Karnataka High Court: 3 ದಿನಕ್ಕೆ ಇಳಿಕೆಯಾದ 2 ವರ್ಷದ ಶಿಕ್ಷೆ; ಕರುಣೆ ತೋರಿದ ಹೈಕೋರ್ಟ್

ಹೈಕೋರ್ಟ್‌

ಹೈಕೋರ್ಟ್‌

ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಜೆಎಂಎಫ್​ಸಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಮಾರ್ಪಾಡು ಮಾಡಿ ಆದೇಶ ನೀಡಿದೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: 2008ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ (Assault Case) ನಡೆಸಿ ಎರಡು ವರ್ಷ ಶಿಕ್ಷೆಗೆ ಗುರಿಯಾಗಿದ್ದ 81 ವರ್ಷದ ವೃದ್ಧನಿಗೆ (81 Yeal Old Man) ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) ಕರುಣೆ ತೋರಿದೆ. ಎರಡು ವರ್ಷಗಳ ಶಿಕ್ಷೆಯನ್ನು ಮೂರು ದಿನಕ್ಕೆ ಇಳಿಸಿ ನ್ಯಾಯಾಲಯ ತೀರ್ಪು (Court Order) ನೀಡಿದೆ. ಶಿಕ್ಷೆ ಪ್ರಮಾಣ ಇಳಿಕೆ ಮಾಡಿರುವ ನ್ಯಾಯಾಲಯ ಒಂದು ವರ್ಷ ಅಂಗನವಾಡಿಯಲ್ಲಿ (Anaganawadi) ಸಂಬಳರಹಿತ ಸೇವೆ ಸಲ್ಲಿಸುವಂತೆ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಬಂಟ್ವಾಳದ (Bantwal) ಕರೋಪಾಡಿಯ ಐತಪ್ಪ ನಾಯ್ಕ್ ಎಂಬವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ.ಆರ್.ನಟರಾಜ್ ಅವರ ಏಕಸದಸ್ಯ ಪೀಠ ಕರೋಪಾಡಿಯ ಐತಪ್ಪ ನಾಯ್ಕ್ ಅವರ ಅರ್ಜಿಯನ್ನು ಪುರಸ್ಕರಿಸಿ ಶಿಕ್ಷೆಯ ಪ್ರಮಾಣ ಇಳಿಕೆ ಮಾಡಿದೆ.


ಅರ್ಜಿದಾರ ಕರೋಪಾಡಿಯ ಐತಪ್ಪ ನಾಯ್ಕ್ ಪರ ವಾದ ಮಂಡಿಸಿದ ವಕೀಲ ದಿನೇಶ್ ಕುಮಾರ್,  ನಮ್ಮ ಅರ್ಜಿದಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ನ್ಯಾಯಾಲಯ ಆದೇಶದನ್ವಯ ಮೂರು ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅರ್ಜಿದಾರರಿಗೆ 81 ವರ್ಷ ಆಗಿದ್ದು, ಮಕ್ಕಳು ಸಹ ಇಲ್ಲ. ವಯಸ್ಸಾದ ಪತ್ನಿಯ ಆರೈಕೆಯನ್ನು ಅರ್ಜಿದಾರರೇ ಮಾಡಬೇಕಿದೆ. ಹೀಗಾಗಿ, ಅರ್ಜಿದಾರರ ಮನವಿ ಪರಿಗಣಿಸಿ ಶಿಕ್ಷೆ ಮಾರ್ಪಾಡು ಮಾಡಬೇಕು ಎಂದು ಕೋರಿದ್ದರು.


ಶಿಕ್ಷೆಯ ಮಾರ್ಪಾಡು


ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಜೆಎಂಎಫ್​ಸಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಮಾರ್ಪಾಡು ಮಾಡಿ ಆದೇಶ ನೀಡಿದೆ. ಜೆಎಂಎಫ್​ಸಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ 2012 ಜುಲೈ 7ರಂದು ತನ್ನ ತೀರ್ಪನ್ನು ನೀಡಿತ್ತು.


2 years sentence reduced to 3 days high court showed mercy to convict mrq
ಕರ್ನಾಟಕ ಉಚ್ಛ ನ್ಯಾಯಾಲಯ


ಈಗಾಗಲೇ ಮೂರು ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸಿರುವ ಅರ್ಜಿದಾರ 2024 ಫೆಬ್ರವರಿ 24ರವರೆಗೆ ಮಿತನಡ್ಕ ಅಂಗನವಾಡಿಯಲ್ಲಿ ಸಂಬಳರಹಿತವಾಗಿ ಸಮುದಾಯ ಸೇವೆ ಸಲ್ಲಿಸಬೇಕಿದೆ.


ನಾಳೆ ಕರ್ನಾಟಕಕ್ಕೆ ಮೋದಿ ಆಗಮನ


ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದಲ್ಲಿ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ. ಸುಮಾರು 8 ಕಿಲೋ ಮೀಟರ್​ ರೋಡ್‌ ಶೋ ಮುಗಿಸಿ, ಶಿವಮೊಗ್ಗಕ್ಕೆ ತೆರಳಿ ಏರ್‌ಪೋರ್ಟ್ ಉದ್ಘಾಟನೆ ಮಾಡ್ತಾರೆ.




ವಿಶೇಷವೆಂದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಏರ್​ಪೋರ್ಟ್ ಉದ್ಘಾಟನೆ ಆಗುತ್ತಿದೆ. ಮತ್ತೆ ಮಾರ್ಚ್ 11ಕ್ಕೆ ಮೋದಿ ಮದ್ದೂರಿಗೆ ಆಗಮಿಸಲಿದ್ದಾರೆ. ಮದ್ದೂರಿನ ಗೆಜ್ಜಲಗೆರೆ ಬಳಿ ನಡೆಯಲಿರೋ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಮಂಡ್ಯ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ.


ಇದನ್ನೂ ಓದಿ:  Sumalatha Ambareesh: ಪ್ರಧಾನಿ ಮೋದಿ ಸಮ್ಮುಖದಲ್ಲಿ ಕಮಲ ಬಾವುಟ ಹಿಡಿತಾರಾ ಸುಮಲತಾ ಅಂಬರೀಶ್?


ಸಾಮಾನ್ಯ ನಾಗರಿಕರಿಂದ ಸ್ವಾಗತ


ನಾಳೆ ಬೆಳಗಾವಿಯಲ್ಲಿ ಪ್ರಧಾನಿಯನ್ನು ಸ್ವಾಗತಿಸಲು ಸಾಮಾನ್ಯ ನಾಗರಿಕರಿಗೆ ಅವಕಾಶ ನೀಡಲಾಗಿದೆ. ನೇಕಾರ, ಪೌರ ಕಾರ್ಮಿಕ ಮಹಿಳೆ, ಕೂಲಿ ಕಾರ್ಮಿಕ ಮಹಿಳೆ, ಆಟೋ ಚಾಲಕರು, ರೈತರಿಗೆ ಅವಕಾಶ ಕೊಡಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಐದು ಜನರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.


arrival of prime minister narendra modi 27th february 1st puc exam belagavi postponed
ನರೇಂದ್ರ ಮೋದಿ, ಪ್ರಧಾನ ಮಂತ್ರಿ


ಯಡಿಯೂರಪ್ಪ ಫುಲ್ ಖುಷ್


ನಾಳೆ ನನ್ನ ಜೀವನದಲ್ಲಿ ಮರೆಲಾಗದ ಕ್ಷಣ. ನರೇಂದ್ರ ಮೋದಿಯವರು ಆಗಮಿಸಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ. ಲಕ್ಷಾಂತರ ಜನರು ಈ ವಿಶೇಷ ಕ್ಷಣದಲ್ಲಿ ಭಾಗವಹಿಸಬೇಕು. ಇದು ಬೆಂಗಳೂರಿನ ನಂತರ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ. ಮೋದಿಯವರನ್ನು ಲೋಕಾರ್ಪಣೆ ಮಾಡಲು ಕರೆದಿದ್ವಿ. ಅವರು ನನ್ನ ಟ್ಟು ಹಬ್ಬದ ದಿನದಂದೇ ಬರುತ್ತೇನೆ ಎಂದಿದ್ದಾರೆ. ಅದು ನನಗೆ ಸಂತೋಷ ತಂದಿದೆ ಎಂದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು