿದ್ದಾರೆ. ಅತ್ತ ಗಾಣಗಾಪುರದ ದತ್ತಾತ್ರೇಯ ದೇಗುಲದಲ್ಲಿ ಅರ್ಚಕರೇ ನಕಲಿ ವೆಬ್‌ಸೈಟ್ ತೆಗೆದು 20 ಕೋಟಿ ವಂಚಿಸಿದ್ದಾರೆ.

ಗಾಣಗಾಪುರ ದತ್ತಾತ್ರೇಯ ಹಾಗೂ ರಾಘವೇಂದ್ರ ಸ್ವಾಮಿಗಳು

ಗಾಣಗಾಪುರ ದತ್ತಾತ್ರೇಯ ಹಾಗೂ ರಾಘವೇಂದ್ರ ಸ್ವಾಮಿಗಳು

  • News18
  • Last Updated :
  • Share this:
ಮಂತ್ರಾಲಯ/ಗಾಣಗಾಪುರ: ದೇವರ (God) ಹೆಸರು ಹೇಳಿದರೆ ಸಾಕು, ಕೆಲವರು ಕಲ್ಲಿಗೂ ಕೈ ಮುಗಿಯುತ್ತಾರೆ. ಹೀಗೆ ಎಷ್ಟೋ ಜನರು ಭಕ್ತಿಗೋ, ಭಯಕ್ಕೋ ದೇವರ ಪೂಜೆ, ಪುನಸ್ಕಾರ ಮಾಡುತ್ತಾರೆ. ದೇವರು ನಮ್ಮನ್ನು ಕೈ ಬಿಡದೇ ಕಾಪಾಡುತ್ತಾನೆ ಅಂತ ಭಕ್ತರು ನಂಬುತ್ತಾರೆ. ಹೀಗೆ ನಂಬುವ ಭಕ್ತರು (Devotees) ದೇಗುಲಗಳಿಗೆ ಹೋಗಿ, ದೇವರ ದರ್ಶನ ಮಾಡಿ ಕಾಣಿಕೆ ಹಾಕೋದು, ಹರಕೆ ಸಲ್ಲಿಸೋದು ಕಾಮನ್. ಕೆಲವು ವೇಳೆ ದೇವಸ್ಥಾನಕ್ಕೆ ಹೋಗಲು ಆಗದೇ ಇದ್ದವರು ಆನ್‌ಲೈನ್ (Online) ಮೂಲಕ ದೇವಸ್ಖಾನಗಳಿಗೆ ಕಾಣಿಕೆ (Donation) ಸಲ್ಲಿಸುತ್ತಾರೆ. ಇದನ್ನೇ ಗುರಿಯಾಗಿಸಿಕೊಂಡ ವಂಚಕರು ಈಗ ದೇವರ ಹೆಸರಲ್ಲಿ, ಭಕ್ತರ ದುಡ್ಡನ್ನೇ ದೋಖಾ ಮಾಡುತ್ತಿದ್ದಾರೆ. ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಂತ್ರಾಲಯದಲ್ಲಿ (Mantralaay) ಆನ್‌ಲೈನ್‌ನಲ್ಲಿ ಪ್ರಸಾದ ಕೊಡುತ್ತೇವೆ ಅಂತ ವಂಚಕರು ಭಕ್ತರಿಗೆ ಮೋಸ ಮಾಡಿದ್ದಾರೆ. ಅತ್ತ ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಗಾಣಗಾಪುರದ (Ganagapur) ದತ್ತಾತ್ರೇಯ ದೇಗುಲದಲ್ಲಿ ಅರ್ಚಕರೇ ನಕಲಿ ವೆಬ್‌ಸೈಟ್ (Website) ತೆಗೆದು 20 ಕೋಟಿ ವಂಚಿಸಿದ್ದಾರೆ.

ಮಂತ್ರಾಲಯದಲ್ಲಿ ಪರಿಮಳ ಪ್ರಸಾದದ ಹೆಸರಲ್ಲಿ ವಂಚನೆ

ಮಂತ್ರಾಲಯದ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದದ ಹೆಸರಲ್ಲಿ ಮಹಾ ವಂಚನೆ ನಡೆದಿದೆ. ವಂಚಕರು ರಾಯರ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದು, ಪರಿಮಳ ಪ್ರಸಾದ ತಲುಪಿಸುತ್ತೇವೆ ಅಂತ ಭಕ್ತರಿಂದ ಆನ್‌ಲೈನ್‌ನಲ್ಲಿ ಹಣ ವಸೂಲಿ ಮಾಡಿ ವಂಚಿಸಿದ್ದಾರೆ.ಅರ್ಚಕರ ಹೆಸರಲ್ಲಿ ವಂಚಿಸಿದ್ದ ಇಬ್ಬರ ಬಂಧನ

ಇವಿಷ್ಟೇ ಅಲ್ಲದೇ ಅರ್ಚಕರು, ಮಠದ ಸಿಬ್ಬಂದಿ ಕರೊನಾದಿಂದ ಸಂಕಷ್ಟದಲ್ಲಿ ಇದ್ದಾರೆ ಅಂತ ವಂಚಕರು ಹೇಳಿದ್ದಾರೆ. ಅವರ ಆರ್ಥಿಕ ಸಹಾಯ ನೀಡಲು ದೇಣಿಗೆ ನೀಡಿ ಅಂತ ಹೇಳಿ ಭಕ್ತರಿಂದ ದೇಣಿಗೆ ಪಡೆದಿದ್ದಾರೆ. ಈ ಬಗ್ಗೆ ಭಕ್ತರೊಬ್ಬರು ಮಠಕ್ಕೆ ಇಮೇಲ್ ಮೂಲಕ ತಿಳಿಸಿದ ನಂತರ ಮಹಾ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Yellamma Devi: ಮಾಟ ಮಾಡಿದವರಿಗೆ ಶಿಕ್ಷೆ ಕೊಟ್ರೆ 50,001 ರೂಪಾಯಿ ಹುಂಡಿಗೆ ಹಾಕ್ತೀನಿ! ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ಗಾಣಗಾಪುರದಲ್ಲಿ ಅರ್ಚಕರಿಂದಲೇ ದೋಖಾ

ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ದೇವಸ್ಥಾನದ ಅರ್ಚಕರ ಗುಂಪೊಂದು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಪಡೆದು, ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ.

ನಕಲಿ ವೆಬ್‌ಸೈಟ್ ರಚಿಸಿ ದೋಖಾ

ದತ್ತಾತ್ರೇಯ ದೇವಸ್ಥಾನ, ಗಾಣಗಾಪುರ ದತ್ತಾತ್ರೇಯ ದೇವಸ್ಥಾನ, ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನ ಮುಂತಾದ ಎಂಟು ನಕಲಿ ವೆಬ್‌ಸೈಟ್‌ಗಳನ್ನು ಅರ್ಚಕರು ರಚಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ 20 ಕೋಟಿ ರೂಪಾಯಿ ಶುಲ್ಕ ಮತ್ತು ದೇಣಿಗೆ ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಗುಲದಲ್ಲಿ ವಿವಿಧ ಪೂಜೆಗಳು ಮತ್ತು ಇತರ ಆಚರಣೆಗಳನ್ನು ನಡೆಸಲು ಅವರು 10,000 ರೂಪಾಯಿಗಳಿಂದ 50,000 ರೂಪಾಯಿ ಹಣವನ್ನು ಭಕ್ತರಿಂದ ವಸೂಲಿ ಮಾಡಿದ್ದಾರಂತೆ. ಅದು ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಿದೆ ಅಂತ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Tree Ganesha: ಕಾಫಿನಾಡಿನ ಈಚಲು ಮರದಲ್ಲಿ ಗಣೇಶನ ದರ್ಶನ; ವಿಸ್ಮಯ ನೋಡಲು ಮುಗಿಬಿದ್ದ ಜನ

ಜಿಲ್ಲಾಧಿಕಾರಿಗಳಿಂದ ಬೆಳಕಿಗೆ ಬಂದ ಪ್ರಕರಣ

ದೇವಸ್ಥಾನವು ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ ಇದರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಗುರುಕರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಲೆಕ್ಕ ಪರಿಶೋಧನಾ ಸಭೆಯಲ್ಲಿ ವಂಚನೆ ಬೆಳಕಿಗೆ ಬಂದಿದ್ದು, ನಂತರ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ್ ರಾಥೋಡ್ ಅವರಿಗೆ ಸೂಚಿಸಿದ್ದಾರೆ.
Published by:Annappa Achari
First published: